Ee sanje yakagide Song Lyrics – Geleya Movie Song Lyrics – ಈ ಸಂಜೆ ಯಾಕಾಗಿದೆ ನೀನಿಲ್ಲದೆ

ಚಿತ್ರ: ಗೆಳೆಯ
ಸಂಜೆ ಯಾಕಾಗಿದೆ ನೀನಿಲ್ಲದೆ
ಸಂಜೆ ಯಾಕಾಗಿದೆ
ಸಂತೆ ಸಾಕಾಗಿದೆ ನೀನಿಲ್ಲದೆ
ಸಂತೆ ಸಾಕಾಗಿದೆ
ಏಕಾಂತವೆ ಆಲಾಪವು
ಏಕಾಂಗಿಯ ಸಲ್ಲಾಪವು
ಮೌನ ಬಿಸಿಯಾಗಿದೆಓಓಓ
ಮೌನ ಬಿಸಿಯಾಗಿದೆ
ಸಂಜೆ ಯಾಕಾಗಿದೆ ನೀನಿಲ್ಲದೆ
ಸಂಜೆ ಯಾಕಾಗಿದೆ
♫♫♫♫♫♫♫♫♫♫♫
ನೋವಿಗೆ ಕಿಡಿ ಸೋಕಿಸಿ
ಮಜ ನೋಡಿವೆ ತಾರಾಗಣ
ತಂಗಾಳಿಯ ಪಿಸುಮಾತಿಗೆ
ಯುಗವಾಗಿದೆ ನನ್ನ ಕ್ಷಣ
ನೆನಪೆಲ್ಲವು.. ಹೂವಾಗಿದೆ
ಮೈಯೆಲ್ಲವೂ.. ಮುಳ್ಳಾಗಿದೆ
ಜೀವ ಕಸಿಯಾಗಿದೆ.. ಓಓಓ
ಜೀವ ಕಸಿಯಾಗಿದೆ
ಸಂಜೆ ಯಾಕಾಗಿದೆ ನೀನಿಲ್ಲದೆ
ಸಂಜೆ ಯಾಕಾಗಿದೆ
♫♫♫♫♫♫♫♫♫♫♫
ನೀನಿಲ್ಲದೆ ಚಂದಿರ
ಕಣ್ಣಲಿ ಕಸವಾಗಿದೆ
ಅದನೂದುವ ಉಸಿರಿಲ್ಲದೆ
ಬೆಳದಿಂಗಳು ಅಸು ನೀಗಿದೆ
ಆಕಾಶದಿ ಕಲೆಯಾಗಿದೆ
ಸಂಜೆಯ ಕೊಲೆಯಾಗಿದೆ
ಗಾಯ ಹಸಿಯಾಗಿದೆ.. ಏಏಏ
ಗಾಯ ಹಸಿಯಾಗಿದೆ
ಸಂಜೆ ಯಾಕಾಗಿದೆ ನೀನಿಲ್ಲದೆ
ಸಂಜೆ ಯಾಕಾಗಿದೆ
ಸಂತೆ ಸಾಕಾಗಿದೆ ನೀನಿಲ್ಲದೆ
ಸಂತೆ ಸಾಕಾಗಿದೆ
ಏಕಾಂತವೆ ಆಲಾಪವು
ಏಕಾಂಗಿಯ ಸಲ್ಲಾಪವು
ಮೌನ ಬಿಸಿಯಾಗಿದೆ.. ಓಓಓ
ಮೌನ ಬಿಸಿಯಾಗಿದೆ
ಸಂಜೆ ಯಾಕಾಗಿದೆ ನೀನಿಲ್ಲದೆ
ಸಂಜೆ ಯಾಕಾಗಿದೆ

Ee sanje yakagide Song Karaoke with Lyrics By PK Music

 

Leave a Reply

Your email address will not be published. Required fields are marked *