ಚಿತ್ರ: ವಜ್ರಕಾಯ
ಸಾಹಿತ್ಯ: ಕೆ ಕಲ್ಯಾಣ್
ಗಾಯನ: ಸಂತೋಷ್
ಸಂಗೀತ: ಅರ್ಜುನ್ ಜನ್ಯ
ನಟ: ಶಿವರಾಜ್ ಕುಮಾರ್
ಒಂದು ಒಳ್ಳೆ ಸೂಚನೆ
ಅಸ್ತು ಅನ್ನಿ ಸುಮ್ಮನೆ
ಕಾಣ ಹೊರಟೆ
ಅಮ್ಮ ಎಂಬ ವಿಸ್ಮಯಾನೆ
ಎಲ್ಲೂ ಸಿಗದ ಬೆಳಕೊಂದು
ಕಾಣುವ ಸಡಗರ
ಅಂಬೆಗಾಲು ಇಡುತಿರುವೆ
ಮಡಿಲಿನ ಹತ್ತಿರ
ಉಸಿರೇ ನನ್ನುಸಿರೇ ನೀನಮ್ಮ
ಉಸಿರೇ ಉಸಿರೇ ನನ್ನುಸಿರೇ ನನ್ನಮ್ಮ
ಉಸಿರೇ ನನ್ನುಸಿರೇ ನೀನಮ್ಮ
ಉಸಿರೇ ಉಸಿರೇ ನನ್ನುಸಿರೇ ನನ್ನಮ್ಮ
ಒಂದು ಒಳ್ಳೆ ಸೂಚನೆ
ಅಸ್ತು ಅನ್ನಿ ಸುಮ್ಮನೆ
ಕಾಣ ಹೊರಟೆ
ಅಮ್ಮ ಎಂಬ ವಿಸ್ಮಯಾನೆ
♫♫♫♫♫♫♫♫♫♫♫♫
ಎಲ್ಲಿ ಇರುತಾಳೋ ಹೇಗೆ ಇರುತಾಳೋ
ನನ್ನ ನಿಜದೇವತೆ ಅಮ್ಮ
ಅವಳು ನಿಜವಾಗಿ ಸಿಗಲೇಬೇಕೀಗ
ಬರಲಿ ಬೇಗ ನಾಳೆ
ಎಂದು ಧಣಿವಾಗದು ಈ ಪಯಣ
ಪುಣ್ಯ ಎದೆಯ ಅರುಣ
ಕಾಡು ಮೇಡು ಬೆಟ್ಟ ಬಯಲೇ
ಸುತ್ತಲು ತುಂಬಿವೆ
ನನ್ನ ಅಮ್ಮ ನನಗಾಗಿ ಎಲ್ಲಿಯೂ ಕ್ಷೇಮವೇ
ಉಸಿರೇ ನನ್ನುಸಿರೇ ನೀನಮ್ಮ ಉಸಿರೇ
ಉಸಿರೇ ಉಸಿರೇ ನನ್ನುಸಿರೇ ನನ್ನಮ್ಮ
ಒಂದು ಒಳ್ಳೆ ಸೂಚನೆ
ಅಸ್ತು ಅನ್ನಿ ಸುಮ್ಮನೆ
ಕಾಣ ಹೊರಟೆ
ಅಮ್ಮ ಎಂಬ ವಿಸ್ಮಯಾನೆ
♫♫♫♫♫♫♫♫♫♫♫♫
ಬೀಸೋ ಗಾಳಿಲು ನನ್ನ ಉಸಿರಾಟ
ನಿನಗೆ ತಾಕಬೇಕು ಅಮ್ಮ
ನಡೆದು ಬರುವಾಗ ನೆರಳ ಶಬ್ದಾನು
ನಿನಗೆ ಕೇಳಬೇಕು
ನಾನು ನಿನ್ನ ಹುಡುಕೋ ಹಾಗೆ
ನೀನು ಹುಡುಕಿರಬಹುದೇ
ಒಮ್ಮೆ ಅವಳು ಕಂಡು ಕಂದ
ಓಡಿ ಬಾ ಅಂದರೆ
ನನ್ನೇ ನಾನು ಹೊಲಿದು ಕೊಡುವೆ
ಅವಳ ಕಾಲಿಗೆ
ಉಸಿರೇ ಉಸಿರೇ ನನ್ನುಸಿರೇ ನೀನಮ್ಮ
ಉಸಿರೇ ಉಸಿರೇ ಉಸಿರೇ
ನನ್ನುಸಿರೇ ನನ್ನಮ್ಮ
ಉಸಿರೇ ಉಸಿರೇ
ನನ್ನುಸಿರೇ ನಿನಮ್ಮ ಉಸಿರೇ
ಉಸಿರೇ ನನ್ನುಸಿರೇ ನನ್ನಮ್ಮ
ದಾರಿ ಬೇಗ ಸಾಗಲಿ
ಅಮ್ಮ ಬೇಗ ಸಿಕ್ಕಲಿ
ಜಗವೇ ಕೂಗಿ ಹೇಳಲಿ
ನಾನಲ್ಲ ತಬ್ಬಲಿ
ನಾನಲ್ಲ ತಬ್ಬಲಿ
Ondu olle soochane Lyrics
Usire Nannusire Lyrics
usire vajrakaya song lyrics