ಚಿತ್ರ : ಒಂದು ಮುತ್ತಿನ ಕಥೆ
ಗಾಯಕರು : ಡಾ|| ರಾಜಕುಮಾರ್
ಮತ್ತು ರತ್ನಮಾಲಾ ಪ್ರಕಾಶ್
ಮಲ್ಲಿಗೆ ಹೂವಿನಂತೆ ಅಂದ ನಿನ್ನಲ್ಲಿ
ತಾವರೆ ಹೂವಿನಂತೆ ಚೆಂದ ಕಣ್ಣಲ್ಲಿ
ದುಂಬಿಯ ಹಾಡಂತೆ ಮಾತಿನ ಇಂಪಂತೆ
ನನಗೆ ಒಲಿದ ಮುದ್ದು ಚೆಲುವೆಯೇ
ಮಲ್ಲಿಗೆ ಹೂವಿನಂತೆ ಅಂದ ನಿನ್ನಲ್ಲಿ
ತಾವರೆ ಹೂವಿನಂತೆ ಚೆಂದ ಕಣ್ಣಲ್ಲಿ
ತನನ…… ತನನಾ
ತನನನನಾ…. ತನನನನಾ
♫♫♫♫♫♫♫♫♫♫♫♫
ಕಡಲ ನೀರಲ್ಲಿ ದಿನವೂ ಈಜೋಣ
ಜೋಡಿ ಮೀನಂತೆ ಆಟ ಆಡೋಣ
ಮುಗಿಲು ಕಪ್ಪಾಗಿ ಸಿಡಿಲ ಸದ್ದಾಗಿ
ಮಳೆಯೂ ಸುರಿದು ಚಳಿ ಬಂದಾಗ
ಓ ಹೆಣ್ಣೇ….ಹೇ ಹೇ ಹೇ
ನಾನಿನ್ನ ನೀನನ್ನ ತೋಳಿಂದ
ಅಪ್ಪುತ್ತ ತಂದೆನು ಆನಂದ…
ಮಲ್ಲಿಗೆ ಹೂವಿನಂತೆ ಅಂದ ನಿನ್ನಲ್ಲಿ
ತಾವರೆ ಹೂವಿನಂತೆ ಚೆಂದ ಕಣ್ಣಲ್ಲಿ
ದುಂಬಿಯ ಹಾಡಂತೆ ಮಾತಿನ ಇಂಪಂತೆ
ನನಗೆ ಒಲಿದ ಮುದ್ದು ಚೆಲುವೆಯೇ
ಮಲ್ಲಿಗೆ ಹೂವಿನಂತೆ ಅಂದ ನಿನ್ನಲ್ಲಿ
ತಾವರೆ ಹೂವಿನಂತೆ ಚೆಂದ ಕಣ್ಣಲ್ಲಿ
♫♫♫♫♫♫♫♫♫♫♫♫
ತಾ ನನ ತನ ನನಾ…
ತಾ ನಾನಾ ತಾ ನಾ
ಆ…. ಆಆಆ… ಆಆಆ
ಹಗಲೂ ಬಂದಂತೆ ಇರುಳು ಹೋದಂತೆ
ಕಾಲ ನಿಲದೆಲೆ ಜಾರಿ ಹೋದಂತೆ
ಪ್ರೀತಿ ಹಣ್ಣಾಯ್ತು ವರವ ತಂದಾಯ್ತು
ಹೊಸದೊಂದು ಜೀವ ಜಾರಿ ಬಂದಾಯ್ತು
ಬಾಳೆಲ್ಲಾ…ಆ ಆ ಆ
ಸಂತೋಷ ಸಂಗೀತ ಎಂದೆಂದೂ
ಜೋಗುಳ ಹಾಡೊಂದೇ ಇನ್ನೆಂದು…
ಮಲ್ಲಿಗೆ ಹೂವಿನಂತೆ ಅಂದ ನಿನ್ನಲ್ಲಿ
ತಾವರೆ ಹೂವಿನಂತೆ ಚೆಂದ ಕಣ್ಣಲ್ಲಿ
ದುಂಬಿಯ ಹಾಡಂತೆ ಮಾತಿನ ಇಂಪಂತೆ
ನನಗೆ ಒಲಿದ ಮುದ್ದು ಚೆಲುವೆಯೇ
ಮಲ್ಲಿಗೆ ಹೂವಿನಂತೆ ಅಂದ ನಿನ್ನಲ್ಲಿ
ತಾವರೆ ಹೂವಿನಂತೆ ಚೆಂದ ಕಣ್ಣಲ್ಲಿ