ಕಣ್ಣ ಗುಡ್ಡೆ – Kanna Gudde meliruva Lyrics – Dheemaku Kannada Movie



ಕಣ್ಣ
ಗುಡ್ಡೆ ಮೇಲಿರುವ ಬಿಂಬ ನಾನೆ ತಾನೆ
ಕಣ್ಣ ಗುಡ್ಡೆ ಮೇಲಿರುವ ಬಿಂಬ ನಾನೆ ತಾನೆ
ನಿನ್ನ ತುಟಿಯ ಮೇಲಿರುವ ನಗೆಯು ನನಗೆ ತಾನೆ
ಕಣ್ಣ ಅಂದ ಹೊಗಳಿದರೆ ಚೆಂದ
ತುಟಿಯ ಜೇನ ಹೀರಿದರಾನಂದ
ಹೊಗಳಿದರೆ ಕವಿಯಾಗುವೆ ಸ್ಪೂರ್ತಿ ನಾನೆ
ಪ್ರೀತಿಸುವ ಪ್ರೇಮಿ ನಾನು ಪ್ರೇಯಸಿ ನೀನೆ
ನಾನು ನೀನು ಸೇರಿ ಹಾಡಿದರದು ಡ್ಯುಯಟ್ ತಾನೆ

ಕಣ್ಣ
ಗುಡ್ಡೆ ಮೇಲಿರುವ ಬಿಂಬ ನಾನೆ ತಾನೆ
ನಿನ್ನ ತುಟಿಯ ಮೇಲಿರುವ ನಗೆಯು ನನಗೆ ತಾನೆ

ಆಕಾಶ
ಮೇಲಿರುವುದು ನೀನು ಕೆಳಗಿರುವೆ
ಈ ವಿಷಯ ಇಲ್ಲಿವರೆಗೂ ಗೊತ್ತಿರಲಿಲ್ಲ ನನಗೆ
ಅದಕೆ ತಾನೆ ಹೇಳುತಿರುವೆ ಕೇಳೆ ಚೆಲುವೆ
ಪ್ರಾಸ ಒಂದಿದ್ದರೆ ಕವಿ ನೀನಾಗೊಲ್ಲ ಗುರುವೆ
ಈ ರೀತಿ ಚುಚ್ಚಿ ಚುಚ್ಚಿ ಮಾತಾಡುವುದು ಯಾಕೆ
ಕವಿ ನೀನು ಕವಿಯಾಗಲಿ ಅನ್ನುವುದೇ ನನ್ನಾಸೆ
ಆಸೆ ಅಲ್ಲ ಪ್ರಾಣ ಹಿಂಡುವ ದುರಾಸೆ

ಕಣ್ಣ
ಗುಡ್ಡೆ ಮೇಲಿರುವ ಬಿಂಬ ನಾನೆ ತಾನೆ
ಹುಹುಹು ನನನ ನನಗೆ ತಾನೆ

ನಾನನನ
ನಾನನನ ನಾನನನ

ಪ್ರೀತಿಸುವ
ಹುಡುಗರೆಲ್ಲ ಕವಿಯಾಗಲು ರೂಲಿಲ್ಲ
ಕುಣಿವವನು ನೆಲಡೊಂಕು ಅಂತ ಹೇಳುವುದಿಲ್ಲ
ಈ ರೀತಿ ಪ್ರಶ್ನಿಸಿದರೆ ಮುಂದೆ ನಾ ಹಾಡಲ್ಲ
ಮನಸು ಒಂದಿದ್ದರೆ ಮಾರ್ಗ ಇದಯೋ ನಲ್ಲ
ಕವಿತೆ ನಾ ಬರಯದಿದ್ರೆ ನನ್ನ ಪ್ರೀತಿ ಸುಳ್ಳ
ಕಾರಣವ ಹೇಳುವವನು ಪ್ರೀತಿಗೆ ಅರ್ಹನೆ ಅಲ್ಲ
ನನ್ನ ನೀನು ಪ್ರೀತಿಸುತ್ತಿರುವುದು ನಿಜವೇ ಅಲ್ಲ

ಚಂದಮಾಮ
ತಂದು ಕೊಡಲು ಸಾಹಸಿ ನಾನಲ್ಲ
ನೆನಪಲ್ಲಿ ತಾಜಮಹಲ ಕಟ್ಟಲು ಆಗೊಲ್ಲ
ನಿನ್ನ ನಗಿಸಲು ವಿದೂಷಕ ನಾನಲ್ಲ
ಸ್ವರ್ಗ ಸೃಷ್ಟಿಸೊ ಮಂತ್ರಗಳು ಗೊತ್ತಿಲ್ಲ
ಹೊಗಳಿದರೆ ಕವಿಯಾಗುವೆ ಪ್ರೇಮಿ ಆಗೊಲ್ಲ
ಮಡಿಲಲ್ಲಿ ಮಗುವಾಗುವೆ ಪ್ರಾಣ ನೀಡೊಲ್ಲ
ನಿನ್ನ ಅಗಲಿ ಬಾಳುವ ಶಕ್ತಿ ದೇವರು ಕೊಡಲಿಲ್ಲ
ನೀನಿರದೆ ನಾನಿಲ್ಲ

Leave a Reply

Your email address will not be published. Required fields are marked *