Nava vasanthada gaali beesalu Lyrics – Matte haaditu Kogile songs Lyrics – ನವ ವಸಂತದ ಗಾಳಿ ಬೀಸಲು


ನವ ವಸಂತದ ಗಾಳಿ ಬೀಸಲು
ಮಾವು ಚಿಗುರಿತು ಆಗಲೇ
ಮೌನ ಮರೆಯುತ ಮಧುರ ಗೀತೆಯ
ಮತ್ತೆ ಹಾಡಿತು ಕೋಗಿಲೆ
ನವ ವಸಂತದ ಗಾಳಿ ಬೀಸಲು
ಮಾವು ಚಿಗುರಿತು ಆಗಲೇ
ರವಿಯು ಬಾನಲಿ ಮೂಡಿ ಬರಲು
ಉಷೆಯು ಆರತಿ ತಂದಳು
ಏಳು ಕಂದನೆ ಏಳು ಎನುತ
ನಿನ್ನ ಬಳಿಗೆ ಬಂದಳು
ಕಣ್ಣ ತುಂಬುವ ಅಂದ ಎಲ್ಲೆಡೆ
ನಿನ್ನ ಕೂಗಿದೆ ಕೇಳದೆ
ನವ ವಸಂತದ ಗಾಳಿ ಬೀಸಲು
ಮಾವು ಚಿಗುರಿತು ಆಗಲೇ
ಮೌನ ಮರೆಯುತ ಮಧುರ ಗೀತೆಯ
ಮತ್ತೆ ಹಾಡಿತು ಕೋಗಿಲೆ
ನವ ವಸಂತದ ಗಾಳಿ ಬೀಸಲು
ಮಾವು ಚಿಗುರಿತು ಆಗಲೇ
ನನ್ನ ಹಾಡಿಗೆ ದನಿಯ ಕೊಡದೆ
ಏಕೆ ಮಲಗಿದೆ ಸುಮ್ಮನೆ
ಮಾತನಾಡದೆ ಏಕೆ ಹೀಗೆ
ಮೂಕನಾದೆ ಕಂದನೆ
ಪ್ರೇಮ ತುಂಬಿದ ಉದಯ ರಾಗಕೆ
ನಿನ್ನ ಶ್ರುತಿಯ ಬೆರೆಸದೇ
ಎದೆಗೆ ಸಂತಸ ತಾರದೆ
ನಿನ್ನ ಮನವು ಎಲ್ಲಿದೆ
ನವ ವಸಂತದ ಗಾಳಿ ಬೀಸಲು
ಮಾವು ಚಿಗುರಿತು ಆಗಲೇ
ಮೌನ ಮರೆಯುತ ಮಧುರ ಗೀತೆಯ
ಮತ್ತೆ ಹಾಡಿತು ಕೋಗಿಲೆ
ನವ ವಸಂತದ ಗಾಳಿ ಬೀಸಲು
ಮತ್ತೆ ಹಾಡಿತು ಕೋಗಿಲೆ

Leave a Reply

Your email address will not be published. Required fields are marked *