ಎಲ್ಲೆಲ್ಲೂ ನೀನೇ – Ellellu neene Song Lyrics in Kannada – Maagiya Kanasu Kannada Movie song Lyrics

ಚಿತ್ರಮಾಗಿಯ ಕನಸು 

ಅಹಾ

ಒಹೋ

ಹೇ

ಅಹಾ

ಎಲ್ಲೆಲ್ಲೂ ನೀನೇ

ಚೆಲ್ಲಿರುವೆ ಜಾಣೆ
ಕರುನಾಡ ಸಿರಿದೇವಿ

ಐಸಿರಿಯ ಸೋನೇ
ಎಲ್ಲೆಲ್ಲೂ ನೀನೇ
ಚೆಲ್ಲಿರುವೆ ಜಾಣೆ
ಕರುನಾಡ ಸಿರಿದೇವಿ

ಐಸಿರಿಯ ಸೋನೇ

♫♫♫♫♫♫♫♫♫♫♫♫

ಹಸಿರೆರೆದು ಉಸಿರಾಡಿ

ನಗುತಿರುವ ಮಡಿಲಲ್ಲಿ

ಕಾವೇರಿ ಮೈದೋರಿ

ಬೆಳೆದಿರುವಳು

ಕವಲೊಡೆದ ಜವಳಿಗಳು

ಒಡನಾಡಿ ಎಡೆಯಲ್ಲಿ

ತುಂಗೆಭದ್ರೆಯ ಸೇರಿ

ನಲಿದಿರುವಳು

ನವರೂಪ ತಾಳಿದ

ಕಾಳೀಗೆ ಸಮನೆಂದು

ಗೋದಾವರಿ ಮನೆಯ

ತುಂಬಿರುವಳು

ಎಲ್ಲೆಲ್ಲೂ ನೀನೇ..ಅಹ..ಅಹ

ಚೆಲ್ಲಿರುವೆ ಜಾಣೆ.. ಏಹೇ.. ಏಹೇ

ಕರುನಾಡ ಸಿರಿದೇವಿ

ಐಸಿರಿಯ ಸೋನೇ
♫♫♫♫♫♫♫♫♫♫♫♫

ಮುಗಿಲೇರಿ ಮುತ್ತಿಡುವ

ಆಗಸದ  ಆಚೆಗೆ

ಗಿರಿಸಾಲು ಸಾಲಾಗಿ

ಮೆರೆದಾಡಿದೆ

ಕೋಗಿಲೆಯ ಇಂಚರದ

ಇಂಪನ್ನು ಹಂಚುತ್ತ
ತಾನಾಗಿ ತರುಲತೆಯು

ಕರೆ ಕೂಗಿದೆ

ಚೆಲುವಿನ ರಾಶಿಯ

ಗೆಲುವನು ಸಾರಲು

ಮಲೆನಾಡ ಮೈಸಿರಿಯು

ನೆಲೆ ನಿಂತಿದೆ

ಎಲ್ಲೆಲ್ಲೂ ನೀನೇ

ಚೆಲ್ಲಿರುವೆ ಜಾಣೆ
ಕರುನಾಡ ಸಿರಿದೇವಿ

ಐಸಿರಿಯ ಸೋನೇ
ಎಲ್ಲೆಲ್ಲೂ ನೀನೇ..ಅಹ ಅಹ

ಚೆಲ್ಲಿರುವೆ ಜಾಣೆ ಹೇ ಹೇ

ಕರುನಾಡ ಸಿರಿದೇವಿ

ಐಸಿರಿಯ ಸೋನೇ

Leave a Reply

Your email address will not be published. Required fields are marked *