ಆಡೋಣ ನೀನು – Aadona neenu naanu Lyrics in Kannada – Kasthuri nivasa


ಚಿತ್ರ: ಕಸ್ತೂರಿ ನಿವಾಸ

ರಚನೆ: ವಿಜಯನಾರಸಿಂಹ
ಸಂಗೀತ: ಜಿ. ಕೆ. ವೆಂಕಟೇಶ್
ಗಾಯನ: ಪಿ. ಬಿ. ಎಸ್ & ಎಸ್.ಜಾನಕಿ

ಆಡೋಣ ನೀನು ನಾನು
ಎನ್ನಾ ಆಸೆ ತಾರೆ ನೀನು
ನೋಡಿ ನಿನ್ನ ಅಂದ ಚಂದ
ಚಂದಾಮಾಮ ನಾಚಿ ನಿಂದ
ಆಡೋಣ ನೀನು ನಾನು
ಎನ್ನಾ ಆಸೆ ತಾರೆ ನೀನು
ನೋಡಿ ನಿನ್ನ ಅಂದ ಚಂದ
ಚಂದಾಮಾಮ ನಾಚಿ ನಿಂದ
.. ಚಂದಾಮಾಮ ನಾಚಿ ನಿಂದ
♫♫♫♫♫♫♫♫♫♫♫♫

ಹ್ಞುಂ…… ಹ್ಞುಂ….ಹ್ಞುಂ..ಹ್ಞುಂ
ಕಣ್ಣಾ ಗೊಂಬೆ ನೀನಾದೆ
ನಿನ್ನಾ ಕೈಗೊಂಬೆ ನಾನಾದೆ
ನಿನ್ನಂದ ಮುದ್ದಾಡಲೆಂದೇ
ಬಂದಿದೆ ಕಣ್ಣಲ್ಲಿ ನಿದ್ದೆ
ಎನ್ನೆದೆ ನೀ ಮೀಟಿ ಬಂದೆ
ಬಾಳಿನ ಬಂಧನ ನೀ ತಂದೆ
ಆಡೋಣ ನೀನು ನಾನು
ಎನ್ನಾ ಆಸೆ ತಾರೆ ನೀನು
ನೋಡಿ ನಿನ್ನ ಅಂದ ಚಂದ
ಚಂದಾಮಾಮ ನಾಚಿ ನಿಂದ
♫♫♫♫♫♫♫♫♫♫♫♫

ಇಲ್ಲೀ ಚೆಲುವಾಗಿ ನಗುವೆ
ಅಲ್ಲಿ ಕರುಳನ್ನೆ ಮಿಡಿವೆ
ಹಾಗು ಹೀಗೂ ಸೆಳೆವೆ
ನಾನಿನ್ನ ಕೈಗೊಂಬೆ ಅಲ್ಲವೆ

ನೀ ಎನ್ನ ಉಸಿರಾದೆ ಮಗುವೆ
ದೇವರ ನಿನ್ನಲ್ಲಿ ಕಾಣುವೆ
ಆಡೋಣ ನೀನು ನಾನು
ಎನ್ನಾ ಆಸೆ ತಾರೆ ನೀನು
ನೋಡಿ ನಿನ್ನ ಅಂದ ಚಂದ
ಚಂದಾಮಾಮ ನಾಚಿ ನಿಂದ
ಚಂದಾಮಾಮ ನಾಚಿ ನಿಂದ
ಚಂದಾಮಾಮ ನಾಚಿ ನಿಂದ

Leave a Reply

Your email address will not be published. Required fields are marked *