ಅರಳುತಿದೆ ಮೋಹ – Araluthide Moha Song Lyrics in kannada – Nanobba Kalla Kannada Movie Songs Lyics

ಚಿತ್ರ: ನಾನೊಬ್ಬ ಕಳ್ಳ
ಗಾಯಕರು: ಡಾ.ರಾಜ್ & ಎಸ್.ಜಾನಕಿ
ಸಂಗೀತ: ರಾಜನ್ನಾಗೇಂದ್ರ
ಸಾಹಿತ್ಯ: ಚಿ.ಉದಯಶಂಕರ್


ಅರಳುತಿದೆ ಮೋಹ ಹೃದಯದಲಿ ದಾಹ
ಇಂದೇಕೆ ಹೀಗೇಕೆ ರೀತಿ ನನಗೇಕೆ
ಒಲವಿನ ಕರೆ ವಿರಹದ ಸೆರೆ
ಸೇರಿ ನಮಗಾಗಿ ತಂದಂಥ
ಹೊಸ ಕಾಣಿಕೆ…..
ಅರಳುತಿದೆ ಮೋಹ ಹೃದಯದಲಿ ದಾಹ
ಇಂದೇಕೆ ಹೀಗೇಕೆ ರೀತಿ ನನಗೇಕೆ
♫♫♫♫♫♫♫♫♫♫♫♫

ನಿನ್ನ ಮೊಗವು ನಿನ್ನ ನಗುವು
ಬಯಕೆಯ ತುಂಬುತ ಕುಣಿಸಿದೆ
ನಿನ್ನ ಪ್ರೇಮ ಸೆಳೆದು ನನ್ನನು
ಸನಿಹ ಕರೆಯಲು ನಾ ಬಂದೆ
ನಿನ್ನ ಮನಸು ನಿನ್ನ ಸೊಗಸು
ಹೊಸ ಹೊಸ ಕನಸನು ತರುತಿದೆ
ಎಂದೆಂದೂ ಹೀಗೆ ಸೇರಿ ಬಾಳುವ
ಆಸೆ ಮನದಲಿ ನೀ ತಂದೆ
ಆಸೆ ಮನದಲಿ ನೀ ತಂದೆ
ಅರಳುತಿದೆ ಮೋಹ ಹೃದಯದಲಿ ದಾಹ
ಇಂದೇಕೆ ಹೀಗೇಕೆ ರೀತಿ ನನಗೇಕೆ
ಒಲವಿನ ಕರೆ ವಿರಹದ ಸೆರೆ
ಸೇರಿ ನಮಗಾಗಿ ತಂದಂಥ
ಹೊಸ ಕಾಣಿಕೆ……
ಅರಳುತಿದೆ ಮೋಹ ಹೃದಯದಲಿ ದಾಹ
ಇಂದೇಕೆ ಹೀಗೇಕೆ ರೀತಿ ನನಗೇಕೆ
♫♫♫♫♫♫♫♫♫♫♫♫

ಹಾಹಾಹಾ
….ಹಹಹಾಹಾ
…..
ಲಹಾ
ಅಹಾ ಲಲ ಲಲಾ

ಮಾತಲ್ಲಿ ರಸಿಕ ಪ್ರೀತಿಲಿ ರಸಿಕ
ಬಲ್ಲೆನು ರಸಿಕರ ರಾಜನೇ
ನನ್ನ ಹೃದಯ ರಾಜ್ಯ ನೀಡುವೆ
ಸೋತು ಇಂದು ನಾನು ನಿನ್ನಲ್ಲಿ
ನೀ ನನ್ನ ಜೀವ ನಿನ್ನಲ್ಲೆ ಜೀವ
ಜೀವದಿ ಜೀವವು ಬೆರೆತಿದೆ
ನಿನ್ನಿಂದ ನಾನು ಬೇರೆಯಾದರೆ
ಜೀವ ಉಳಿಯದು ನನ್ನಲ್ಲಿ
ಜೀವ ಉಳಿಯದು ನನ್ನಲ್ಲಿ
ಅರಳುತಿದೆ ಮೋಹ ಹೃದಯದಲಿ ದಾಹ
ಇಂದೇಕೆ ಹೀಗೇಕೆ ರೀತಿ ನನಗೇಕೆ
ಒಲವಿನ ಕರೆ ವಿರಹದ ಸೆರೆ
ಸೇರಿ ನಮಗಾಗಿ ತಂದಂಥ

ಹೊಸ ಕಾಣಿಕೆ……
ಅರಳುತಿದೆ ಮೋಹ ಹೃದಯದಲಿ ದಾಹ
ಲಾ ಹಾ
ಹಾ ಹಾ
ಹಾ ಹಾ



Leave a Reply

Your email address will not be published. Required fields are marked *