ನಮ್ಮ ಗ್ರಾಮ ಪಂಚಾಯ್ತಿಗಳ ಹಲವು ವಿಷಯಗಳನ್ನು
ನಾವು ತಿಳಿದುಕೊಳ್ಳಬೇಕೆಂದರೆ ನಾವು ನಮ್ಮ ಗ್ರಾಮ ಪಂಚಾಯ್ತಿಯ ಕಚೇರಿಗಳಿಗೆ ಹೋಗಿ ತಿಳಿದುಕೊಳ್ಳಬೇಕಾಗುತ್ತದೆ
ಕೆಲವು ವಿಷಯಗಳನ್ನು ನಾವು ತಿಳಿದುಕೊಳ್ಳಬೇಕೆಂದರೂ ಹಲವು ಕಾರಣಗಳಿಂದ ತಿಳಿದುಕೊಳ್ಳಲು ಸಾಧ್ಯವಾಗುವುದಿಲ್ಲ.
ಆದರೆ ಈಗ ಗ್ರಾಮ ಪಂಚಾಯ್ತಿಯ ಯಾವುದೇ
ವಿಷಯವಾಗಲಿ ಆನ್ ಲೈನ್ ಮೂಲಕ ನಮ್ಮ ಮನೆಯಲ್ಲೇ ಕುಳಿತುಕೊಂಡು ನಮ್ಮ ಮೊಬೈಲ್ ನಲ್ಲೇ ನಮಗೆ ಬೇಕಾದ ವಿಷಯಗಳನ್ನು
ತಿಳಿದುಕೊಳ್ಳಬಹುದು.
ಹೇಗೆಂದರೆ ಕರ್ನಾಟಕ ಸರ್ಕಾರವು ಕರ್ನಾಟಕ
ರಾಜ್ಯದ ಎಲ್ಲಾ ಗ್ರಾಮ ಪಂಚಾಯತಿಗಳ ವಿವರಗಳನ್ನು ಪಂಚಮಿತ್ರ ವೆಬ್ ಸೈಟ್ ನಲ್ಲಿ ಕಾಲಕಾಲಕ್ಕೆ ಅಪ್ಡೇಟ್
ಮಾಡುತ್ತಿರುತ್ತಾರೆ.
1). ಯಾವ ವೆಬ್ ಸೈಟ್ ನಲ್ಲಿ ದೊರೆಯುತ್ತದೆ.?
ಕರ್ನಾಟಕ ಸರ್ಕಾರದ ಪಂಚಮಿತ್ರ
ವೆಬ್ ಸೈಟ್ http://panchamitra.kar.nic.in ರ ಮೂಲಕ ದೊರೆಯುತ್ತದೆ.
2). ಯಾವ ಯಾವ ಸೇವೆಗಳು ದೊರೆಯುತ್ತವೆ.?
·
ಸದಸ್ಯರು
ನಿಮ್ಮ ಗ್ರಾಮ ಪಂಚಾಯ್ತಿಯ ಸದಸ್ಯರುಗಳ ವಿವರಗಳನ್ನು ಇಲ್ಲಿ
ತಿಳಿಯಬಹುದು.
