ಚಿತ್ರ: ಕುಶಲವೇ ಕ್ಷೇಮವೇ
ಗಾಯನ: ರಾಜೇಶ್ ಕೃಷ್ಣನ್
ಟೆಲಿಫೋನ್ ಗೆಳತೀ ವೆಲ್ ಕಮ್ ವೆಲ್ ಕಮ್
ಈ ಹೃದಯವೆ ನಿನಗೇ ಕಿಂಗ್ಡಮ್ ಕಿಂಗ್ಡಮ್
ಕಣ್ಣಾಮುಚ್ಚೆ ಕಾಡೆ ಗೂಡೆ ಯಾಕಮ್ಮ
ಕಣ್ಣು ಮುಚ್ಚಿ ಮನಸಿಗೆ ಬಂದು ಸೇರಮ್ಮ
ಹಾಡುವ ಸ್ವರವೆಲ್ಲವೂ ನಿನ್ನ ಉಸಿರಾಟ
ಆದರೂ ಪ್ರತಿ ಉಸಿರಲೂ ನಿನ್ನ ಹುಡುಕಾಟ
ಟೆಲಿಫೋನ್ ಗೆಳತೀ ವೆಲ್ ಕಮ್ ವೆಲ್ ಕಮ್
ಈ ಹೃದಯವೆ ನಿನಗೇ ಕಿಂಗ್ಡಮ್ ಕಿಂಗ್ಡಮ್
ಗಾಳಿ ಇರದೆ ಗಂಧವಿಲ್ಲ ಬೆಳಕು ಇರದೆ ಬ.ಣ್ಣವಿಲ್ಲ
ನಿನ್ನ ನೆನಪು ಇರದೇ ಎದೆಯಲಿ ಉಸಿರಿಲ್ಲ ಗೆಳತಿ ಉಸಿರಿಲ್ಲಾ
ಕನಸು ಇರದೇ ಕಣ್ಗಳಿಲ್ಲ ಚೆಲುವು ಇರದೇ ಹೆಣ್ಗಳಿಲ್ಲ
ನಿನ್ನ ನೆರಳು ಸೋಕದೆ ಬದುಕಲಿ ಬಲವಿಲ್ಲ ಗೆಳೆತಿ ಬಲವಿಲ್ಲ
ತಿಂಗಳ ಬೆಳದಿಂಗಳ ತಂಪಲ್ಲಿಯೂ ಬೆವರಿಳಿಸೋ
ನೆತ್ತಿಯ ಸುಡುಸೂರ್ಯನ ಬೇಗೆಯಲೂ ತಂಪಿರಿಸೋ
ಒಲವಿನ ಆ ಕೊರಳಿನ ಧ್ವನಿ ಕೇಳುತಿದೆ
ಆದರೂ ಆ ಹೃದಯದ ಮುಖ ಕಾಣಿಸದೇ
ಕಣ್ಣಾಮುಚ್ಚೆ ಕಾಡೆಗೂಡೆ ಯಾಕಮ್ಮ
ಕಣ್ಣು ಮುಚ್ಚಿ ಮನಸಿಗೆ ಬಂದು ಸೇರಮ್ಮ
ಟೆಲಿಫೋನ್ ಗೆಳತೀ ವೆಲ್ ಕಮ್ ವೆಲ್ ಕಮ್
ಈ ಹೃದಯವೆ ನಿನಗೇ ಕಿಂಗ್ಡಮ್ ಕಿಂಗ್ಡಮ್
ಓ… ನಿನ್ನ ಕಂಡ ಮೇಲೆ ಕಣ್ಣು ಕುರುಡು ಆಗಿ ಹೋದರೂನು
ನಿನ್ನ ಕಣ್ಣ ಬೆಳಕಲ್ಲಿಯೇ ನಾ ನಡೆಯುವೆನೂ ಗೆಳೆಯಾ ನಡೆಯುವೆನು
ನಿನ್ನ ಕಾಣದೇನೆ ನಾನು ಮಣ್ಣು ಸೇರಿ ಹೋದರೂನು
ಮಣ್ಣ ಒಳಗು ನಿನ್ನ ನೆನಪಲೇ ಉಳಿಯುವೆನು ಗೆಳತಿ ಉಳಿಯುವೆನು
ಗೆಳತಿಯೇ ನಿನ್ನ ನೋಡಲು ಪ್ರತಿ ಕ್ಷಣವು ಕಾಯುವೆನು
ಅರೆಕ್ಷಣ ನೀ ಸಿಕ್ಕರೂ ನಾ ನಗುತಲೆ ಸಾಯುವೆನು
ಜನ್ಮಕೂ ಪ್ರತಿ ಜನ್ಮಕೂ ನೀ ನನ್ನವನು
ನಿನ್ನ ಸ್ವರಗಳೇ ನನ್ನ ದಾರಿಗೆ ನಗೆ ಹೂವುಗಳು
ಕಣ್ಣಾಮುಚ್ಚೆ ಕಾಡೆಗೂಡೆ ಯಾಕಯ್ಯಾ
ಕಣ್ಣು ಮುಚ್ಚಿ ಮನಸಿಗೆ ಬಂದು ಸೇರಯ್ಯಾ
ಟೆಲಿಫೋನ್ ಗೆಳತೀ ವೆಲ್ ಕಮ್ ವೆಲ್ ಕಮ್
ಈ ಹೃದಯವೆ ನಿನಗೇ ಕಿಂಗ್ಡಮ್ ಕಿಂಗ್ಡಮ್
ಟೆಲಿಫೋನ್ ಗೆಳತೀ ವೆಲ್ ಕಮ್ ವೆಲ್ ಕಮ್
ಈ ಹೃದಯವೆ ನಿನಗೇ ಕಿಂಗ್ಡಮ್ ಕಿಂಗ್ಡಮ್