Haleya Mane Ihudilli Song Lyrics in Kannada – Raghavendra Beejaadi Bhavageethe
ಸಾಹಿತ್ಯ:- ಸತೀಶ್ ಹೆಗಡೆ ಶಿರಸಿಸಂಗೀತ:- ರಾಘವೇಂದ್ರ ಬೀಜಾಡಿವಾದ್ಯವೃಂದ:- ಸಮೀರ್ ರಾವ್ಗಾಯಕ :-ರಾಘವೇಂದ್ರ ಬೀಜಾಡಿ ಹಳೆಯ ಮನೆ ಇಹುದಿಲ್ಲಿ ಹೊಸ ಜನರು ಬರುತಿಲ್ಲ ಖಾಲಿ ಕಾಣುತಲಿಹುದು ಹೊರ ಜಗುಲಿಯು ದೇವನೊಬ್ಬನೆ ತಾನು ಧ್ಯಾನಸ್ಥನಾಗಿಹನು ಧೂಳಿನಲಿ ಮುಳುಗುತಿಹುದಾ ಕೋಣೆಯು ಹಳೆಯ ಮನೆ ಇಹುದಿಲ್ಲ ಹೊಸ ಜನ ಬರುತಿಲ್ಲ ಖಾಲಿ ಕಾಣುತಲಿಹುದು ಹೊರ ಜಗುಲಿಯು ದೇವನೊಬ್ಬನೆ ತಾನು ಧ್ಯಾನಸ್ಥನಾಗಿಹನು ಧೂಳಿನಲಿ ಮುಳುಗುತಿಹುದಾ ಕೋಣೆಯು ♬♬♬♬♬♬♬♬♬♬♬♬ ಪಾತ್ರೆ ಪಗಡೆಯ ಸರಕು ಮನೆತುಂಬ ಕಾಣಿಸದು ಮೂರು ಮತ್ತೊಬ್ಬರಿಗೆ ಕಡಿಮೆ ಸಾಕು ಹಿತ್ತಲಿನ ದಾರಿಯಲಿ ಹಸಿ ಹುಲ್ಲು ಬೆಳೆದುಹುದು ಮನೆಯಲ್ಲಿ ಉಳಿದಿಲ್ಲ ಮುದ್ದು ಬೆಕ್ಕು ಮೆತ್ತಿ ಏರುವ ಏಣಿ…