ಸ್ವಾಮಿ ಬಂದಾನೋ – Swamy Bandano Lyrics – Dr. Rajkumar Devotional Song Lyrics


ಸ್ವಾಮಿ ಬಂದಾನೋ ನಮ್ಮ ಅಯ್ಯಪ್ಪ ಬಂದಾನೋ
ಹುಲಿಯನೇರಿ ನಾಡಿನೊಳಗೆ ಸ್ವಾಮಿ ಬಂದಾನೋ
ಸೂರ್ಯಚಂದ್ರ ಕಾಂತಿಯುಳ್ಳ ಸ್ವಾಮಿ ದೇವನು
ಶಾಂತಿ ಎಂಬ ಮಂದಹಾಸ ಬೀರಿ ಬಂದವನು
ಶಿಷ್ಟರಕ್ಷಣೆಗಾಗಿ ನ್ಯಾಯ ಬಿಲ್ಲು ಹೊತ್ತವನು
ಸತ್ಯ ಧರ್ಮ ನೀತಿ ಎಂಬ ಬಾಣಹೂಡಿದನು
ಸ್ವಾಮಿ ಬಂದಾನೋ ನಮ್ಮ ಅಯ್ಯಪ್ಪ ಬಂದಾನೋ
ಜ್ಞಾನಸಾರ ಜ್ಯೋತಿಂಬ ತಿಲಕವಿತ್ತವನೋ
ಭಕ್ತಿಸಾರ ಎಂಬ ಮಣಿಯ ಹಾರತೊತ್ತವನೊ
ಐಕ್ಯತೆಯ ಸಾರವೆಂಬ ಮುಕುತವಿತ್ತವನೊ
ಶರಣು ಎನುವಾ ಜನರಪೊರೆಯೆ ಇಳೆಗೆ ಬಂದವನೋ
ಸ್ವಾಮಿ ಬಂದಾನೋ ನಮ್ಮ ಅಯ್ಯಪ್ಪ ಬಂದಾನೋ
ಶರಣಂ ಶರಣಂ ಶರಣಂ ಶರಣಂ
ಸ್ವಾಮಿ ಶರಣಂ ಅಯ್ಯಪ್ಪ ಶರಣಂ
ದಿವ್ಯ ರಮ್ಯಾ ಭವ್ಯ ಶುದ್ಧ ತನುವ ಪಡೆದವನೋ
ಡಂಭಾಚಾರ ಆಸೆಯೆಲ್ಲ ಮೆಟ್ಟಿನಿಂತವನೋ
ರಾಜ್ಯಕೋಶ ಬಂಧುಬಳಗ ತೃಣವೂ ಎಂದವನೋ
ನಿಜಭಕ್ತಿ ಮುಕ್ತಿಗಾಗಿ ಶ್ರೇಷ್ಟವೆಂದವನೋ
ಸ್ವಾಮಿ ಬಂದಾನೋ ನಮ್ಮ ಅಯ್ಯಪ್ಪ ಬಂದಾನೋ
ಹುಲಿಯನೇರಿ ನಾಡಿನೊಳಗೆ ಸ್ವಾಮಿ ಬಂದಾನೋ

 Swami Bandaano Lyrics
 Swaamy Bandano Lyrics
 Swaami Bandano Lyrics
 Swamy Bandano Song Lyrics in Kannada
Swamy Bandano Namma ayyappa bandano Song Lyrics

Leave a Reply

Your email address will not be published. Required fields are marked *