ಚಿತ್ರ: ಕಿಲಾಡಿ ಕಿಟ್ಟು
ಹೂವಂತೆ ಹೆಣ್ಣು ನಗುತಿರಬೇಕು
ಮನದಲ್ಲಿ ಶಾಂತಿ ತುಂಬಿರಬೇಕು
ಸಂತೋಷ ತರುವ
ಸೌಭಾಗ್ಯ ಕೊಡುವ
ಮನವ ಗೆಲುವ
ಒಲವ ಸುರಿವ ದೇವತೆಯಾಗಿ
ಹೂವಂತೆ ಹೆಣ್ಣು ನಗುತಿರಬೇಕು
♫♫♫♫♫♫♫♫♫♫♫♫
321
ಬಂಗಾರವಲ್ಲ ಸಿಂಗಾರಕಲ್ಲ
ಕೊರಳಿನಲಿ ಮೆರೆದಿರಲು
ಮಾಂಗಲ್ಯವಿಲ್ಲ
ಸುಮವ ಕೊಡುವ
ಲತೆಗೆ ಹಸಿರೇ ಉಸಿರಾಗಿದೆ
ಗೃಹಿಣಿ ಇರುವ ಗುಡಿಗೆ
ತಾಳಿ ಬೆಳಕಾಗಿದೆ
ಸಂತೋಷವೇನು
ನೋವಾದರೇನು
ವಿರಸ ಮರೆತು
ಸರಸದಿಂದ ಬಾಳಲು ಸೊಗಸು
ಹೂವಂತೆ ಹೆಣ್ಣು ನಗುತಿರಬೇಕು
ಮನದಲ್ಲಿ ಶಾಂತಿ ತುಂಬಿರಬೇಕು
ಸಂತೋಷ ತರುವ
ಸೌಭಾಗ್ಯ ಕೊಡುವ
ಮನವ ಗೆಲುವ
ಒಲವ ಸುರಿವ ದೇವತೆಯಾಗಿ
ಹೂವಂತೆ ಹೆಣ್ಣು
ನಗುತಿರಬೇಕು
♫♫♫♫♫♫♫♫♫♫♫♫
321
ಆಕಾಶ ರವಿಯ ಈ ಭೂಮಿ ಗಿರಿಯ
ಮರೆಯುವುದೆ ತೊರೆಯುವುದೆ
ಸಂಬಂಧ ನೂಕಿ
ಒಲಿದ ಹೃದಯ
ಬೆರೆತ ಜೀವ ಬಿಡದೆಂದಿಗೂ
ಮದುವೆ ತಂದ ಬೆಸುಗೆ ಕೆಡದು
ಎಂದೆಂದಿಗೂ
ಈ ರೋಷ ತಂದ
ಆವೇಶದಿಂದ ಸಹನೆ ಮರೆವೆ
ಕಡೆಗೆ ಕೆಡುವೆ ಯಾತನೆ ಪಡುವೆ
ಹೂವಂತೆ ಹೆಣ್ಣು ನಗುತಿರಬೇಕು
ಮನದಲ್ಲಿ ಶಾಂತಿ ತುಂಬಿರಬೇಕು
ಸಂತೋಷ ತರುವ
ಸೌಭಾಗ್ಯ ಕೊಡುವ
ಮನವ ಗೆಲುವ
ಒಲವ ಸುರಿವ ದೇವತೆಯಾಗಿ
ಹೂವಂತೆ ಹೆಣ್ಣು ನಗುತಿರಬೇಕು
Hoovante hennu Naguthirabeku Lyrics
Huvanthe hennu Nagutirabeku Lyrics