ಹಾಡುವ ಆಸೆ ಹಾಡದು ಏಕೋ
ಹಾರುವ ಆಸೆ ಹಾರದು ಏಕೋ
ಎಲೆಗಳಲಿ ಮರೆಯಾಗಿ ಎಲ್ಲೋ ಅಡಗಿದೆ
ಕೋಗಿಲೆ ಮೂಕಾಗಿದೆ
ಹಾಡುವ ಆಸೆ ಹಾಡದು ಏಕೋ
ಹಾರುವ ಆಸೆ ಹಾರದು ಏಕೋ
ಎಲೆಗಳಲಿ ಮರೆಯಾಗಿ ಎಲ್ಲೋ ಅಡಗಿದೆ
ಕೋಗಿಲೆ ಮೂಕಾಗಿದೆ
ಹಾಡುವ ಆಸೆ ಹಾಡದು ಏಕೋ
ಹಾರುವ ಆಸೆ ಹಾರದು ಏಕೋ
ಎಲೆಗಳಲಿ ಮರೆಯಾಗಿ ಎಲ್ಲೋ ಅಡಗಿದೆ
ಕೋಗಿಲೆ ಮೂಕಾಗಿದೆ
ಚಳಿಯನು ತಾಳದೆ ನೆಮ್ಮದಿ ಇಲ್ಲದೆ
ಬಾಳುವ ದಾರಿಯೂ ಕಣ್ಣಿಗೆ ಕಾಣದೆ
ಹಾಡಲು ತೋರದೆ ಸೊರಗಿದೆ
ಇರುಳು ಜಾರದೇ ಹಗಲು ಮೂಡದೆ
ಬಯಸಿದ ಶಾಂತಿಯು ಬದುಕಲಿ ಬಾರದೆ
ಮತ್ತೆ ವಸಂತವು ಕುಣಿಸದೆ
ಚೆಲುವೆ ನೀನೇಕೆ ಬರೀ ಕನಸು ಕಾಣುತಲಿರುವೆ
ಹಾಡುವ ಆಸೆ ಹಾಡದು ಏಕೋ
ಹಾರುವ ಆಸೆ ಹಾರದು ಏಕೋ
ಎಲೆಗಳಲಿ ಮರೆಯಾಗಿ ಎಲ್ಲೋ ಅಡಗಿದೆ
ಕೋಗಿಲೆ ಮೂಕಾಗಿದೆ
ಹಾಡುವ ಆಸೆ ಹಾಡದು ಏಕೋ
ಹಾರುವ ಆಸೆ ಹಾರದು ಏಕೋ
ಎಲೆಗಳಲಿ ಮರೆಯಾಗಿ ಎಲ್ಲೋ ಅಡಗಿದೆ
ಕೋಗಿಲೆ ಮೂಕಾಗಿದೆ
ಬಯಕೆಯ ಹೂಗಳು ಬಾಡುತ ಹೋದರು
ವರವನು ದೇವರು ನೀಡದೆ ಹೋದರು
ನಗುತ ಬದುಕುವ ಜಾಣನು
ಬಾನಲಿ ಹಾರುತ ಕನಸನು ಕಾಣುತ
ಹೂವಿನ ಹಾಸಿಗೆ ಬಾಳಿದು ಎನ್ನುತ
ನಲಿದು ಕೋಗಿಲೆ ಹಾಡಿತೆ
ಸೊರಗಿ ದಿನ ಕೊರಗಿ ಉರಿ ಬಿಸಿಲಲಿ ಬೇಯಲಿ ಬೆಂಕಿ
ಹಾಡುವ ಆಸೆ ಹಾಡದು ಏಕೋ
ಹಾರುವ ಆಸೆ ಹಾರದು ಏಕೋ
ಎಲೆಗಳಲಿ ಮರೆಯಾಗಿ ಎಲ್ಲೋ ಅಡಗಿದೆ
ಕೋಗಿಲೆ ಮೂಕಾಗಿದೆ