ಚಿತ್ರ: ಎರಡು ಕನಸು
ಹೇ ಹೇ.ಹೇ… ಆ ಹಾ ಹಾ ಹಾ ..
ಓಹೋ ಹೋಹೋ ಲಾಲಲಲ
ಎಂದು ನಿನ್ನ ಸೇರುವೆ
ಎಂದು ನಿನ್ನ ನೋಡುವೆ
ಎಂದು ನಿನ್ನ ಸೇರುವೆ
ಎಂದು ನಿನ್ನ ನೋಡುವೆ
ನಿಜ ಹೇಳಲೇನು ನನ್ನ ಜೀವ ನೀನು
ನೂರಾರು ಬಯಕೆ ಆತುರ ತಂದಿದೆ
ನೂರಾರು ಕನಸು ಕಾತರ ತುಂಬಿದೆ
ಮುಗಿಲಿಗಾಗಿ ಬಾನು, ದುಂಬಿಗಾಗಿ ಜೇನು
ನನಗಾಗಿ ನೀನು, ನಿನಗಾಗಿ ನಾನು
ನನಗಾಗಿ ನೀನು, ನಿನಗಾಗಿ ನಾನು
♫♫♫♫♫♫♫♫♫♫♫
ಓಹೋ ಹೋ.. ಹೋ.. ಹೋ..
ತಣ್ಣನೆ ಗಾಳಿ ಹಿತ ತೋರದಲ್ಲ
ಕೋಗಿಲೆ ಗಾನ ಸುಖ ನೀಡದಲ್ಲ
ತಣ್ಣನೆ ಗಾಳಿ ಹಿತ ತೋರದಲ್ಲ
ಕೋಗಿಲೆ ಗಾನ ಸುಖ ನೀಡದಲ್ಲ
ಕಾಮನ ಬಿಲ್ಲಿಗೂ ಮನ ಸೋಲಲಿಲ್ಲ
ನಿನ್ನಯ ನೆನಪಲ್ಲೇ ಸೋತೆ ನಾನು
ನನ್ನಾಸೆ ನೀನು ನಿನ್ನಾಸೆ ನಾನು
ನನ್ನಾಸೆ ನೀನು ನಿನ್ನಾಸೆ ನಾನು
ಎಂದು ನಿನ್ನ ನೋಡುವೆ
ಎಂದು ನಿನ್ನ ಸೇರುವೆ
ನಿಜ ಹೇಳಲೇನು ನನ್ನ ಜೀವ ನೀನು
ನಿಜ ಹೇಳಲೇನು ನನ್ನ ಜೀವ ನೀನು
♫♫♫♫♫♫♫♫♫♫♫
ಕಣ್ಗಳ ಕಾಂತಿ ನೀನಾಗಿರುವೆ
ಮೈಮನವೆಲ್ಲಾ ನೀ ತುಂಬಿರುವೆ
ಕಣ್ಗಳ ಕಾಂತಿ ನೀನಾಗಿರುವೆ
ಮೈಮನವೆಲ್ಲಾ ನೀ ತುಂಬಿರುವೆ
ನನ್ನಿ ಬಾಳಿಗೆ ಬೆಳಕಾಗಿರುವೆ
ಜನುಮ ಜನುಮದ ಜೋಡಿ ನೀನು
ನನಗಾಗಿ ನೀನು ನಿನಗಾಗಿ ನಾನು..
ನನಗಾಗಿ ನೀನು ನಿನಗಾಗಿ ನಾನು..
ಎಂದು ನಿನ್ನ ನೋಡುವೆ
ಎಂದು ನಿನ್ನ ಸೇರುವೆ
ನಿಜ ಹೇಳಲೇನು ನನ್ನ ಜೀವ ನೀನು
ನಿಜ ಹೇಳಲೇನು ನನ್ನ ಜೀವ ನೀನು
ಓ ಹೋ …….ಹೋ ……..