ಕಣ್ಣಿಗೆ ಕಾಣದ – Kammige Kaanada Naatakakaara Lyrics – Olavina udugore – Ambarish – M Rangarao


ಚಿತ್ರ: ಒಲವಿನ ಉಡುಗೊರೆ
ಸಂಗೀತ: ಎಂ.ರಂಗರಾವ್

ಕಣ್ಣಿಗೆ ಕಾಣದ ನಾಟಕಕಾರ

ನಿನಗೇ ನನ್ನ ನಮಸ್ಕಾರ

ಪಾತ್ರಗಳಲ್ಲಿ ತಿರುವುಗಳೆನಿತೋ…

ಪಾತ್ರಗಳಲ್ಲಿ ತಿರುವುಗಳೆನಿತೋ

ಬಲ್ಲವ ನೀನೇ ಸೂತ್ರದಾರ

ಆಆಆ ಆ ಆ ಆ

ಕಣ್ಣಿಗೆ ಕಾಣದ ನಾಟಕಕಾರ

ನಿನಗೇ ನನ್ನ ನಮಸ್ಕಾರ

♫♫♫♫♫♫♫♫♫♫♫♫

ಶಿಶುವೆ ಜೋಗುಳ ಹಾಡುವುದು

ಇರುಳಲಿ ಸೂರ್ಯನು ತೋರುವನು

ಮಹಿಮನೆ ನೀ ನೆನೆದಾಗ

ಬಡವ ಬಲ್ಲಿದ ಆಗುವನು

ಕುರುಡನು ಎಲ್ಲವ ನೋಡುವನು

ಅವನಲ್ಲಿ ನೀ ಒಲಿದಾಗ

ನೆನೆದದು ಎಲ್ಲಾ ನಡೆದೇ ಹೋದರೆ

ದೇವನೆ ನಿನಗೆ ಬೆಲೆಯಲ್ಲಿ……

ನೆಡೆಯುವುದೆಲ್ಲ ಮುಂಚೆಯೇ ತಿಳಿದರೆ

ಮಾನವ ಗರ್ವಕ್ಕೆ ಮಿತಿಯೆಲ್ಲಿ

man proposes ಹಾ ಹಾ

god disposes

ಕಣ್ಣಿಗೆ ಕಾಣದ ನಾಟಕಕಾರ

ನಿನಗೇ ನನ್ನ ನಮಸ್ಕಾರ

♫♫♫♫♫♫♫♫♫♫♫♫

ಪ್ರೇಮಿಗಳನ್ನು ಬೇರ್ಪಡಿಸಿ

ನೂತನ ಜೋಡಿಯ ಸೇರಿಸುವೆ

ಬೊಂಬೆಯ ರೀತಿ ಆಡಿಸುವೆ

ಮಾವಿಗೆ ಬೇವಿನ ರುಚಿ ಬೆರೆಸಿ

ನಾಲಿಗೆ ಅದನ್ನು ಅನುಭವಿಸಿ

ಹೀರುವ ಹಾಗೆ ಮಾಡಿಸುವೆ

ಮಾನವನಾಗಿ ಹುಟ್ಟಿ ನೀ ಬಂದರೆ

ಕಷ್ಟದ ಅರ್ಥ ನೀ ತಿಳಿವೆ…….

ಪ್ರೇಮಿಸಿ ನೀನು ವಿರಹದಿ ಬೆಂದರೆ

ನಮ್ಮಯ ನೋವನು ನೀ ಅರಿವೆ

they say love is god

but i say

god doesnt know

anything about love

ಕಣ್ಣಿಗೆ ಕಾಣದ ನಾಟಕಕಾರ

ನಿನಗೇ ನನ್ನ ನಮಸ್ಕಾರ

ನಮಸ್ಕಾರ

Leave a Reply

Your email address will not be published. Required fields are marked *