ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಬಹು ಮುಖ್ಯವಾದ ಗುರತಿನ ಚೀಟಿಗಳಾಗಿವೆ, ಸರ್ಕಾರದ ಯಾವುದೇ ಯೋಜನೆಗಳ ಲಾಭವನ್ನು ಪಡೆಯಬೇಕಾದರು ಈ ಗರುತಿನ ಚೀಟಿಗಳ ಅವಶ್ಯಕತೆ ಇದೆ. ಬ್ಯಾಂಕ್ ಖಾತೆ ತೆರೆಯಲು ಈ ಎರಡು ಗುರುತಿನ ಚೀಟಿಗಳು ಕಡ್ಡಾಯ. ಕೇಂದ್ರ ಸರ್ಕಾರದ ಆದೇಶದಂತೆ ಆಧಾರ್ ಮತ್ತು ಪಾನ್ ಕಾರ್ಡ್ ಜೋಡಣೆ ಈಗ ಕಡ್ಡಾಯವಾಗಿದೆ. ಆಧಾರ್ ಮತ್ತು ಪಾನ್ ಕಾರ್ಡ್ ಜೋಡಣೆ ಮಾಡಿಸದಿದ್ದಲ್ಲಿ ಸರ್ಕಾರ ದಂಡ ವಿಧಿಸುವ ಕಾರ್ಯಕ್ಕೆ ಮುಂದಾಗಿದೆ.
ಕೆಲವು ಜನರಿಗೆ ಆಧಾರ್ ಮತ್ತು ಪಾನ್ ಕಾರ್ಡ್ ಜೋಡಣೆ ಮಾಡಿಸುವ ಮನಸ್ಸಿದ್ದರೂ ಹೇಗೆ ಮಾಡಿಸುವುದು, ಎಲ್ಲಿ ಮಾಡಿಸುವದು ಎಂಬುದು ತಿಳಿದಿರುವುದಿಲ್ಲ. ಈಗ ಆಧಾರ್ ಮತ್ತು ಪಾನ್ ಕಾರ್ಡ್ ಜೋಡಣೆ ಮಾಡಿಸಲು ಎಲ್ಲೂ ಅಲೆಯಬೇಕಾಗಿಲ್ಲ ಬದಲಿಗೆ ನಿಮ್ಮ ಕೈಯಲ್ಲಿರುವ ಆಂಡ್ರಾಯ್ಡ್ ಫೋನ್ ನಿಂದಲೇ ಆಧಾರ್ ಮತ್ತು ಪಾನ್ ಕಾರ್ಡ್ ಜೋಡಣೆ ಮಾಡಬಹುದು. ಹೇಗೆ ಮಾಡುವುದು ಎಂಬುದನ್ನು ಈ ಕೆಳಗೆ ಹಂತ ಹಂತವಾಗಿ ವಿವರವಾಗಿ ಬರೆಯಲಾಗಿದೆ.
Check Status:
Step 1 : ಮೊದಲಿಗೆ ಆದಾಯ ತೆರಿಗೆ ಇಲಾಖೆಯ ಅಧೀಕೃತ ವೆಬ್ ಸೈಟ್ ಆದ https://www.incometax.gov.in ಲಿಂಕ್ ನ್ನು ತೆರೆಯಬೇಕು.
Step2 : ಒಂದು ವೇಳೆ ನಿಮ್ಮ ಆಧಾರ್ ಮತ್ತು ಪಾನ್ ಕಾರ್ಡ್ ಜೋಡಣೆ ಆಗಿರಬಹುದೆಂಬ ಅನುಮಾನವಿದ್ದರೆ ನೀವು ಸ್ಟೇಟಸ್ ಚೆಕ್ ಮಾಡಬಹುದು.
Step 3 : Status ಚೆಕ್ ಮಾಡಲು Know about your Aadhar PAN ಮೇಲೆ ಕ್ಲಿಕ್ ಮಾಡಿ.
Step 4 : ನಂತರ ನಿಮ್ಮ ಆಧಾರ್ ಮತ್ತು ಪಾನ್ ನಂಬರ್ ನ್ನು ನಮೂದಿಸಿ ಮತ್ತು View Link Aadhar Status ಮೇಲೆ ಕ್ಲಿಕ್ ಮಾಡಿ.
ಒಂದು ವೇಳೆ ಲಿಂಕ್ ಆಗದಿದ್ದಲ್ಲಿ ನೀವು ಲಿಂಕ್ ಮಾಡಬೇಕಾಗುತ್ತದೆ, ಲಿಂಕ್ ಮಾಡಲು ಕೆಳಗಿನ ಲೇಖನವನ್ನು ಅನುಸರಿಸಿ.
Link Aadhaar:
Step 1 : ಮೊದಲಿಗೆ ಆದಾಯ ತೆರಿಗೆ ಇಲಾಖೆಯ ಅಧೀಕೃತ ವೆಬ್ ಸೈಟ್ ಆದ https://www.incometax.gov.in ಲಿಂಕ್ ನ್ನು ತೆರೆಯಬೇಕು.
Step 2 : ಆಧಾರ್ ಲಿಂಕ್ ಮಾಡಲು Link Aadhar with PAN ಮೇಲೆ ಕ್ಲಿಕ್ ಮಾಡಿ.