Movie – Mathad Mathadu Mallige
Starring – Vishnuvardhan, Suhasini, Sudeep
Song Name – Baro Nam Therige
Singer – Rajesh Krishnan,Nanditha,B Jayasri
Lyrics – Nagathihalli Chandrashekar
Music – Manomurthy
Starring – Vishnuvardhan, Suhasini, Sudeep
Song Name – Baro Nam Therige
Singer – Rajesh Krishnan,Nanditha,B Jayasri
Lyrics – Nagathihalli Chandrashekar
Music – Manomurthy
ಬಾರೋ ನಮ್ ತೇರಿಗೆ ಹೋಗೋನ
ಭಲಾರೆ… ಹತ್ತೂರೆ ಬಂತು
ಬಾರೋ ನಮ್ ತೇರಿಗೆ ಹೋಗೋನ
ಬಾರೇ ನಮ್ ತೇರಿಗೆ ಹೋಗೋನ ಭಲಾರೆ
ಹೊತ್ತೇರಿ ಬಂತು ಬಾರೇ ನಮ್ ತೇರಿಗೆ ಹೋಗೋನ
ಚೆಂಡ್ಹೂವ ತೇರು ಹೊಂಟೈತೆ
ನಮ್ಮ ಊರ ಮುಂದೆ ಚೆಂದಾದ ತೇರು ಹೊಂಟೈತೆ
ಮಲ್ಲಿಗೆ ತೇರು ಹೊಂಟೈತೆ
ನಮ್ ನದಿಯ ದಂಡೆ ಮಾಯಾದ ತೇರು ಹೊಂಟೈತೆ.
ಬಾರೋ ನಮ್ ತೇರಿಗೆ ಹೋಗೋನ
ಭಲಾರೆ… ಹತ್ತೂರೆ ಬಂತು
ಬಾರೋ ನಮ್ ತೇರಿಗೆ ಹೋಗೋನ
ಬಾರೇ ನಮ್ ತೇರಿಗೆ ಹೋಗೋನ ಭಲಾರೆ
ಹೊತ್ತೇರಿ ಬಂತು ಬಾರೇ ನಮ್ ತೇರಿಗೆ ಹೋಗೋನ
ಚಿನ್ನಾದ ರಥವಲ್ಲೋ ಅಣ್ಣಾ ಬೆಳ್ಳಿಯ ರಥವಲ್ಲೋ
ಅವ್ವಾಗೆ ಚಿನ್ನಾದ ರಥವಲ್ಲೋ ಅಣ್ಣಾ.. ಬೆಳ್ಳೀಯ ರಥವಲ್ಲೋ.. ಅಣ್ಣಾ
ಮಣ್ಣಾಗೆ ಬೆಳೆದು ಘಮ್ಮಾಲೆ ಅರಳಿ
ಸುಮ್ಮಾನೆ ಹೊದಿಕೆ ಅಮ್ಮಾನ ರಥಕ್ಕೆ
ಹೂವಿನ ಮಜ್ಜನವೋ ನಮ್ ತಾಯ್ಗೆ ಹೂವಿನ ಮಜ್ಜನವೋ
ಹೂವಿನ ಮಜ್ಜನವೋ ನಮ್ ತಾಯ್ಗೆ ಹೂವಿನ ಮಜ್ಜನವೋ
ಬಂತು ನಮ್ ತೇರು ಊರಿಗೆ
ಭಲಾರೆ ಸುತ್ತಾಡಿ ಬಂತು, ಬಂತು ನಮ್ ತೇರು ಊರಿಗೆ…
ಬಂತು ನಮ್ ತೇರು ಬೀದಿಗೆ
ಭಲ್ಹಾರೆ ಸುತ್ಹಾಕಿ ಬಂತು, ಬಂತು ನಮ್ ತೇರು ಬೀದಿಗೆ..
ನೆಲದಾಗೆ ಹರಿದಾಳೊ ಅವ್ವಾ.. ನದಿ ಮ್ಯಾಲೆ ನಡೆದಾಳೋ
ಬಲ್ಲಾರೆ ನೆಲದಾಗೆ ಹರಿದಾಳೊ ಅವ್ವಾ..
ನದಿ ಮ್ಯಾಲೆ ನಡೆದಾಳೋ ಅವ್ವಾ..
ದೋಗಾರ ಕಷ್ಟ, ನೂರು ಅನಿಷ್ಟ
ನೀಗವ್ವ ಅಂಬೆ ತಾಯೆ ಜಗದಾಂಬೆ
ಗಂಧಾದ ಓಕುಳಿಯೋ ನಮ್ ಅವ್ವಗೆ ಗಂಧಾದ ಓಕುಳಿಯೋ
ಗಂಧಾದ ಓಕುಳಿಯೋ ನಮ್ ಅವ್ವಗೆ ಗಂಧಾದ ಓಕುಳಿಯೋ
ತೇರು ನಮ್ ಊರು ಒಂದೆನೊ ಮುತ್ತಮ್ಮ
ನಾವೆಲ್ಲಾ ಒಂದು ತೇರು ನಮ್ ಊರು ಒಂದೆನೊ
ಊರು ನಮ್ ತೇರು ಒಂದೆನೇ ಒ ತಂಗಿ.
ನಮ್ಮೂರಿನ್ ತೇರು ತೇರು ನಮ್ ಹೂವಾ ತೇರು
ಚೆಂದಾದ ತೇರು ಬಂದಿತೋ ನಮ್ಮ ಊರ ಮುಂದೆ
ಚೆಂದಾದ ತೇರು ಬಂದಿತೋ
ಮಲ್ಲಿಗೆ ತೇರು ಹರಿಯಿತೋ ನಮ್ ಎದೆಯಾ ಒಳಗೆ
ಮಾಯಾದ ತೇರು ಹರಿಯಿತೋ
ತೇರು ನಮ್ಮ ಹೂವ ತೇರು ಭಲಾರೆ
ಎದೆಯ ಒಳಗೊಂದು ತೇರು ನಮ್ಮ ಹೂವ ತೇರು
ತೇರು ನಮ್ಮ ಹೂವ ತೇರು ಭಲಾರೆ
ಎದೆಯ ಒಳಗೊಂದು ತೇರು ನಮ್ಮ ಹೂವ ತೇರು