ಪ್ರೇಮ ಪ್ರೀತಿ ನನ್ನುಸಿರು – Prema Preethi Nannusiru Song Lyrics in Kannada – Singapuradalli Raja Kulla Kannada Movie Song Lyrics

 

ಚಿತ್ರ: ಸಿಂಗಾಪುರದಲ್ಲಿ ರಾಜ ಕುಳ್ಳ

ಗಾಯಕರು: ಎಸ್ ಪಿ.ಬಿ ಮತ್ತು ಕೆ ಜೆ ಯೇಸುದಾಸ್

ಸಂಗೀತ: ರಾಜನ್-ನಾಗೇಂದ್ರ

ಸಾಹಿತ್ಯ: ಚಿ. ಉದಯಶಂಕರ್

ನಟರು: ವಿಷ್ಣುವರ್ಧನ್, ದ್ವಾರಕೀಶ್

                     

ವಾಟ್ ಈಸ್ ಲೈಫ್

ಲೈಫ್ ಈಸ್ ಸಾಂಗ್

ದೆನ್ ಸಿಂಗ್ ಇಟ್ ಸೇ
ಪ್ರೇಮ ಪ್ರೀತಿ ನನ್ನುಸಿರು

ನ್ಯಾಯ ನೀತಿ ನನ್ನುಸಿರು

ಪ್ರೇಮ ಪ್ರೀತಿ ನನ್ನುಸಿರು

ನ್ಯಾಯ ನೀತಿ ನನ್ನುಸಿರು

ಅನ್ಯಾಯ ಕಂಡಾಗ

ಸಿಡಿಗುಂಡು ಸಿಡಿದಂತೆ

ಅಪರಾಧಿ ಎಲ್ಲೆಂದು

ಹುಡುಕಾಡಿ ಹುಲಿಯಂತೆ

ಸೀ:ಹೋರಾಡುವಾ.. ಬಾ .. ಗೆಳೆಯಾ

ಪ್ರೇಮ ಪ್ರೀತಿ ನನ್ನುಸಿರು

ನ್ಯಾಯ ನೀತಿ ನನ್ನುಸಿರು

♫♫♫♫♫♫♫♫♫♫♫♫

ಹೂವಂತೆ ಮೃಧುವಾಗ ಬಲ್ಲೆ..

ಮುಳ್ಲಂತೆ ಮೊನಚಾಗ ಬಲ್ಲೆ..

ಹಣ್ನಂತೆ ಸಿಹಿಯಾಗ ಬಲ್ಲೆ..

ವಿಷದಂತೆ ಕಹಿಯಾಗ ಬಲ್ಲೆ..

2:ಬಾಳೊಂದು ಹೇಗೆಂದು ನಾ ಬಲ್ಲೆ..

ಆಳೋದು ಹೇಗೆಂದು ಬಲ್ಲೆ..

ಪ್ರೀತಿ ಪ್ರೀತಿಗೆ ರೋಷ ರೋಷಕೆ

ನಮ್ಮ ರೀತಿ ಎನ್ನುವಾ

ವಾಟ್ ಈಸ್ ಲೈಫ್

ಲೈಫ್ ಈಸ್ ಡ್ಯೂಟೀ

ದೆನ್ ಪರ್ಫಾರ್ಮ್ ಇಟ್ ಸೇ..

ಬಾಳು ಎಂದು ಹೂವಲ್ಲಾ

ಬಾಳು ಎಂದು ಮುಳ್ಳಲ್ಲ

ಕಾಣೋದು ನಿಜವಲ್ಲ

ಮಾತೆಲ್ಲ ಮುತ್ತಲ್ಲ

ಕಾಲಕ್ಕೆ ತಕ್ಕಂತೆ

ಜಗದಲ್ಲಿ ಜನರೆಲ್ಲಾ

ಬಾಳೆಂಬುವಾ ಈ ಹಾದಿಯಲಿ

ಪ್ರೇಮ ಪ್ರೀತಿ ನನ್ನುಸಿರು

ನ್ಯಾಯ ನೀತಿ ನನ್ನುಸಿರು

♫♫♫♫♫♫♫♫♫♫♫♫

ಸವಿಯಾದ ಮಾತಾಡ ಬಲ್ಲೆ

ಕವಿಯಾಗಿ ನಾ ಹಾಡ ಬಲ್ಲೆ

ಸಂತೋಷ ನಾ ಹಂಚಬಲ್ಲೆ

ನೋವೆಲ್ಲಾ ನಾ ನುಂಗಬಲ್ಲೆ

ತಂಗಾಳಿ ನಾನಾಗಿ ಬರಬಲ್ಲೆ

ಬಿರುಗಾಳಿ ನಾನಾಗಬಲ್ಲೆ

ಎಲ್ಲೆ ನೀನಿರು ಹೇಗೆ ನೀನಿರು

ಎಂದು ಸ್ನೇಹದಿಂದಿರು

ಸೊ ವಾಟ್ ಈಸ್ ಲೈಫ್

ಲೈಫ್ ಈಸ್ ಗೇಮ್

ದೆನ್ ಪ್ಲೇ ಇಟ್ ಸೇ

ಹಗಲು ಇರುಳು ಇರುವಂತೆ

ಸೋಲು ಗೆಲುವು ಜೊತೆಯಂತೆ

ಉಲ್ಲಾಸ ಸಂತೋಷ

ಎಂದೆಂದೂ ಇರದೆಂದು

ನೋವೊಂದೆ ಸುಖವೊಂದೆ

ಬಾಳಲ್ಲಿ ಬರದೆಂದು

ಸತ್ಯವಾ ನಾ ಅರಿತಿರುವೇ

ಪ್ರೇಮ ಪ್ರೀತಿ ನನ್ನುಸಿರು

ನ್ಯಾಯ ನೀತಿ ನನ್ನುಸಿರು

ಎವೆರಿ ಬಡಿ

ಲಾಲ ಲಾಲ ಲಾ ಲಾ ಲಾ

ಲಾಲ ಲಾಲ ಲಾ ಲಾ ಲಾ

ಲಾ ಲಾ ಲಾ ಲಾ ಲಾ ಲಾ

ಲಾ ಲಾ ಲಾ ಲಾ ಲಾ ಲಾ

ಲಾ……………….

ಲಾ……………….

Leave a Reply

Your email address will not be published. Required fields are marked *