ಚಿತ್ರ: ಒಂದೇ ಗುರಿ
ಆಆಆ……
ಹ… ಆ ಆ ಆ ಆ…..
ಆ ಆ ಆ…….
ಈ ಭಾವಗೀತೆ ನಿನಗಾಗಿ ಹಾಡಿದೆ
ಅನುರಾಗ ನನ್ನನು ಕವಿಯಾಗಿ ಮಾಡಿದೆ
ಈ ಭಾವಗೀತೆ ನಿನಗಾಗಿ ಹಾಡಿದೆ
ಈ ಭಾವಗೀತೆ ನಿನಗಾಗಿ ಹಾಡಿದೆ
♫♫♫♫♫♫♫♫♫♫♫
♫
♫
ಬಳ್ಳಿಯಲಿ ಹೂವು ತುಂಬಿ
ಮರಗಳಲಿ ಜೀವ ತುಂಬಿ
ಎಲ್ಲೆಲ್ಲಿ ನೋಡಿದರಲ್ಲಿ
ಹೊಸ ಹಸಿರು ತುಂಬಿದೇ..
ಹಾಡುತಿರೆ ದುಂಬಿಗಳೆಲ್ಲ
ಹಾರುತಿರೆ ಹಕ್ಕಿಗಳೆಲ್ಲ
ತೋಳಿಂದ ನನ್ನನು ಬಳಸಿ
ನೀ ಸನಿಹ ನಿಂತಿರೆ
ನಿನ್ನ ಅಂದ ಕಂಡು ಸಂತೋಷಗೊಂಡು
ಹೊಸ ಭಾವ ಮೂಡಲು……
ಈ ಭಾವಗೀತೆ ನಿನಗಾಗಿ ಹಾಡಿದೆ
ಈ ಭಾವಗೀತೆ ನಿನಗಾಗಿ ಹಾಡಿದೆ
♫♫♫♫♫♫♫♫♫♫♫
♫
♫
ಕಣ್ಣಿನಲಿ ರೂಪ ತುಂಬಿ
ಮನಸಿನಲಿ ಪ್ರೇಮ ತುಂಬಿ
ನನ್ನೆದೆಯ ವೀಣೆಯ ಮೀಟಿ
ಹೊಸ ನಾದ ತುಂಬಿದೆ
ಆಸೆಗಳ ತಂದು ತುಂಬಿ
ಮೋಹವನು ತುಂಬಿ ತುಂಬಿ
ನೂರಾರು ಕನಸುಗಳನ್ನು ಬಾಳಲ್ಲಿ ತುಂಬಿದೆ
ಹೀಗೇಕೆ ಹೀಗೆ ನೀ ಮೌನವಾದೆ
ಕಾರಣ ಹೇಳದೇ……
ಈ ಭಾವಗೀತೆ ನಿನಗಾಗಿ ಹಾಡಿದೆ
ಅನುರಾಗ ನನ್ನನು ಕವಿಯಾಗಿ ಮಾಡಿದೆ
ಈ ಭಾವಗೀತೆ ನಿನಗಾಗಿ ಹಾಡಿದೆ
ಈ ಭಾವ ಗೀತೇ ನಿನಗಾಗಿ ಹಾಡಿದೆ
ನಿನಗಾಗಿ ಹಾಡಿದೆ….