Film: |
Veerappa Nayka |
Music: |
Rajesh Ramnath |
Lyrics: |
S Narayan |
Singer: |
S P Balasubramanya |
Artists: |
Vishnuvardhan, Shruthi |
Record |
Anand |
ಭಾರತಾಂಬೆ
ನಿನ್ನ ಜನ್ಮದಿನ
ಭಾರತೀಯರ
ಶೌರ್ಯ ಮೆರೆದ ದಿನ
ಗಂಡೆದೆ
ವೀರರಲ್ಲಿ ಗುಂಡಿಗೆ ಪ್ರಾಣ ಚೆಲ್ಲಿ
ನಿನ್ನನು
ಬಿಡಿಸಿದ ಇದೇ ದಿನ
ಜನ್ಮವ
ಕೊಡಿಸಿದ ಮಹಾದಿನ
ಭಾರತಾಂಬೆ
ನಿನ್ನ ಜನ್ಮದಿನ
ಭಾರತೀಯರ
ಶೌರ್ಯ ಮೆರೆದ ದಿನ
ಹೇ…
ಹತ್ತಾರು ಭಾಷೆಗಳ ಹೆತ್ತೋಳಮ್ಮ
ನಿನ್ನ
ಮಡಿಲಲ್ಲಿ ಗಂಗೆ ತುಂಗೆ ನಗುತಾರಮ್ಮ
ಅನ್ಯರು
ಬಂದರೂನು ಮುತ್ತಾಡುವ ತಾಯಿ
ನಮ್ಮೂರ
ಅಪ್ಪಿಕೊಂಡು ನಲಿದಾಡುವೆ
ಭೂಗೋಳದಲ್ಲಿ
ಒಂದು ಜ್ಯೋತಿ ಇದೆ
ಅದಕೆ
ಭಾರತ ಮಾತೆ ಎಂಬ ಹೆಸರು ಇದೆ
ಲೋಕವೆ
ಮೆಚ್ಚುವಂತ ಗೀತೆಯು ಇಲ್ಲಿ ಇದೆ
ವಂದೇ
ಮಾತರಂ ಎಂಬ ನಾಮದ ಗಂಧವಿದೆ
ನುಡಿಯಲವನೆ
ಧನ್ಯ
ಭಾರತಾಂಬೆ
ನಿನ್ನ ಜನ್ಮದಿನ
ಭಾರತೀಯರ
ಶೌರ್ಯ ಮೆರೆದ ದಿನ
ಭಾರತ
ನಮ್ಮ ಭಾರತ ನಮ್ಮ ಭಾರತ
ಭಾರತ
ನಮ್ಮ ಭಾರತ ನಮ್ಮ ಭಾರತ
ಉಸಿರಿರುವ
ತನಕ ನೀ ಭಾರತೀಯನೆಂದು ಬೀಗು
ಕೊನೆಯುಸಿರೆಳೆವಾಗಲೂ
ವಂದೇ
ಮಾತರಂ ಎಂದು ಕೂಗು
ವಂದೇ
ಮಾತರಂ ವಂದೇ ಮಾತರಂ
ವಂದೇ
ಮಾತರಂ ವಂದೇ ಮಾತರಂ
ಭಾರತಾಂಬೆ
ನಿನ್ನ ಜನ್ಮದಿನ
ಭಾರತೀಯರ
ಶೌರ್ಯ ಮೆರೆದ ದಿನ
ಗಂಡೆದೆ
ವೀರರಲ್ಲಿ ಗುಂಡಿಗೆ ಪ್ರಾಣ ಚೆಲ್ಲಿ
ನಿನ್ನನು
ಬಿಡಿಸಿದ ಇದೇ ದಿನ
ಹೋ..
ಜನ್ಮವ ಕೊಡಿಸಿದ ಮಹಾದಿನ
ಭಾರತಾಂಬೆ
ನಿನ್ನ ಜನ್ಮದಿನ
ಭಾರತೀಯರ
ಶೌರ್ಯ ಮೆರೆದ ದಿನ
Bharathaambe ninna Januma dina Lyrics
Bharataambe ninna Janma dina Lyrics