banna bannada hoove song Lyrics – Maatad maatatadu mallige Songs Lyrics – ಬಣ್ಣ ಬಣ್ಣದ ಹೂವೆ

Movie – Mathad Mathadu Mallige
Starring – Vishnuvardhan, Suhasini, Sudeep
Song Name – Banna Bannada
Singer – S P Balasubramanyam,Shreya Ghoshal
Lyrics – Nagathihalli Chandrashekar
Music – Manomurthy


ಮಾತಾಡ್ ಮಾತಾಡು ಮಲ್ಲಿಗೆ ಸಂಪಿಗೆ ಸೇವಂತಿಗೆ
ಮಾತಾಡ್ ಮಾತಾಡು ಮಲ್ಲಿಗೆ
ಬಣ್ಣ ಬಣ್ಣದ ಹೂವೆ ಬಾರೆ ಹೂವಿನ ತೇರೆ
ಹೂವೆ ನಾಚುವ ಹೆಣ್ಣೆ ನನ್ನ ಬಾಳಿನ ಕಣ್ಣೆ
ಬಿಂಕ ಬಿನ್ನಾಣದೋಳೆ ಕೊಂಕು ವಯ್ಯಾರದೋಳೆ
ಜಾಣೆ ಜಾಗರ ದಿಣ್ಣೆ ಬೇಕೇ ಮಂಡ್ಯದ ಬೆಣ್ಣೆ
ತುಂಗ ನದಿಯ ದಂಡೆಲ್ ಏನಾಯ್ತೆ
                    
ತುಂಗ ನದಿಯ ದಂಡೆ ಗಂಡೆ ನಿನ್ನನ್ನ ಕಂಡೆ
ದುಂಡು ಮಲ್ಲಿಗೆ ದಂಡೆ ಕಂಡು ಮೆಲ್ಲಗೆ ಬಂದೆ
ದಂಡು ದಾಳಿಯ ತಂದೆ ಪ್ರೀತಿ ಸವಿಯ ಉಂಡೆ
ಬೆಳ್ಳಿ ತಂಬಿಗೆ ಅಲ್ಲಿ ತುಂಬಿ ಪನ್ನೀರ ಧಾರೆ
ಬೆಲ್ಲದಾರತಿಯ ಬೆಳಗಿದೆನೋ
ನಿನ್ನ ಕಣ್ಣಲ್ಲಿ ಎಂತ ಕಾರುಣ್ಯ
ನಿನ್ನ ಮಾತಲ್ಲಿ ಜೇನ ಮಾಧುರ್ಯ
ಇದು ಯಾವ ಜನುಮದ ಯಾಚನೆ
ನಿನ್ನ ಸಂತೋಷ ನನ್ನ ಸಂತೋಷ
ನಿನ್ನ ಆನಂದ ನನ್ನ ಆನಂದ
ಇದು ಎಲ್ಲ ಜನುಮದ ಬೇಡಿಕೆ
ಈ ಘಳಿಗೆಯೇ ಶುಭ ಘಳಿಗೆ
ಈ ಯೋಗವೇ ಶುಭ ಯೋಗ
ನಮ್ಮ ಬಾಳಿನ ಶುಭ ಕಾಲ
ಇದೆ ನನ್ನ ಜೀವದ ಹರಕೆ
ಬಣ್ಣ ಬಣ್ಣದ ಹೂವೆ ಬಾರೆ ಹೂವಿನ ತೇರೆ
ಹೂವೆ ನಾಚುವ ಹೆಣ್ಣೆ ನನ್ನ ಬಾಳಿನ ಕಣ್ಣೆ
ಬಿಂಕ ಬಿನ್ನಾಣದೋಳೆ ಕೊಂಕು ವೈಯ್ಯಾರದೋಳೆ
ಬೆಳ್ಳಿ ತಂಬಿಗೆ ಅಲ್ಲಿ ತುಂಬಿ ಪನ್ನೀರ ಧಾರೆ
ಬೆಲ್ಲದಾರತಿಯ ಬೆಳಗಿದೆನೋ
ಓಹೋ.. ಆ ಬಂಧನ ಇದು ಈ ಬಂಧನ
ಬಣ್ಣಗಳೆದುರಲ್ಲಿ ಪ್ರೇಮ ಸ್ಪಂದನ
ಇದು ಪೂರ್ವ ಜನುಮದ ಸಾಧನೆ
ನನ್ನ ಕೊರಳಲ್ಲಿ ಮುತ್ತಿನ ಹಾರವು
ನೀ ಬೆಳಗಿದ ಸುಪ್ರಭಾತವು
ಇದು ಪೂರ್ವ ಜನುಮದ ಪ್ರಾರ್ಥನೆ
ಈ ಹೂವಿನಂತೆ ಚಿರಕಾಲ
ನೀನು ನಗುತಿರಲು ಅನುಗಾಲ
ನಿನ್ನ ಬಾಳಿನಲಿ ಸುಖವಿರಲಿ
ಇದೆ ನನ್ನ ಜೀವದ ಹರಕೆ
ಬಣ್ಣ ಬಣ್ಣದ ಹೂವೆ ಬಾರೆ ಹೂವಿನ ತೇರೆ
ಹೂವೆ ನಾಚುವ ಹೆಣ್ಣೆ ನನ್ನ ಬಾಳಿನ ಕಣ್ಣೆ
ಬಿಂಕ ಬಿನ್ನಾಣದೋಳೆ ಕೊಂಕು ವಯ್ಯಾರದೋಳೆ
ಜಾಣೆ ಜಾಗರ ಹೆಣ್ಣೆ ಬೇಕೇ ಮಂಡ್ಯ ದ ಬೆಣ್ಣೆ
ತುಂಗ ನದಿಯ ದಂಡೆಲ್ ಏನಾಯ್ತೆ
                    
ತುಂಗ ನದಿಯ ದಂಡೆ ಗಂಡೆ ನಿನ್ನನ್ನ ಕಂಡೆ
ದುಂಡು ಮಲ್ಲಿಗೆ ದಂಡೆ ಕಂಡು ಮೆಲ್ಲಗೆ ಬಂದೆ
ದಂಡು ದಾಳಿಯ ತಂದೆ ಪ್ರೀತಿ ಸವಿಯ ಉಂಡೆ
ಬೆಳ್ಳಿ ತಂಬಿಗೆ ಅಲ್ಲಿ ತುಂಬಿ ಪನ್ನೀರ ಧಾರೆ
ಬೆಲ್ಲದಾರತಿಯ ಬೆಳಗಿದೆನೋ

Leave a Reply

Your email address will not be published. Required fields are marked *