ಅಮ್ಮ… ನನ್ನೀ ಜನುಮ…
ನಿನ್ನ… ವರದಾನವಮ್ಮ…
ಅಮ್ಮ… ನಿನಗ್ಯಾರು ಸಮ…
ನನ್ನ... ಜಗ ನೀನೇ ಅಮ್ಮ…
ನಿನ್ನ ಆ ಲಾಲಿ ಪದ ನನ್ನ ಒಳಗೆ ಸದಾ
ನಿಲ್ಲದೆ ಮಿಡಿದಿದೆ ಅಮ್ಮ..
ಗುಡಿಯ ಹಂಗಿರದ, ಕೀರ್ತನೆ ಬೇಕಿರದ
ನಡೆವ ದೈವವೇ ಅಮ್ಮ..
ಅಮ್ಮ... ನನ್ನೀ ಜನುಮ…
ನಿನ್ನ… ವರದಾನವಮ್ಮ …
ಅಮ್ಮ…….
ನಿನ್ನ ಒಂದು ಕೈ ತುತ್ತು ಸಾಕು
ಈ ಜನ್ಮ ಪೂರ್ತಿ ಉಪವಾಸ ಇರುವೆನು
ನಿನ್ನ ಒಂದು ಅಪ್ಪುಗೆಯು ಸಾಕು
ಆ ನೆನಪಿನಲ್ಲಿ ಸೆರೆವಾಸ ಇರುವೆನು
ನೀನೇ ನನ್ನ ಲೋಕವು, ನೀನೇ ನನ್ನ ಜೀವವು
ನೀನೇ ನನಗೆ ಎಲ್ಲವೂ ಅಮ್ಮ…
ಅಮ್ಮ… ನಿನಗ್ಯಾರು ಸಮ…
ನನ್ನ… ಜಗ ನೀನೇ ಅಮ್ಮ…
ಅಮ್ಮ…
ನಿನ್ನ ಒಂದು ಸಾಂತ್ವನವೇ ಸಾಕು
ನೋವನೆಲ್ಲ ನಾ ನುಂಗಿ ನಗುವೆನು
ನೀನು ಒಮ್ಮೆ ಬೆನ್ನು ತಡವು ಸಾಕು
ಈ ಜಗವನೆಲ್ಲಾ ನಾ ಗೆದ್ದು ಬರುವೆನು
ನೂರು ನೂರು ದೇವರು ನಿನ್ನ ಒಳಗೆ ಇರುವರು
ಎಂಬ ನಿಜವಾ ಅರಿತೆನು ಅಮ್ಮ..
ಅಮ್ಮ… ನನ್ನೀ ಜನುಮ…
ನಿನ್ನ… ವರದಾನವಮ್ಮ…
ಅಮ್ಮ… ನಿನಗ್ಯಾರು ಸಮ…
ನನ್ನ... ಜಗ ನೀನೇ ಅಮ್ಮ…
ನಿನ್ನ ಆ ಲಾಲಿ ಪದ ನನ್ನ ಒಳಗೆ ಸದಾ
ನಿಲ್ಲದೆ ಮಿಡಿದಿದೆ ಅಮ್ಮ..
ಗುಡಿಯ ಹಂಗಿರದ, ಕೀರ್ತನೆ ಬೇಕಿರದ
ನಡೆವ ದೈವವೇ ಅಮ್ಮ..
ಅಮ್ಮ... ನನ್ನೀ ಜನುಮ…
ನಿನ್ನ… ವರದಾನವಮ್ಮ …
ಅಮ್ಮ…….