ನನ್ನ ಗೆಳೆಯ ನನ್ನ ಗೆಳೆಯ – Nanna Geleya Nanna Geleya Song Lyrics – Janapada Geethe Lyrics

Vocals – Rashmi S Guddad


ನನ್ನ ಗೆಳೆಯ ನನ್ನ ಗೆಳೆಯ
ನನ್ನ ಮನಸು ನಿನ್ನದಯ್ಯಾ
ನನ್ನ ಗೆಳೆಯ ನನ್ನ ಗೆಳೆಯ
ನನ್ನ ಕನಸೇ ನೀನಯ್ಯ
ಓಣಿ ಹಿಡಿದ ನಾ ಹೋಗುವಾಗ
ಸಿಳ್ಳೆ ಹಾಕ್ತಿದ್ದಿ ಬಿಟ್ಟು ಬಿಡದಾಂಗ
ಓಣಿ ಹಿಡಿದ ನಾ ಹೋಗುವಾಗ
ಸಿಳ್ಳೆ ಹಾಕ್ತಿದ್ದಿ ಬಿಟ್ಟು ಬಿಡದಾಂಗ
ಮನಸ್ಸಾಯ್ತು ನಿನ್ನ ಮ್ಯಾಗ
ಕನಸ್ಸಾಯ್ತು ನಿನ್ನ ಮ್ಯಾಗ
ನನ್ನ ಗೆಳೆಯ ನನ್ನ ಗೆಳೆಯ
ನನ್ನ ಮನಸು ನಿನ್ನದಯ್ಯ
ನನ್ನ ಗೆಳೆಯ ನನ್ನ ಗೆಳೆಯ
ನನ್ನ ಕನಸೇ ನೀನಯ್ಯ
ನಮ್ಮೂರ ಶಾಲ್ಯಾಗ ಕಬಡ್ಡಿ ನೀ ಆಡುವಾಗ
ಕೆರೆನೀರು ಕೊಡಾಕ ಬರ್ತದ್ದೆ ನಿನ್ನಾನೋಡೋ ನೆಪದಾಗ
ನಮ್ಮೂರ ಶಾಲ್ಯಾಗ ಕಬಡ್ಡಿ ನೀ ಆಡುವಾಗ
ಕೆರೆನೀರು ಕೊಡಾಕ ಬರ್ತದ್ದೆ ನಿನ್ನಾನೋಡೋ ನೆಪದಾಗ
ನೀರು ಕುಡುದ ನೀ ನಕ್ಕಾಗ
ಮಿಂಚ್ ಹೊಡದಂಗಾಯ್ತು ನನ್ನ ಮನದಾಗ
ನೀರು ಕುಡುದ ನೀ ನಕ್ಕಾಗ
ಮಿಂಚ್ ಹೊಡದಂಗಾಯ್ತು ನನ್ನ ಮನದಾಗ
ಮನಸ್ಸಾಯ್ತು ನಿನ್ನ ಮ್ಯಾಗ
ಕನಸ್ಸಾಯ್ತು ನಿನ್ನ ಮ್ಯಾಗ
ನನ್ನ ಗೆಳೆಯ ನನ್ನ ಗೆಳೆಯ
ನನ್ನ ಮನಸು ನಿನ್ನದಯ್ಯ
ನನ್ನ ಗೆಳೆಯ ನನ್ನ ಗೆಳೆಯ
ನನ್ನ ಕನಸೇ ನೀನಯ್ಯ
ಬನ್ನಿ ಮುಡಿ ಹಬ್ಬದಾಗ ಪಟಗ ಸುತ್ತಿ ನಿಂತಾಗ
ಕೊಳಲನೂದೋ ಕೃಷ್ಣ ಬೆಳ್ಳಿ ರಥದ ಮ್ಯಾಲೆ ಬಂದಂಗ
ಬನ್ನಿ ಮುಡಿ ಹಬ್ಬದಾಗ ಪಟಗ ಸುತ್ತಿ ನಿಂತಾಗ
ಕೊಳಲನೂದೋ ಕೃಷ್ಣ ಬೆಳ್ಳಿ ರಥದ ಮ್ಯಾಲೆ ಬಂದಂಗ
ಅತ್ತಿ ಅಂದೆ ನಿಮ್ಮವ್ವಾಗ ಮಾವ
ಅಂದೆ
ನಿಮ್ಮಪ್ಪಾಗ
ಅತ್ತಿ ಅಂದೆ ನಿಮ್ಮವ್ವಾಗ ಮಾವ
ಅಂದೆ
ನಿಮ್ಮಪ್ಪಾಗ
ಪಕ್ಕ ಆದಿ ಮನದಾಗ ಹೋಳ್ಗೀ ಊಟ ಯಾವಾಗ
ನನ್ನ ಗೆಳೆಯ ನನ್ನ ಗೆಳೆಯ
ನನ್ನ ಮನಸು ನಿನ್ನದಯ್ಯ
ನನ್ನ ಗೆಳೆಯ ನನ್ನ ಗೆಳೆಯ
ನನ್ನ ಕನಸೇ ನೀನಯ್ಯ

Nanna Geleya Nanna Geleya Song Lyrics –
Nanna Gelaya Nanna Gelaya Song Lyrics
Janapada Geethe Lyrics 

Leave a Reply

Your email address will not be published. Required fields are marked *