Baa nanna sangeetha Song Lyrics – Matte haaditu kogile songs Lyrics – ಬಾ ನನ್ನ ಸಂಗೀತ


ಬಾ ನನ್ನ ಸಂಗೀತ…
ಬಾ ನನ್ನ ಸಂಗೀತ..
ನಿನಗಾಗಿ ನನ್ನ ಸಂಗೀತ
ಸಂಗಾತಿ ನಿನಗಿಂದು ಶುಭಾಶಯ ಸಂಗೀತ
ಬಾ ನನ್ನ ಸಂಗೀತ
ನಿನಗಾಗಿ ನನ್ನ ಸಂಗೀತ
ಎಂದೆಂದೂ ಬದುಕಲ್ಲಿ ಸಂತೋಷವೇ ತುಂಬಲಿ
ಒಲವು ಹೂವಾಗಿ ಗೆಲುವು ಕಂಪಾಗಿ ಸುಖವೇ ತುಂಬಲಿ
ಆಆಆಆ..
ಮಾತಾಡೊ ಮಾತೆಲ್ಲ ಒಂದೊಂದು ಮುತ್ತಾಗಲಿ
ಚೆಲುವೆ ನನ್ನ ಸನಿಹ ನಿನಗೆಂದು ಹಿತವಾ ತೋರಲಿ
ನಗು ನಗುತ ನಾವು ದಿನವೂ ಸೇರಿ ನಲ್ಲೇ ಹೀಗೆ ನಲಿಯುವ
ಕನಸಲ್ಲಿ ತೇಲಾಡುವ, ಸವಿಗನಸಲ್ಲಿ ತೇಲಾಡುವ
ಬಾ ನನ್ನ ಸಂಗೀತ
ಬಾ ನನ್ನ ಸಂಗೀತ.. ನಿನಗಾಗಿ ನನ್ನ ಸಂಗೀತ
ಸಂಗಾತಿ ನಿನಗಿಂದು ಶುಭಾಶಯ ಸಂಗೀತ
ಬಾ ನನ್ನ ಸಂಗೀತ ನಿನಗಾಗಿ ನನ್ನ ಸಂಗೀತ
ಸಿಂಗಾರಿ ಬದುಕಲ್ಲಿ ಶೃಂಗಾರವೇ ತುಂಬಲಿ
ನನ್ನ ಬಂಗಾರಿ ನನ್ನ ವಯ್ಯಾರಿ ದಿನವೂ ನಲಿಯಲಿ
ನಿನ್ನಂಥ ಹೆಣ್ಣನ್ನು ಇನ್ನೆಲ್ಲಿ ನಾ ಕನಲಿ
ನಿನ್ನ ಸೌಂದರ್ಯ ಎಂದು ಹೀಗೇನೆ ನಯನ ಸೆಳೆಯಲಿ
ನಿನ್ನ ಕಂಡ ಮೇಲೆ ನನ್ನ ನಲ್ಲೇ ನೂರು ವರುಷ ಬದುಕುವ
ಹೊಸ ಆಸೆ ನನಗಾಗಿದೆ, ಈಗ ಹೊಸ ಆಸೆ ನನಗಾಗಿದೆ
ಬಾ ನನ್ನ ಸಂಗೀತ ಬಾ ನನ್ನ ಸಂಗೀತ
ನಿನಗಾಗಿ ನನ್ನ ಸಂಗೀತ
ಸಂಗಾತಿ ನಿನಗಿಂದು ಶುಭಾಶಯ
ಸಂಗೀತ..
ಬಾ ನನ್ನ ಸಂಗೀತ.. ನಿನಗಾಗಿ ನನ್ನ ಸಂಗೀತ..

Leave a Reply

Your email address will not be published. Required fields are marked *