♪ Film: JACKSON
♪ Music: VEERSAMARTH
♪ Song: ENDENDIGU NAGUTHIRU NEENU
♪ Singer: CHETHAN
♪ Lyrics: CHETHAN KUMAR – (BHARJARI)
ಎಂದೆಂದಿಗೂ ನಗುತಿರು
ನೀನು
ನೀನು
ನಿನ್ನ ನಗುವಲ್ಲೆ ನಗುವೆನು ನಾನು
ನಿನ್ನ ನಗುವಿಗೆ ಬೆಲೆಯನು ಕಟ್ಟುವ
ಬೆಲೆ ಇದೇಯೇನು ಭುವಿಯಲಿ ಹೇಳು
ಆಕಾಶದ ಬುಟ್ಟಿಯ ಒಳಗೆ
ಕೈ ಹಾಕಿ ತರುವೆನು ನಾನು
ಬಿಳಿ ಹಲ್ಲಿನ ಚಂದ್ರನ ಹೊಳಪನು
ಉಡುಗೊರೆಯಾಗಿ ತೆಗೆದುಕೊ ನೀನು
ಯಾಕೆಂದರೆ ಬರ್ತ್ಡೇ
ನಿನ ಬರ್ತ್ಡೇ ನಿನ ಬರ್ತ್ಡೇ
ಎಂದೆಂದಿಗೂ ನಗುತಿರು
ನೀ ನಗುತಿರು ನೀ ನಗುತಿರು
ತುಂಬಿರಲಿ ಹರುಷವು
ಪ್ರತಿ ವರುಷವು ಪ್ರತಿ
ನಿಮಿಷವೂ
ಜೊತೆಗಿರುವೆನು ಎಂದಿಗೂ
ನಿನ್ನೊಂದಿಗೆ ಎಂದೆಂದಿಗೂ
ಎಂದೆಂದಿಗೂ ನಗುತಿರು
ನೀನು
ನೀನು
ನಿನ್ನ ನಗುವಲ್ಲೆ ನಗುವೆನು ನಾನು
ಕಣ್ಣಲ್ಲೇ ಹೇಳು ನೀನು
ನಿನ್ನ ಬಯಕೆಯ ತಿಳಿಯುವೆ ನಾನು
ಆ ಮುಗಿಲಿಗೆ ಏಣಿಯ ಎಣೆದು
ಸಾಗರದಾಚೆಗೆ ಕಟ್ಟುವೆ ಸೇತುವೆ
ಮತ್ತೊಮ್ಮೆ ಕೇಳುವೆ ನಾನು
ಕಣ್ಣೊಳಗೆ ನಿಲ್ಲು ನೀನು
ಹೂ ಗಂಧವ ಮುಷ್ಠಿಯಲಿಡಿದು
ನಿನ್ನಯ ಬೆರಳಿಗೆ ಉಂಗುರ ಇಡುವೆ
ಹಣೆ ದುಂಬಿಯ ಅಂಟಿಸಿ ಬಿಡುವೆ
ಕಾಲುಂಗುರ ತೊಡಿಸಿ ಬಿಡುವೆ
ಕೈ ಬಳೆಗಳ ಸಪ್ಪಳದೊಳಗೆ
ನನ್ನ ಹುಸಿರ ಮುಚ್ಚಿಕೊಡುವೆ
ಯಾಕೆಂದರೆ ಬರ್ತ್ಡೇ
ನಿನ ಬರ್ತ್ಡೇ ನಿನ ಬರ್ತ್ಡೇ
ಎಂದೆಂದಿಗೂ ನಗುತಿರು
ನೀ ನಗುತಿರು ನೀ ನಗುತಿರು
ತುಂಬಿರಲಿ ಹರುಷವು
ಪ್ರತಿ ವರುಷವು ಪ್ರತಿ ನಿಮಿಷವೂ
ಜೊತೆಗಿರುವೆನು ಎಂದಿಗೂ
ನಿನ್ನೊಂದಿಗೆ ಎಂದೆಂದಿಗೂ
ಎದೆಗಂಟಿದ ಶಬ್ದವು ನೀನು
ನಿಶ್ಯಬ್ದದ ಶಬ್ದವು ನಾನು
ನಿನ್ನ ಜುಮುಕಿಯ ಕೀಟಲೆ ಮಾತಿಗೆ
ಪ್ರೇಕ್ಷಕನಾಗಿ ಕಾಯುತಲಿರುವೆ
ಎದುರಾದ ಸ್ವಪ್ನವು ನೀನು
ಎದುರಾಗಿ ಬರಲೇ ನಾನು
ಎದುರಾಗುವ ನಿನ್ನಯ ಹೆಜ್ಜೆಗೆ
ಬಣ್ಣದ ಲಜ್ಜೆಯ ಲೇಪನ ಕೊಡುವೆ
ನಿನ್ನ ಕಣ್ಣಿಗೆ ಕಪ್ಪಾಗಿರುವೆ
ಒಂದೊಳ್ಳೆ ಕಪ್ಪಾಗಿರುವೆ
ನಿನ್ನ ಕಲ್ಪನೆ ಮೆಚ್ಚುವ ಹಾಗೆ
ನೆನಪಿನ ಹೂವಗಳ ಗುಚ್ಛವ ಕೊಡುವೆ
ಯಾಕೆಂದರೆ ಬರ್ತ್ಡೇ
ನಿನ ಬರ್ತ್ಡೇ ನಿನ ಬರ್ತ್ಡೇ
ಎಂದೆಂದಿಗೂ ನಗುತಿರು
ನೀ ನಗುತಿರು ನೀ ನಗುತಿರು
ತುಂಬಿರಲಿ ಹರುಷವು
ಪ್ರತಿ ವರುಷವು ಪ್ರತಿ
ನಿಮಿಷವೂ
ಜೊತೆಗಿರುವೆನು ಎಂದಿಗೂ
ನಿನ್ನೊಂದಿಗೆ ಎಂದೆಂದಿಗೂ
Yendendigu nagutiru neenu Lyrics
Endendigu Jackson Song Lyrics