·
ಸೇವೆಗಳು
ನಿಮ್ಮ ಗ್ರಾಮ ಪಂಚಾಯ್ತಿಯಲ್ಲಿ ದೊರೆಯುವ ಸೇವೆಗಳು ಏನೆಂದು
ತಿಳಿಯಬಹುದು
·
ಯೋಜನೆಗಳು
ನಿಮ್ಮ ಗ್ರಾಮ ಪಂಚಾಯ್ತಿಯಲ್ಲಿ ಯಾವ ವರ್ಷ ಯಾವ ಯೋಜನೆ ಕೈಗೊಳ್ಳಲಾಗಿದೆ
ಎಂಬ ವರದಿ ತಿಳಿಯಬಹುದು
·
ಪ್ರಗತಿ ಕಾಮಗಾರಿಗಳು
ನಿಮ್ಮ ಗ್ರಾಮ ಪಂಚಾಯ್ತಿಯಲ್ಲಿ ಯಾವ ವರ್ಷ ಯಾವ ಕಾಮಗಾರಿ
ಕೈಗೊಳ್ಳಲಾಗಿದೆ ಎಂಬ ವರದಿ ತಿಳಿಯಬಹುದು
·
ಫಲಾನುಭವಿಗಳು
ನಿಮ್ಮ ಗ್ರಾಮ ಪಂಚಾಯ್ತಿಯ ಯಾವ ಫಲಾನುಭವಿ ಯಾವ ಸೌಲಭ್ಯವನ್ನು
ಪಡೆದುಕೊಂಡಿದ್ದಾರೆ ಎಂಬ ವಿವರವನ್ನು ಪಡೆಯಬಹುದು.
·
ನ.ರೇ.ಗಾ
ನ.ರೇ.ಗಾ ಕಾಮಗಾರಿಗಳ ವಿವರಗಳನ್ನು ಪಡೆಯಬಹುದು
·
ಅಧಿಕಾರಿಗಳು
ನಿಮ್ಮ ಗ್ರಾಮ ಪಂಚಾಯ್ತಿಯ ಅಧಿಕಾರಿಗಳ ವಿವರ ಮತ್ತು ಅವರ
ಮೊಬೈಲ್ ನಂಬರ್ ಅವರ ವಿಳಾಸವನ್ನು ಪಡೆಯಬಹುದು.
·
ಸಭಾ ನಡುವಳಿಕೆಗಳು
ಗ್ರಾಮ ಸಭೆ, ವಾರ್ಡ್ ಸಭೆ ವಿವರಗಳನ್ನು ತಿಳಿಯಬಹುದು.
·
ಆಸ್ತಿ ತೆರಿಗೆಗಳು
ನಿಮ್ಮ ಮನೆ ಯಾರ ಹೆಸರಿನಲ್ಲಿದೆ, ಕಂದಾಯ ಎಷ್ಟು ಬಾಕಿ ಇದೆ
ಎಂಬ ವಿವರ ತಿಳಿಯಬಹುದು
·
ಪಂಚಾಯತಿ ಆಸ್ತಿಗಳು
ನಿಮ್ಮ ಗ್ರಾಮ ಪಂಚಾಯ್ತಿಗೆ ಸೇರಿದ ಒಟ್ಟು ಆಸ್ತಿಯ ವಿವರ
ತಿಳಿಯಬಹುದು.
·
ಇ – ಸ್ವತ್ತು
ನಿಮ್ಮ ಆಸ್ತಿಗೆ ಸಂಬಂದಿಸಿದ ಇ – ಸ್ವತ್ತು ಪಡೆಯಬಹುದು.
3). ಪಂಚಮಿತ್ರ ವೆಬ್ ಸೈಟ್ ಹೇಗೆ ತೆರೆಯುವುದು.?
ಮೊದಲು ಪಂಚಮಿತ್ರ ವೆಬ್ ಸೈಟ್ http://panchamitra.kar.nic.in ನ್ನು ತೆರೆಯಬೇಕು
ಕರ್ನಾಟಕ ನಕ್ಷೆಯ ಮೇಲಿರುವ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡು ನಿಮ್ಮ ಜಿಲ್ಲೆಯ ಮೇಲೆ ಕ್ಲಿಕ್ ಮಾಡಬೇಕು.
ಈಗ ನಿಮಗೆ ಬೇಕಾದ ಮಾಹಿತಿಯನ್ನು ತಿಳಿದುಕೊಳ್ಳಬಹುದು, ಮೇಲೆ ತಿಳಿಸಿದಂತೆ ನಿಮಗೆ ಬೇಕಾದ ಸೇವೆಯನ್ನು ಪಡೆಯಬಹುದು.