Film: RAJANNANA MAGA
Music: RAVI BASRUR
Starcast: HARISH, AKSHATHA
Director: KOLAR SEENU
Producer: HARISH T. JALAGERE PVT LTD
Banner: UNIVERSEL HATTRIK COMBINES
Record Label: AANANDA AUDIO VIDEO
Music: RAVI BASRUR
Starcast: HARISH, AKSHATHA
Director: KOLAR SEENU
Producer: HARISH T. JALAGERE PVT LTD
Banner: UNIVERSEL HATTRIK COMBINES
Record Label: AANANDA AUDIO VIDEO
Singer: Vijay Prakash
ನಿನ್ನ ನಾನು ನೋಡಿದಾಗ ಕಳೆದು ಹೋದೆ
ಹಾಡು ಹಗಲೇ ಪ್ರೀತಿಯಲ್ಲಿ ಮುಳುಗಿ ಹೋದೆ
ನೀನು ನಕ್ಕಾಗಲೇ ಶುರುವಾಯುತು ಕಾಯಿಲೆ ಮನಸಿನಲ್ಲೇ
ಮಾತು ನಿಂತೋಗಿದೆ ಕಣ್ಣೆ ಮಾತನಾಡಿದೆ ನನ್ನ ನಲ್ಲೇ
ಏನಾಗಿದೆ ಏನಾಗಿದೆ ನನಗೇತಕೆ ಹೀಗಾಗಿದೆ
ಏನಾಗಿದೆ ಯಾಕಾಗಿದೆ ಪ್ರೀತಿ ಜ್ವರ ಹೆಚ್ಚಾಗಿದೆ
ನೀನೇ ನನ್ನ ಉಸಿರು ಚಿನ್ನ
ಹಗಲು ರಾತ್ರಿ ನಿನ್ನ ಧ್ಯಾನ ನೋಡು ನನ್ನ
ಕಣ್ಣ ಕವನ ಬೇಕು ರನ್ನ
ಹೇಳುವಂತೆ ಹಾಡಿದಂತೆ ನಿನ್ನ ಮೌನ
ಸಿಡಿಯುವ ಮೋಡವೂ ನಿನ್ನ ಅಂದ ನೋಡಿ ಗುಡುಗದೆ ಹೋಯಿತೆ
ಸೂರ್ಯನು ನೋಡುತ ನಿನ್ನ ಮೈಯ್ಯ ಬಣ್ಣ ನಾಚುತ ಇಳಿಯಿತೆ
ಹೇಳಿ ಕೇಳಿ ನಾನು ಚೂರು ಕಳ್ಳನೆ
ನಿನ್ನಯ ಹೃದಯವ ಕದಿಯಲೇ
ನನ್ನ ಜೋಡಿಯಾಗಿ ನೀನು ಬಂದರೆ ಸ್ವರ್ಗವು ನನ್ನಯ ಕೈಯ್ಯಲೆ
ಏನಾಗಿದೆ ಏನಾಗಿದೆ ನನಗೇತಕೆ ಹೀಗಾಗಿದೆ
ಏನಾಗಿದೆ ಯಾಕಾಗಿದೆ ಪ್ರೀತಿ ಜ್ವರ ಹೆಚ್ಚಾಗಿದೆ
ದೇವರಲ್ಲಿ ವರವ ನೊಂದು
ಕಾಡಿ ಬೇಡಿ ಹುಡುಕಿಕೊಂಡೆ ದಾರಿಯೊಂದು
ಕನಸಿನಲ್ಲೂ ಕೈಯ್ಯ ಹಿಡಿದು
ಪ್ರೀತಿ ಮಾಡುವಂತೆ ಕೇಳಿಕೊಂಡೆ ಇಂದು
ಬಿಸಿಲಲಿ ಒಣಗಿದ ನನ್ನ ದೇಹಕೀಗ ಮಂಜಿನ ಮುತ್ತಿಗೆ
ನಿನ್ನಯ ತೊಳಲಿ ಸೇರುವಾಸೆ ಈಗ ಕರೆವೆಯ ಮೆತ್ತಗೆ
ಸತ್ಯ ಹೇಳೋದಕ್ಕೆ ಧೈರ್ಯ ಸಾಲದೆ
ಹೀಗೇತಕೆ ಈ ತರ ಆಗಿದೆ
ನಿನ್ನ ಗುಂಗು ಈಗ ನೆತ್ತಿಗೇರಿದೆ
ಸೇರುವ ಆತುರ ಹೆಚ್ಚಿದೆ
ಏನಾಗಿದೆ ಏನಾಗಿದೆ ನನಗೇತಕೆ ಹೀಗಾಗಿದೆ
ಏನಾಗಿದೆ ಯಾಕಾಗಿದೆ ಪ್ರೀತಿ ಜ್ವರ ಹೆಚ್ಚಾಗಿದೆ