ತಾರೆಯು ಬಾನಿಗೆ – Thaareyu Baanige Thaavare neerige Song Lyrics in Kannada – Biligiriya banadalli Kannada Movie Songs

ಚಿತ್ರ: ಬಿಳಿಗಿರಿಯ ಬನದಲ್ಲಿ

ಗಾಯಕರು: ಎಸ್.ಜಾನಕಿ, ಎಸ್.ಪಿ. ಬಿ

ತಾರೆಯು ಬಾನಿಗೆ
ತಾವರೆ ನೀರಿಗೆ
ತಾರೆಯು ಬಾನಿಗೆ
ತಾವರೆ ನೀರಿಗೆ
ಹೂವೆಲ್ಲ ವನದೇವಿ ಮುಡಿಗೆ
ನೀ ನನ್ನ ಬಾಳಿಗೆ
ಆಹಾ ಮುತ್ತೆಲ್ಲ ಕಡಲಲ್ಲಿ
ಬಂಗಾರ ನೆಲದಲ್ಲಿ ಇರುವಂತೆ
ನೀ… ನನ್ನಲ್ಲಿ ಕಣ್ಣಲ್ಲಿ ಮನದಲ್ಲಿ
ತಾರೆಯು ಬಾನಿಗೆ
ತಾವರೆ ನೀರಿಗೆ
ಹೂವೆಲ್ಲ ವನದೇವಿ ಮುಡಿಗೆ
ನೀ ನನ್ನ ಬಾಳಿಗೆ
♫♫♫♫♫♫♫♫♫♫

ಸೂರ್ಯ ಬಾನಲಿ
ಬೆಳಕು ಭೂಮಿಯಲ್ಲಿ
ಹೂಗಳು ಲತೆಯಲಿ
ನೀನೆಂದು ನನ್ನಲಿ
ಮೋಡ ಬಾನಲಿ
ಮಳೆಯು ಭೂಮಿಯಲ್ಲಿ
ದುಂಬಿಯು ಹೂವಲಿ
ನಾನೆಂದು ನಿನ್ನಲಿ
ನಾನೆಂದೂ ನಿನ್ನಲಿ
ತಾಳಿಯು ಕೊರಳಿಗೆ
ಉಂಗುರ ಬೆರಳಿಗೆ
ತಾಳಿಯು ಕೊರಳಿಗೆ
ಉಂಗುರ ಬೆರಳಿಗೆ
ಹೂದಂಡೆ ಹೆಣ್ಣ ಮುಡಿಗೆ
ನೀ ನನ್ನ ಬಾಳಿಗೆ
ಆಹಾ ಮುತ್ತೆಲ್ಲ ಕಡಲಲ್ಲಿ
ಬಂಗಾರ ನೆಲದಲ್ಲಿ
ಇರುವಂತೆ
ನೀನನ್ನಲ್ಲಿ ಕಣ್ಣಲ್ಲಿ ಮನದಲ್ಲಿ
ತಾರೆಯು ಬಾನಿಗೆ
ತಾವರೆ ನೀರಿಗೆ
ಹೂವೆಲ್ಲ ವನದೇವಿ ಮುಡಿಗೆ
ನೀ ನನ್ನ ಬಾಳಿಗೆ

♫♫♫♫♫♫♫♫♫♫

ನಿನ್ನಾ ಕಾಣದಾ
ದಿನವೂ ವರುಷದಂತೆ
ನಿನ್ನನು ಸೇರಲು
ಯುಗವೊಂದು ನಿಮಿಷದಂತೆ

ನಿನ್ನಾ ನೋಡಲು
ಬಯಕೆ ಹೃದಯದಲ್ಲಿ
ನಾಚುತ ಕರಗಿದೆ
ನನ್ನಾಸೆ ನಿನ್ನಲಿ
ನನ್ನಾಸೆ ನಿನ್ನಲಿ
ತಾಳಿಯು ಕೊರಳಿಗೆ
ಉಂಗುರ ಬೆರಳಿಗೆ
ತಾಳಿಯು ಕೊರಳಿಗೆ
ಉಂಗುರ ಬೆರಳಿಗೆ
ಹೂದಂಡೆ ಹೆಣ್ಣ ಮುಡಿಗೆ
ನೀ ನನ್ನ ಬಾಳಿಗೆ
ಆಹಾಮುತ್ತೆಲ್ಲ ಕಡಲಲ್ಲಿ
ಬಂಗಾರ ನೆಲದಲ್ಲಿ ಇರುವಂತೆ
ನೀನನ್ನಲ್ಲಿ

ಕಣ್ಣಲ್ಲಿ

ಮನದಲ್ಲಿ

ತಾರೆಯು ಬಾನಿಗೆ
ತಾವರೆ ನೀರಿಗೆ
ಹೂವೆಲ್ಲ ವನದೇವಿ ಮುಡಿಗೆ
ನೀ ನನ್ನ ಬಾಳಿಗೆ
ನೀ ನನ್ನ ಬಾಳಿಗೆ
ಲಾ ಲಾ ಲಾಲಾಲಾಲ
ಹಾಆಹಹಾ


Thaareyu Baanige SOng Karaoke with Scrolling Lyrics by PK Music


Leave a Reply

Your email address will not be published. Required fields are marked *