ಅರಳುವ ಹೂವುಗಳೇ – Araluva hoovugale Song Lyrics in Kannada – My Autograph

Araluva Hoovugale
Song Lyrics from My Autograph
Kannada Movie, Song is a Best Impressive Song, My Autograph Movie Released on 17
Feb 2006.


My Autograph
Kannada Movie is Presenting from the Banner of  Kiccha
Creations,
Sudeep is a Producer
of the Movie and Directed by also Kiccha
Sudeep

 

Araluva Hoovugale
Kannada song Lyrics by K. Kalyan,
and the Song Composed by Bharadwaj.
Song Sung by K.S Chitra. Kiccha Sudeep Acted in the Main Role.


About the Movie

Movie

My
Autograph

Song

Araluva Hoovugale

Music

Bharadwaj

Lyrics

K. Kalyan

Singer

K.S Chitra

Music Label

Akash Audio

 
ಅರಳುವ ಹೂವುಗಳೇ
ಆಲಿಸಿರಿ
ಬಾಳೊಂದು ಹೋರಾಟ
ಮರೆಯದಿರಿ
ಬೆಳಗಿನ ಕಿರಣಗಳೇ
ಬಣ್ಣಿಸಿರಿ
ಇರುಳಿಂದೆ ಬೆಳಕುಂಟು
ತೋರಿಸಿರಿ
ನಾಳೆಯ ನಂಬಿಕೆಯಿರಲಿ
ನಮ್ಮ ಬಾಳಲಿ
ಗೆಲ್ಲುವ ಭರವಸೆಯೊಂದೆ
ಬೆಳಕಾಗಲಿ
ಮನವೇ ಓ ಮನವೇ ನೀ
ಅಳುಕದಿರು
ಮಳೆಯೋ ಬರಸಿಡಿಲೋ
ನೀ ನಡೆಯುತಿರು
ಅರಳುವ ಹೂವುಗಳೇ
ಆಲಿಸಿರಿ
ಬಾಳೊಂದು ಹೋರಾಟ
ಮರೆಯದಿರಿ
ಮನಸು ಎಂಬ ಕನ್ನಡಿಯು
ಹೊಡೆದು ಹೋಗಬಾರದು
ಬಾಳು ಒಂದು ಗೋಳು
ಅಂತ ಓಡಿ ಹೋಗಬಾರದು
ಯಾರಿಗಿಲ್ಲಿ ನೋವಿಲ್ಲ
ಯಾರಿಗಿಲ್ಲಿ ಸಾವಿಲ್ಲಾ
ಕಾಲ ಕಳೆದ ಹಾಗೆ
ಎಲ್ಲಾ ಮಾಯವಾಗುವಂತದು
ಉಳಿ ಪೆಟ್ಟು ಬೀಳುವ
ಕಲ್ಲೇ ಶಿಲೆಯಾಗಿ ನಿಲ್ಲುವುದು
ದಿನ ನೋವ ನುಂಗುವ
ಜೀವವೇ ನೆಲೆಯಾಗಿ ನಿಲ್ಲುವುದು
ಯಾರಿಗಿಲ್ಲ ಅಲೆದಾಟ
ಯಾರಿಗಿಲ್ಲ ಪರದಾಟ
ನಮ್ಮ ಪ್ರತಿ ಕನಸು
ಇಲ್ಲಿ ನನಸಾಗೋ
ಒಳ್ಳೇ ಕಾಲವು ಮುಂದೆ
ಇದೆ
ಮನವೇ ಓ ಮನವೇ ನೀ
ಕುಗ್ಗದಿರು
ಬೆಟ್ಟ ಬಯಲಿರಲಿ
ನೀ ನುಗ್ಗುತಿರು
ಅರಳುವ ಹೂವುಗಳೇ
ಆಲಿಸಿರಿ
ಬಾಳೊಂದು ಹೋರಾಟ
ಮರೆಯದಿರಿ
ನೋವು ನಲಿವು ಅನ್ನೋದು
ಬಾಳ ರೈಲು ಕಂಬಿಗಳು
ನಡುವೆ ನಮ್ಮದೀ
ಪಯಣ ನಗುತ ಸಾಗು ಹಗಲಿರುಳು
ಏನೇ ಬರಲಿ ಬಾಳಿನಲಿ
ಧ್ಯೇಯವೊಂದು ಜೊತೆಯಿರಲಿ
ಏಳುಬೀಳು ಎಲ್ಲ
ದಾಟಿ ಏಳುತೀವಿ ನಾವುಗಳು
ಅವಮಾನ ಎಲ್ಲರಿಗುಂಟು
ಈ ಲೋಕದ ದೃಷ್ಟಿಯಲಿ
ನಾವೆಲ್ಲರು ಎಂದೂ
ಒಂದೆ ಆ ದೇವರ ಸೃಷ್ಟಿಯಲಿ
ಬಾಳಿಗೊಂದು ಅರ್ಥವಿದೆ
ಹೆಜ್ಜೆಗೊಂದು ದಾರಿಯಿದೆ
ನಿನ್ನ ಆತ್ಮಬಲ
ನಿನ್ನ ಜೊತೆಯಿರಲು ಆಕಾಶವೆ ಅಂಗೈಲಿ
ಮನವೇ ಓ ಮನವೇ ನೀ
ಬದಲಾಗು
ಏನೇ ಸಾಧನೆಗೂ ನೀ
ಮೊದಲಾಗು
ಅರಳುವ ಹೂವುಗಳೇ
ಆಲಿಸಿರಿ
ಬಾಳೊಂದು ಹೋರಾಟ
ಮರೆಯದಿರಿ
ಬೆಳಗಿನ ಕಿರಣಗಳೇ
ಬಣ್ಣಿಸಿರಿ
ಇರುಳಿಂದೆ ಬೆಳಕುಂಟು
ತೋರಿಸಿರಿ
ನಾಳೆಯ ನಂಬಿಕೆಯಿರಲಿ
ನಮ್ಮ ಬಾಳಲಿ
ಗೆಲ್ಲುವ ಭರವಸೆಯೊಂದೇ
ಬೆಳಕಾಗಲಿ
ಮನವೇ ಓ ಮನವೇ ನೀ
ಅಳುಕದಿರು
ಮಳೆಯೋ ಬರಸಿಡಿಲೋ
ನೀ ನಡೆಯುತಿರು

Like My FaceBook Page : PK Music Lyrics

If you want any Kannada
Sing along Karaoke 
Click here 

If you find any mistakes
in this Page of Lyrics free feel to correct it and Mention in the Comment Box.



Regards

PK Music Lyrics

 

Doora hogo munna Dooralare
ninna

Mounadalle innu gaayaalu
naa

Araluva huvugale Song Lyrics in Kannada –
My Autograph Kannada Movie song Lyrics
Araluva huvugale Lyrics

Leave a Reply

Your email address will not be published. Required fields are marked *