PK-Music
ಸಾಹಿತ್ಯ :- ಅಶ್ವಿನಿ ಕೋಡಿಬೈಲು
ಸಂಗೀತ:- ರಾಘವೇಂದ್ರ ಬೀಜಾಡಿ
ಆರ್ಕೆಸ್ಟ್ರೇಶನ್:- ಸಮೀರ್ ರಾವ್
ಗಾಯನ :- ರಾಘವೇಂದ್ರ ಬೀಜಾಡಿ
ಬಂಧಿ ಏಕಾದೆ ಮನವೇ
ಬಂಧಿ ಏಕಾದೆ
ಬಂಧಿ ಏಕಾದೆ ಮನವೇ
ಬಂಧಿ ಏಕಾದೆ
ನೀ ಬಂಧಿ ಏಕಾದೆ ಮನವೇ
ಬಂಧಿ ಏಕಾದೆ
ಬಂಧಿ ಏಕಾದೆ ಮನವೇ
ಬಂಧಿ ಏಕಾದೆ
♬♬♬♬♬♬♬♬♬♬♬♬
321
ದೃಷ್ಟಿ ಇದ್ದೂ ಕುರುಡು ಆದೆ
ಮಾತು ಬಂದರು ಮೂಕವಾದೆ
ದೃಷ್ಟಿ ಇದ್ದೂ ಕುರುಡು ಆದೆ
ಮಾತು ಬಂದರು ಮೂಕವಾದೆ
ನಿನಗೆ ನೀನೇ ಕೋಳ ತೊಡಿಸಿ
ಬಂಧಿ ಏಕಾದೆ ಮನವೇ
ಬಣ್ಣವಿದ್ದು ಕಪ್ಪು ಕಂಡೆ
ಸಿಹಿಯು ಇರಲೂ ಕಹಿಯ ಉಂಡೆ
ಬಣ್ಣವಿದ್ದು ಕಪ್ಪು ಕಂಡೆ
ಸಿಹಿಯು ಇರಲೂ ಕಹಿಯ ಉಂಡೆ
ಸುಖವು ಇರಲು ಸವಿಯದೆ ನೀ
ಏಕೆ ಹೀಗಾದೆ ಮನವೇ
ಬಂಧಿ ಏಕಾದೆ ಮನವೇ
ಬಂಧಿ ಏಕಾದೆ ಮನವೇ
ಬಂಧಿ ಏಕಾದೆ
♬♬♬♬♬♬♬♬♬♬♬♬
321
ಉಣ್ಣಲಿರಲೂ ಸೊರಗಿ ಹೋದೆ
ಸೂರು ಇರಲೂ ಊರ ಅಲೆದೆ
ಉಣ್ಣಲಿರಲೂ ಸೊರಗಿ ಹೋದೆ
ಸೂರು ಇರಲೂ ಊರ ಅಲೆದೆ
ಗುರುವು ಇರಲು ಗುರಿಯ ಅರಿಯದೆ
ಮರೆಯಾದೆ ಮನವೇ ಎಲ್ಲಿ ಮರೆಯದೆ
ಸುಡುವ ಬಿಸಿಲಲು ನಡುಗಿ ಕುಳಿತೆ
ಕೊರೆವ ಚಳಿಯಲು ಬೆವರಿ ನಿಂತೆ
ಸುಡುವ ಬಿಸಿಲಲು ನಡುಗಿ ಕುಳಿತೆ
ಕೊರೆವ ಚಳಿಯಲು ಬೆವರಿ ನಿಂತೆ
ಸುರಿವ ಮಳೆಯಲು
ಕೊಡೆಯ ಹಿಡಿಯದೆ
ಎಲ್ಲಿ ಕಳೆದೋದೆ ಮನವೇ
ಬಂಧಿ ಏಕಾದೆ ಮನವೇ
ಬಂಧಿ ಏಕಾದೆ ಮನವೇ
ಬಂಧಿ ಏಕಾದೆ
♬♬♬♬♬♬♬♬♬♬♬♬
321
ನಲಿವಿನಲ್ಲೂ ನಗುವ ಮರೆತೆ
ಎಲ್ಲೆ ಹೋದರು ಬಿಡದು ಚಿಂತೆ
ನಲಿವಿನಲ್ಲೂ ನಗುವ ಮರೆತೆ
ಎಲ್ಲೆ ಹೋದರು ಬಿಡದು ಚಿಂತೆ
ನಿನ್ನ ಕೊಳೆಯನು ಹೊರಗೆ ಹಾಕದೆ
ಒಂಟಿ ಏಕಾದೆ ಮನವೇ
ಕೊರಗಿ ನೀನು ಕಮರಿಹೋದೆ
ಚಟವೆ ಇಲ್ಲದೆ ವ್ಯಸನಿಯಾದೆ
ಕೊರಗಿ ನೀನು ಕಮರಿಹೋದೆ
ಚಟವೆ ಇಲ್ಲದೆ ವ್ಯಸನಿಯಾದೆ
ನಿನ್ನ ನೀನು ಜಯಿಸಲಾರದೆ
ಏನು ಸಾಧಿಸಿದೆ ಮನವೇ
ಬಂಧಿ ಏಕಾದೆ ಮನವೇ
ಬಂಧಿ ಏಕಾದೆ ಮನವೇ
ಬಂಧಿ ಏಕಾದೆ
ಬಂಧಿ ಏಕಾದೆ ಮನವೇ
ಬಂಧಿ ಏಕಾದೆ
ಬಂಧಿ ಏಕಾದೆ
ಬಂಧಿ ಏಕಾದೆ
Bandi Yekaade Manave Song Lyrics