ದೇಹವೊಂದು ದೇವ ವೀಣೆ – Dehavondu Devaveene Lyrics in Kannada

Song: Dehavondhu Deva
Album/Movie: Aalapa
Singer: Sinchan Dixith
Music Director: H. Palguna
Lyricist: Da. Ra. Bendre
Music Label : Lahari Music


ದೇಹವೊಂದು ದೇವ ವೀಣೆ
ನರನರವೂ ತಂತಿ ತಾನೆ
ದೇಹವೊಂದು ದೇವ ವೀಣೆ
ನರನರವೂ ತಂತಿ ತಾನೆ
ಹಗಲಿರುಳು ನುಡಿಯುತ್ತಿಹ
ಉಸಿರಾಟವೇ ಗೀತ
ಅನವಾರಿಸೆ ನೀ ಪ್ರವೀಣೆ
ತಾಯೆ ನಿನ್ನ ಕೈಗೆ ನಾನೆ
ಒಪ್ಪಿಸಿಕೊಂಡಿಹೆನು
ಬರಲಿ ಜೀವದ ಸಂಗೀತ 
ದೇಹವೊಂದು ದೇವ ವೀಣೆ
ನರನರವೂ ತಂತಿ ತಾನೆ
ದೇಹವೊಂದು ದೇವ ವೀಣೆ
ಮನದ ಮಲೆಯ ತುದಿತುದಿಯಲಿ
ಮೌನದ ಸುತ್ತೋರಧಿಯಲಿ
ಏಳಲಿ ಅಲೆ ನವತಾರೆಯ ಕಿರಣಾವಲಿಯಂತೆ
ಮನದ ಮಲೆಯ ತುದಿತುದಿಯಲಿ
ಮೌನದ ಸುತ್ತೋರಧಿಯಲಿ
ಏಳಲಿ ಅಲೆ ನವತಾರೆಯ ಕಿರಣಾವಲಿಯಂತೆ
ಇಗೋ ಚಿತ್ತದ ಯಾವುದೇ ಸ್ಮೃತಿ
ಸುಳಿಸುತ್ತೆದೆ ವಿದ್ಯಾರತಿ 
ಇಗೋ ಚಿತ್ತದ ಯಾವುದೇ ಸ್ಮೃತಿ
ಸುಳಿಸುತ್ತೆದೆ ವಿದ್ಯಾರತಿ 
ಮೈಮನವೂ ಪ್ರಾಣಪಥದೆ
ಮೈಮನವೂ ಪ್ರಾಣಪಥದೆ
ನಲಿ ನಲಿ ನಲಿವಂತೆ 
ದೇಹವೊಂದು ದೇವ ವೀಣೆ
ನರನರವೂ ತಂತಿ ತಾನೆ
ದೇಹವೊಂದು ದೇವ ವೀಣೆ
ನೀನೆಲ್ಲೋ ಹಾಡುತಿಹೆ ನಾನೆತ್ತೋ ನೋಡುತಿಹೆ
ಹಾಡಿದ ಒಡನಾಟಕೆ ಒಳನಾಡಿಯು ನಡುಗುತಿದೆ 
ನೀನೆಲ್ಲೋ ಹಾಡುತಿಹೆ ನಾನೆತ್ತೋ ನೋಡುತಿಹೆ
ಹಾಡಿದ ಒಡನಾಟಕೆ ಒಳನಾಡಿಯು ನಡುಗುತಿದೆ 
ಸ್ಪುರಿಸುತ್ತಿದೆ ಸ್ಪಂದಿಸುತಿದೆ ವಿವಿಧ ಸ್ವರ ಹೊಂದಿಸುತಿದೆ
ಸ್ಪುರಿಸುತ್ತಿದೆ ಸ್ಪಂದಿಸುತಿದೆ ವಿವಿಧ ಸ್ವರ ಹೊಂದಿಸುತಿದೆ
ಉಳಿದ ನೆಲಾಟವು ಎಲ್ಲೋ ಅಲ್ಲೇ ಅಡಗುತಿದೆ 
ದೇಹವೊಂದು ದೇವ ವೀಣೆ
ನರನರವೂ ತಂತಿ ತಾನೆ
ದೇಹವೊಂದು ದೇವ ವೀಣೆ
ನರನರವೂ ತಂತಿ ತಾನೆ
ಹಗಲಿರುಳು ನುಡಿಯುತ್ತಿಹ
ಉಸಿರಾಟವೇ ಗೀತ
ಅನವಾರಿಸೆ ನೀ ಪ್ರವೀಣೆ
ತಾಯೆ ನಿನ್ನ ಕೈಗೆ ನಾನೆ
ಒಪ್ಪಿಸಿಕೊಂಡಿಹೆನು
ಬರಲಿ ಜೀವದ ಸಂಗೀತ
ದೇಹವೊಂದು ದೇವ ವೀಣೆ
ನರನರವೂ ತಂತಿ ತಾನೆ
ದೇಹವೊಂದು ದೇವ ವೀಣೆ
ಹಗಲಿರುಳು ನುಡಿಯುತ್ತಿಹ
ಉಸಿರಾಟವೇ ಗೀತ
ಉಸಿರಾಟವೇ ಗೀತ
ಉಸಿರಾಟವೇ ಗೀತ

Deha ondu Devaveene Lyrics in Kannada
Deha ondu Deva veene Lyrics in Kannada
Dehavondu Devaveene Song Lyrics

Leave a Reply

Your email address will not be published. Required fields are marked *