ರಚನೆ: ಕನಕದಾಸರು
ಸತ್ಯವಂತರ
ಸಂಗವಿರಲು ತೀರ್ಥವ್ಯಾತಕೆ
ನಿತ್ಯ
ಜ್ಞಾನಿಯಾದ ಮೇಲೆ ಚಿಂತೆ ಯಾತಕೆ
ನಿತ್ಯ
ಜ್ಞಾನಿಯಾದ ಮೇಲೆ ಚಿಂತೆ ಯಾತಕೆ
ಸತ್ಯವಂತರ
ಸಂಗವಿರಲು ತೀರ್ಥವ್ಯಾತಕೆ
ನಿತ್ಯ
ಜ್ಞಾನಿಯಾದ ಮೇಲೆ ಚಿಂತೆ ಯಾತಕೆ
ನಿತ್ಯ
ಜ್ಞಾನಿಯಾದ ಮೇಲೆ ಚಿಂತೆ ಯಾತಕೆ
ತಾನು
ಉಣ್ಣದ ಪರರಿಗಿಕ್ಕದ ಧನವಿದ್ಯಾತಕೆ
ಮಾನ
ಹೀನನಾಗಿ ಬಾಳ್ವ ಮನುಜನ್ಯಾತಕೆ
ತಾನು
ಉಣ್ಣದ ಪರರಿಗಿಕ್ಕದ ಧನವಿದ್ಯಾತಕೆ
ಮಾನ
ಹೀನನಾಗಿ ಬಾಳ್ವ ಮನುಜನ್ಯಾತಕೆ
ಜ್ಞಾನವಿಲ್ಲದೇ
ನೂರು ಕಾಲ ಬದುಕಲ್ಯಾತಕೆ
ಜ್ಞಾನವಿಲ್ಲದೇ
ನೂರು ಕಾಲ ಬದುಕಲ್ಯಾತಕೆ
ಮಾನಿನಿಯ
ತೊರೆದ ಮೇಲೆ
ಮಾನಿನಿಯ
ತೊರೆದ ಮೇಲೆ
ಮಾನಿನಿಯ
ತೊರೆದ ಮೇಲೆ ಭೋಗವ್ಯಾತಕೆ
ಸತ್ಯವಂತರ
ಸಂಗವಿರಲು ತೀರ್ಥವ್ಯಾತಕೆ
ನಿತ್ಯ
ಜ್ಞಾನಿಯಾದ ಮೇಲೆ ಚಿಂತೆ ಯಾತಕೆ
ನಿತ್ಯ
ಜ್ಞಾನಿಯಾದ ಮೇಲೆ ಚಿಂತೆ ಯಾತಕೆ
ಮಾತು
ಕೇಳದೆ ಮಲತು ನಡೆವ ಮಕ್ಕಳ್ಯಾತಕೆ
ಪ್ರೀತಿ
ಇಲ್ಲದೆ ಎಡೆಯನಿಕ್ಕಿದ ಅನ್ನವ್ಯಾತಕೆ
ಮಾತು
ಕೇಳದೆ ಮಲತು ನಡೆವ ಮಕ್ಕಳ್ಯಾತಕೆ
ಪ್ರೀತಿ
ಇಲ್ಲದೆ ಎಡೆಯನಿಕ್ಕಿದ ಅನ್ನವ್ಯಾತಕೆ
ನೀತಿ
ಅರಿತು ನಡೆಯದಿರುವ ಬಂಟನ್ಯಾತಕೆ
ನೀತಿ
ಅರಿತು ನಡೆಯದಿರುವ ಬಂಟನ್ಯಾತಕೆ
ಸೋತ
ಹೆಣ್ಣಿಗೆ ಹೂತು ನಡೆಯದ
ಸೋತ
ಹೆಣ್ಣಿಗೆ ಹೂತು ನಡೆಯದ
ಸೋತ
ಹೆಣ್ಣಿಗೆ ಹೂತು ನಡೆಯದ ಪುರುಷನ್ಯಾತಕೆ
ಸತ್ಯವಂತರ
ಸಂಗವಿರಲು ತೀರ್ಥವ್ಯಾತಕೆ
ನಿತ್ಯ
ಜ್ಞಾನಿಯಾದ ಮೇಲೆ ಚಿಂತೆ ಯಾತಕೆ
ನಿತ್ಯ
ಜ್ಞಾನಿಯಾದ ಮೇಲೆ ಚಿಂತೆ ಯಾತಕೆ
ಸನ್ನೆಯರಿತು
ನಡೆಯದಿರುವ ಸತಿಯು ಯಾತಕೆ
ಮನ್ನಣೆಯ
ನಡೆಸದಿರುವ ದೊರೆಯು ಏತಕೆ
ಸನ್ನೆಯರಿತು
ನಡೆಯದಿರುವ ಸತಿಯು ಯಾತಕೆ
ಮನ್ನಣೆಯ
ನಡೆಸದಿರುವ ದೊರೆಯು ಏತಕೆ
ಮುನ್ನ
ಕೊಟ್ಟು ಪಡೆಯದನ್ನು ಬಯಸಲ್ಯಾತಕೆ
ಮುನ್ನ
ಕೊಟ್ಟು ಪಡೆಯದನ್ನು ಬಯಸಲ್ಯಾತಕೆ
ಚೆನ್ನ
ಆದಿ ಕೇಶವನಲ್ಲದ
ಚೆನ್ನ
ಆದಿ ಕೇಶವನಲ್ಲದ
ಚೆನ್ನ
ಆದಿ ಕೇಶವನಲ್ಲದ ದೈವವ್ಯಾತಕೆ
ಸತ್ಯವಂತರ
ಸಂಗವಿರಲು ತೀರ್ಥವ್ಯಾತಕೆ
ನಿತ್ಯ
ಜ್ಞಾನಿಯಾದ ಮೇಲೆ ಚಿಂತೆ ಯಾತಕೆ
ನಿತ್ಯ
ಜ್ಞಾನಿಯಾದ ಮೇಲೆ ಚಿಂತೆ ಯಾತಕೆ
Sathyavanthara Sanghaviralu theerthavethake Lyrics
Satyavantara Sangaviralu theertavyaatake Lyrics