Nanna Haadu nannadu Song Lyrics – Suprabhata song Lyrics – ನನ್ನ ಹಾಡು ನನ್ನದು


ನನ್ನ ಹಾಡು ನನ್ನದು ನನ್ನ ರಾಗ ನನ್ನದು
ನನ್ನ ತಾಳ ನನ್ನದು ನನ್ನ ಆಸೆ ನನ್ನದು
ಎಲ್ಲೆಲ್ಲಿಯು… ಎಂದೆಂದಿಗು…
ಎಲ್ಲೆಲ್ಲಿಯು… ಎಂದೆಂದಿಗು…
ನನ್ನಂತೆ ನಾನು ಇರುವೆನು
ನುಡಿವೆನು, ನಡೆವೆನು, ದುಡಿವೆನು
ಈ… ಬಾಳಲಿ
ನನ್ನ ಹಾಡು ನನ್ನದು ನನ್ನ ರಾಗ ನನ್ನದು
ನನ್ನ ತಾಳ ನನ್ನದು ನನ್ನ ಆಸೆ ನನ್ನದು
ನೋಡು ನೀಲಿ ಬಾನಿಗೆ ಮೋಡ ಅಂದ ತಂದಿದೆ
ಹಕ್ಕಿ ಹಾಡಿ ಹಾರಾಡಿದೆ… ಹಾಯಾಗಿ ಆನಂದದೆ
ತಂಪು ಗಾಳಿ ಬೀಸಿದೆ ನದಿಯ ನೀರು ಓಡಿದೆ
ಹಸಿರು ಮೆತ್ತೆಯ ಹಾಸಿದೆ
ಲತೆಯಲ್ಲಿ ಹೂ ನಗುತಿದೆ
ಜಗದ ಸೊಬಗು ನನಗೆ ತಾನೆ..ಆಹ್..
ನನ್ನ ಹಾಡು ನನ್ನದು ನನ್ನ ರಾಗ ನನ್ನದು
ನನ್ನ ತಾಳ ನನ್ನದು ನನ್ನ ಆಸೆ ನನ್ನದು
ನೂರು ಜನರು ಬಂದರು ನೂರು ಜನರು ಹೋದರು
ನನಗೆ ನಾನೆ ಸಂಗಾತಿಯು.. ನಾನೆಂದು ಸುಖ ಜೀವಿಯು
ನೂರು ಜನರು ಬಂದರು ನೂರು ಜನರು ಹೋದರು
ನನಗೆ ನಾನೆ ಸಂಗಾತಿಯು ನಾನೆಂದು ಸುಖ ಜೀವಿಯು
ಉರಿವ ಬಿಸಿಲೆ ಬಂದರು ಗುಡುಗು ಮಳೆಯೆ ಸುರಿದರು
ನನಗೆ ಎಲ್ಲ ಸಂತೋಷವೆ ದಿನಕೊಂದು ಹೊಸ ನೋಟವೆ
ಹಗಲು ಇರುಳು ಸೊಗಸು ತಾನೆ.
ರಾಂಪ ಪಾಪಪಾಪಪ
ರೀರಿರಾರರಾರರಾ
ಎಲ್ಲೆಲ್ಲಿಯು… ಎಂದೆಂದಿಗು…
ಎಲ್ಲೆಲ್ಲಿಯು… ಎಂದೆಂದಿಗು…
ನನ್ನಂತೆ ನಾನು ಇರುವೆನು
ನುಡಿವೆನು ನಡೆವೆನು ದುಡಿವೆನು
ಈ… ಬಾಳಲಿ
ನನ್ನ ಹಾಡು ನನ್ನದು ನನ್ನ ರಾಗ ನನ್ನದು
ನನ್ನ ತಾಳ ನನ್ನದು ನನ್ನ ಆಸೆ ನನ್ನದು

Leave a Reply

Your email address will not be published. Required fields are marked *