♪ Film: U Turn 2
♪ Song: Ura Bittu Urige Bandeevi
♪ Singer: Naveen Sajju
♪ Music: Chandru Obaiah
♪ Lyricist: Chandru Obaiah
♪ Starcast: Chandru Obaiah, Pooja.S.M
♪ Director: Chandru Obaiah
♪ Producer: Anand Sampangi
♪ Banner: Movie’s Fort
♪ Record Label: AANANDA AUDIO VIDEO
ತಂದನಾನೊ ನಾನಾನೊ ತಂದನಾನಾನೋ
ಊರ ಬಿಟ್ಟು ಊರಿಗೆ ಬಂದೀವಿ
ಊರ ಬಿಟ್ಟು ಊರಿಗೆ ಬಂದೀವಿ
ಹೊಟ್ಟೆಗೆ ಹಿಟ್ಟು ಜುಟ್ಟಿಗೆ ಮಲ್ಲಿಗೆ
ಹುಡ್ಕೊಂಡು ನಾವಿಲ್ಲಿ ಬಂದೀವಿ
ಊರ ಬಿಟ್ಟು ಊರಿಗೆ ಬಂದೀವಿ
ತಂದನಾನನನೊ……
ದೊಡ್ಡೋರು ದೊಡ್ಡ ತಪ್ಪು ಮಾಡಿ
ಸಣ್ಣವ್ರ ಮ್ಯಾಲೆ ಹಾಕುತಾರೆ
ಸಿಎಮ್ಮು ಪಿಎಮ್ಮು ಎಲ್ಲಾರು
ಅವರವರ ಹೊಟ್ಟೇನ ತುಂಬುತಾರೆ
ಲಂಚಾನೆ ಇಲ್ದೆ ನಡಿಯಲ್ಲ ಜೀವ್ನ
ಬಡವ ಬದುಕೋದು ಹೆಂಗಿಲ್ಲಿ ಹೆಂಗಿಲ್ಲಿ
ಹೆಂಗಪ್ಪ ಇಲ್ ಬದುಕೋದು
ಹೆಣ್ ಮಕ್ಳು ಅಂದ ಚಂದಾನ
ಬೀದೀಲಿ ಹರಾಜು ಹಾಕ್ತಾವ್ರೆ
ಹುಡುಗರ ಚಡ್ಡಿ ಹುಡುಗೀರ್ಗೆ
ಗಿಫ್ಟಾಗಿ ಈಗ ಕೊಡ್ತಾವ್ರೆ
ಇದ್ದಿದ್ದು ಇದ್ದಂಗೆ ನಾವಾಡಿ ಬಿಟ್ರೆ
ನಮ್ಮನ್ನು ಜೈಲಿಗೆ ಹಾಕ್ತಾವ್ರೆ ಹಾಕ್ತಾವ್ರೆ ಹಾಕ್ತಾವ್ರೆ
ಏಏಏ…………