Kambada myalina gombeye Song Lyrics in Kannada


ಸಂಗೀತ: ಸಿ. ಅಶ್ವಥ್
ಗಾಯನ: ಸಂಗೀತ ಕಟ್ಟಿ
ಚಲನಚಿತ್ರ: ನಾಗಮಂಡಲ
ಕಂಬದಾ ಮ್ಯಾಲಿನ ಗೊಂಬಿಯೇ
ನಂಬಲೇನ ನಿನ್ನ ನಗಿಯನ್ನಾ
ಭಿತ್ತಿಯಾ ಮ್ಯಾಲಿನ ಚಿತ್ತಾರವೇ
ಚಿತ್ತ ಗೊತ್ತ ಹೇಳ
ಉತ್ತಾರವಾ
ಒಬ್ಬಳೇ ನಾನಿಲ್ಲಿ ತಬ್ಬಿಬ್ಬುಗೊಂಡಿಹೆನ
ಮಬ್ಬು ಹರಿಯುವುದೇನಾ ಹಬ್ಬವಾಗುವುದೇನಾ
ಕಂಬದಾ ಮ್ಯಾಲಿನ ಗೊಂಬಿಯೇ
ನಂಬಲೇನ ನಿನ್ನ ನಗಿಯನ್ನಾ
ಭಿತ್ತಿಯಾ ಮ್ಯಾಲಿನ ಚಿತ್ತಾರವೇ
ಚಿತ್ತ ಗೊತ್ತ ಹೇಳ
ಉತ್ತಾರವಾ
ನೀರೊಲೆಯ ನಿಗಿ ಕೆಂಡ
ಸತ್ಯವೇ
ಅಭ್ಯಂಜನವಿನ್ನೂ ನಿತ್ಯವೇ
ಒಳ್ಳೇ ಘಮಗುಡುತಿಯಲ್ಲೆ ಸೀಗೆಯೇ
ನಿನ್ನ ವಾಸನೀ ಹರಡಿರಲಿ
ಹೀಗೆಯೇ
ಒಬ್ಬಳೇ ನಾನಿಲ್ಲಿ ತಬ್ಬಿಬ್ಬುಗೊಂಡಿಹೆನ
ಮಬ್ಬು ಹರಿಯುವುದೇನಾ ಹಬ್ಬವಾಗುವುದೇನಾ
ಒಪ್ಪಿಸುವೆ ಹೂಹಣ್ಣು ಭಗವಂತ
ನೆಪ್ಪಿಲೆ ಹರಸುನಗಿ ಇರಲೆಂತ
ಕಪ್ಪುರವ ಬೆಳಗುವೆ ದೇವನೇ
ತಪ್ಪದೆ ಬರಲೆನ್ನ ಗುಣವಂತ
ಒಬ್ಬಳೇ ನಾನಿಲ್ಲಿ ತಬ್ಬಿಬ್ಬುಗೊಂಡಿಹೆನ
ಮಬ್ಬು ಹರಿಯುವುದೇನಾ ಹಬ್ಬವಾಗುವುದೇನಾ
ಕಂಬದಾ ಮ್ಯಾಲಿನ ಗೊಂಬಿಯೇ
ನಂಬಲೇನ ನಿನ್ನ ನಗಿಯನ್ನ
ಭಿತ್ತಿಯಾ ಮ್ಯಾಲಿನ ಚಿತ್ತಾರವೇ
ಚಿತ್ತ ಗೊತ್ತ ಹೇಳ
ಉತ್ತಾರವಾ

Kambada myaalina gombeye Song Lyrics in Kannada
Kambada melina bombeye Song Lyrics in Kannada

Leave a Reply

Your email address will not be published. Required fields are marked *