ಏನೋ ಹೇಳಬೇಕು – Yeno Helabeku ande Song Lyrics in Kannada – Maleyali Jotheyali Kannada Movie
ಚಿತ್ರ: ಮಳೆಯಲಿ ಜೊತೆಯಲಿ ಗಾಯಕ: ಸೋನು ನಿಗಮ್ ಏನೋ ಹೇಳಬೇಕು ಅಂದೆ ಏನದು ಬೇಗ ಹೇಳು ಯಾರು ಕೇಳಬಾರದು ಸಾಕಾಯಿತು ಇನ್ನು ಕಾದು ಮನಸಿನ ಪರಿಚಯ ಕನಿಸಿನ ವಿನಿಮಯ ಮೆಲ್ಲಗೇ ನಡೆದಿದೆ ಕಾಣಲಾರೆಯಾ ನಾ ನೋಡು ಹೀಗಾದೆ ನೀ ಬಂದ ತರುವಾಯ ನೀ ಹೀಗೆ ಕಾಡಿದರೆ ನಾನಂತು ನಿರುಪಾಯ ♫♫♫♫♫♫♫♫♫♫♫♫ ಹೆಚ್ಚು ಕಡಿಮೆ ನಾನೀಗ ಹುಚ್ಚನಾಗಿ ಹೋದಂತೆ ಹಚ್ಚಿಕೊಂಡ ಮೇಲೆ ನಿನ್ನಾ ಕಷ್ಟವಾದರೇನಂತೆ ಸ್ಪಷ್ಟವಾಗಿ ಕೂಗು ಇಷ್ಟ ಬಂದ ಹಾಗೆ ನನ್ನಾ ಈಗ ಮೂಡಿದ ಪ್ರೇಮಗೀತೆಗೆ ನೀನೆ ಸುಂದರ ಶೀರ್ಷಿಕೆ ಆದೆಯಾ ನನ್ನೆಲ್ಲ ಭಾವಗಳು ನಿನಗೆಂದೇ ಉಳಿತಾಯ ಅದ ನೀನೆ ದೋಚಿದರೆ ನಾನಂತು ನಿರುಪಾಯ ಏನೋ ಹೇಳಬೇಕು ಅಂದೆ ಏನದು ಬೇಗ ಹೇಳು ಯಾರು ಕೇಳಬಾರದು ಸಾಕಾಯಿತು ನಿನ್ನ ಕಾದು ♫♫♫♫♫♫♫♫♫♫♫♫ ಅಂದ ಹಾಗೆ ಹೀಗೆಲ್ಲಾ ಎಂದು ಕೂಡ ನನ್ನಲ್ಲಿ ಅಂದುಕೊಂಡೆ ಇಲ್ಲ ನಾನೂ ಸನ್ನೆಯಲ್ಲಿ ಏನೇನೋ ಅನ್ನುವಾಗ ನೀನೆ ಇನ್ನು ಇಲ್ಲ ಬಾಕಿ ಏನೂ ನಿನ್ನ ಕಣ್ಣಿನಾ ಮಿಂಚು ಕಲಿಸಿದೇ ಸೀದಾ ಜೀವಕೆ ನಾಟುವ ಭಾಷೆಯಾ ದಿನ ರಾತ್ರಿ ನನಗೀಗ ಕನಸಲ್ಲೇ ವ್ಯವಸಾಯ ದಿನಗೂಲಿ ನೀಡುವೆಯಾ ನಾನಂತು ನಿರುಪಾಯ ಮಾತಬೇಡ ನೀನು ಈ ಕ್ಷಣ ಪ್ರೀತಿಯಲ್ಲಿ ಬೀಳುವಾಗ ಈ ಮನ ಮಾತಾಡಲಿ ನನ್ನ ಮೌನ ಮನಸಿನ ಪರಿಚಯ ಕನಸಿನ ವಿನಿಮಯ ಮೆಲ್ಲಗೇ ನಡೆದಿದೆ ನೀನು ಕಾಣೆಯಾ ನಾ ನೋಡು ಹೀಗಾದೆ ನೀ ಬಂದ ತರುವಾಯ…