Aralida aase manjina Song Lyrics – Suprabhata song Lyrics – ಅರಳಿದ ಆಸೆ ಮಂಜಿನ ಹೂವಾಯ್ತು

ಚಿತ್ರ: ಸುಪ್ರಭಾತ 
ಮ್ಯೂಸಿಕ್: ರಾಜನ್-ನಾಗೇಂದ್ರ
ಸಾಹಿತ್ಯ: ಚಿ. ಉದಯ ಶಂಕರ್
ಗಾಯಕರು: ಎಸ್. ಪೀ. ಬಾಲಸುಬ್ರಮಣ್ಯಂ, ಕೆ. ಎಸ್. ಚಿತ್ರ
ಅರಳಿದ ಆಸೆ ಮಂಜಿನ ಹೂವಾಯ್ತು
ಬಿಸಿಲಿನ ಬೇಗೆಯಲಿ ಕರಗಿ ನೀರಾಯಿತು
ಬಿಸಿಲಿನ ಬೇಗೆಯಲಿ ಕರಗಿ ನೀರಾಯಿತು
ಬದುಕು ಸಾಕಾಯಿತು
ಅರಳಿದ ಆಸೆ ಮಂಜಿನ ಹೂವಾಯ್ತು
ಬಿಸಿಲಿನ ಬೇಗೆಯಲಿ ಕರಗಿ ನೀರಾಯಿತು
ಬಿಸಿಲಿನ ಬೇಗೆಯಲಿ ಕರಗಿ ನೀರಾಯಿತು
ಬದುಕು ಸಾಕಾಯಿತು
ಅರಳಿದ ಆಸೆ ಮಂಜಿನ ಹೂವಾಯ್ತು
ಬಿಸಿಲಿನ ಬೇಗೆಯಲಿ ಕರಗಿ ನೀರಾಯಿತು
ಬಿಸಿಲಿನ ಬೇಗೆಯಲಿ ಕರಗಿ ನೀರಾಯಿತು
ಬದುಕು ಸಾಕಾಯಿತು
ಒಲವಿನ ಸವಿ ಕಾಣದೆ ಮದುವೆಯ ಮಾತಾಗದೇ
ಒಲವಿನ ಸವಿ ಕಾಣದೆ ಮದುವೆಯ ಮಾತಾಗದೇ
ಮಗುವಿನ ತಾಯಾದರೆ ಎಂದಿಗೂ ನೋವೇ
ಕಂದನ ನೀ ಕಾಣದೆ ಮುದ್ದಿನ ದನಿ ಕೇಳದೆ
ಕಂದನ ನೀ ಕಾಣದೆ ಮುದ್ದಿನ ದನಿ ಕೇಳದೆ
ಜೋಗುಳ ನೀ ಹಾಡದೆ ಏತಕೆ ನೀ ಅಳುವೇ
ಬಾಳಿನ ಸಂಗೀತವು ಶ್ರುತಿ ಸೇರದಾಯ್ತು
ಅರಳಿದ ಆಸೆ ಮಂಜಿನ ಹೂವಾಯ್ತು
ಬಿಸಿಲಿನ ಬೇಗೆಯಲಿ ಕರಗಿ ನೀರಾಯಿತು
ಬಿಸಿಲಿನ ಬೇಗೆಯಲಿ ಕರಗಿ ನೀರಾಯಿತು
ಹಾರುವ ಹಕ್ಕಿಯಂತೆ ಓಡುವ ಜಿಂಕೆಯಂತೆ
ಹಾರುವ ಹಕ್ಕಿಯಂತೆ ಓಡುವ ಜಿಂಕೆಯಂತೆ
ಹರುಷದಿ ನೀನಿರಲು ಸಡಗರವೇನು
ಬಳೆಗಳ ಸವಿ ನಾದಕೆ ಚೆಲುವೆಯ ಕುಡಿನೋಟಕೆ
ಬಳೆಗಳ ಸವಿ ನಾದಕೆ ಚೆಲುವೆಯ ಕುಡಿನೋಟಕೆ
ಕಂಗಳ ಮಿಲನಕೆ ಸೋತೆ ನೀನು
ಎಲ್ಲವೂ ಕನಸಾಯಿತು ಬಾಳು ಬರಿದಾಯಿತು
ಅರಳಿದ ಆಸೆ ಮಂಜಿನ ಹೂವಾಯ್ತು
ಬಿಸಿಲಿನ ಬೇಗೆಯಲಿ ಕರಗಿ ನೀರಾಯಿತು
ಬಿಸಿಲಿನ ಬೇಗೆಯಲಿ ಕರಗಿ ನೀರಾಯಿತು
ಬದುಕು ಸಾಕಾಯಿತು
ಅರಳಿದ ಆಸೆ ಮಂಜಿನ ಹೂವಾಯ್ತು
ಬಿಸಿಲಿನ ಬೇಗೆಯಲಿ ಕರಗಿ ನೀರಾಯಿತು

Leave a Reply

Your email address will not be published. Required fields are marked *