Ee hrudaya haadide Song Lyrics – Suprabhata song Lyrics – ಈ ಹೃದಯ ಹಾಡಿದೆ


ಈ ಹೃದಯ ಹಾಡಿದೆ, ಆಸೆಗಳ ತಾಳದೆ
ಹುಡುಕುತ ನಿನ್ನ ಕೂಗಿದೆ
ಸುಮವೇ ನಿನಗಿನ್ನು ಕೇಳದೆ
ಈ ಹೃದಯ ಹಾಡಿದೆ, ಆಸೆಗಳ ತಾಳದೆ
ಹುಡುಕುತ ನಿನ್ನ ಕೂಗಿದೆ
ಸುಮವೇ ನಿನಗಿನ್ನು ಕೇಳದೆ
ಹುಡುಕುತ ನಿನ್ನ ಕೂಗಿದೆ
ಸುಮವೇ ನಿನಗಿನ್ನು ಕೇಳದೆ
ಕನಸು ಮನಸಲ್ಲಿ ಉಸಿರು ಉಸಿರಲ್ಲಿ
ನಿನ್ನ ಚಿಂತೆ ತುಂಬಿದೆ
ಕನಸು ಮನಸಲ್ಲಿ ಉಸಿರು ಉಸಿರಲ್ಲಿ
ನಿನ್ನ ಚಿಂತೆ ತುಂಬಿದೆ
ಗಾಳಿಯು ಬೀಸಲು ಭ್ರಮೆಯಿಂದ ಅಲೆದಾಡಿದೆ
ಹಗಲು ಇರುಳಾಗಿ ಇರುಳು ಹಗಲಾಗಿ
ದಿನರಾತ್ರಿ ಓಡಿದೆ
ಮರೆಯುವ ರೀತಿಯ ನನ್ನಾಣೆ ನಾ ಕಾಣದೆ
ನೆನಪು ಎದೆಯಲ್ಲಿ ತುಳುಕಾಡಿದೆ
ಈ ಹೃದಯ ಹಾಡಿದೆ ಆಸೆಗಳ ತಾಳದೆ
ಹುಡುಕುತ ನಿನ್ನ ಕೂಗಿದೆ
ಸುಮವೇ ನಿನಗಿನ್ನು ಕೇಳದೆ
ಈ ಹೃದಯ ಹಾಡಿದೆ ಆಸೆಗಳ ತಾಳದೆ
ಚಿಗುರು ಎಲೆಯಾಗಿ ಮೊಗ್ಗು ಹೂವಾಗಿ
ಋತು ಕಾಲ ಓಡಿದೆ
ಚಿಗುರು ಎಲೆಯಾಗಿ ಮೊಗ್ಗು ಹೂವಾಗಿ
ಋತು ಕಾಲ ಓಡಿದೆ
ತಡೆಯುವ ಶಕುತಿಯು ನಿನ್ನಾಣೆ ನನಗಿಲ್ಲವೇ
ಕಡಲು ಮುಗಿಲಾಗಿ ಮುಗಿಲು ಮಳೆಯಾಗಿ
ನದಿಯಾಗಿ ಓಡಿದೆ
ಬಯಕೆಯು ಮುಗಿಯದೆ ಸುಖ ಶಾಂತಿ
ನಾ ಕಾಣದೆ
ನಯನ ಕಣ್ಣೀರ ಹನಿಯಾಗಿದೆ
ಈ ಹೃದಯ ಹಾಡಿದೆ ಆಸೆಗಳ ತಾಳದೆ
ಹುಡುಕುತ ನಿನ್ನ ಕೂಗಿದೆ
ಸುಮವೇ ನಿನಗಿನ್ನು ಕೇಳದೆ
ಹುಡುಕುತ ನಿನ್ನ ಕೂಗಿದೆ
ಸುಮವೇ ನಿನಗಿನ್ನು ಕೇಳದೆ

Leave a Reply

Your email address will not be published. Required fields are marked *