Singer |
: Shameer Mudipu |
Lyrics |
: Kaviraj |
Music |
: Sunaad Gowtham |
ನನ್ನ
ಹಣೆಯಲ್ಲಿ ನಿನ್ನ ಹೆಸರಿಲ್ಲ
ಈ
ನಿನ್ನ ಪಡೆಯುವ ಪುಣ್ಯ ನನಗಿಲ್ಲ
ನೀ
ವಿಶಾಲ ಗಗನ
ನಾ
ಅನಾಥ ಕವನ
ಈ
ನಮ್ಮ ನಡುವೆ ಈಗೊಂದು ಮೌನ
ಆ
ಹೂವಿನ ಎಲೆಗೆ ಅಂಟು ಮಂಜಿನ ಹನಿಯು
ಬಿಸಿಲಾದ
ಕೂಡಲೇ ಕರಗೊ ಕಹಿ ಸತ್ಯವೇ ಕೊನೆಯು
ಮತ್ತೆ
ಬರಬೇಡ ಎದುರಲ್ಲಿ ಎಲ್ಲೂ
ಬಂದರೆ
ತಿರುಗಿ ನೀ ನೋಡದೆ ತೆರಳು
ನೀ
ಕಾಮನಬಿಲ್ಲು
ನಾ
ಬೇಲಿಯ ಕೋಲು
ನಾ
ತಲುಪಲು ನಿನ್ನ ಸಾಧ್ಯವೆ ಹೇಳು
ಆ
ನದಿ ದಂಡೆಲಿ ಬೀಸೋದೆ ಈಗಲು
ದಿನವೂ
ಎಂದಿನಂತೆ ತಂಗಾಳಿಯ ಅಲೆಗಳು
ಆ
ನದಿ ದಂಡೆಲಿ ಬೀಸೋದೆ ಈಗಲು
ದಿನವೂ
ಎಂದಿನಂತೆ ತಂಗಾಳಿಯ ಅಲೆಗಳು
ಯಾಕಾದೆ
ನನ್ನ ಭೇಟಿ
ನೀ
ಹೋದೆ ನನ್ನ ದಾಟಿ
ಕನಸೆಲ್ಲ
ಆಯಿತಲ್ಲ ಕಣ್ಣಲ್ಲೆ ಆಹುತಿ
ನೀ
ನಿಧಾನವಾಗಿ
ಈ
ಎದೆಲಿ ಕರಗಿ
ಆಗಾಗ
ಬರುವೆ ನೀ ನಿಟ್ಟುಸಿರು ಆಗಿ
ಆ
ಅಳಿಸಲೆ ಬೇಕು
ಆ
ಗುರುತುಗಳನ್ನು
ನಾ
ಮರೆಯಲೆಬೇಕು ಪಿಸು ನುಡಿಗಳನ್ನು
ಏಕಾಂಗಿ
ಎದೆಯ ತುಂಬಾ ನೋವಿನ ಪಲುಕು
ನಡುದಾರಿಯಲ್ಲಿ
ನಿಂತ ಪರದೇಶಿ ಬದುಕು
ನಿನ್ನ
ಕೆಲವೊಮ್ಮೆ ನಾ ಭೇಟಿಯಾದೆ
ಎನ್ನುವ
ಖುಷಿ ನನಗೆ ನೋವಲ್ಲು ಕೊನೆಗೆ
ನೀ
ಕಾಮನಬಿಲ್ಲು
ನಾ
ಬೇಲಿಯ ಕೋಲು
ನಾ
ತಲುಪಲು ನಿನ್ನ ಸಾಧ್ಯವೆ ಹೇಳು
ಆ
ಹೂವಿನ ಎಲೆಗೆ ಅಂಟು ಮಂಜಿನ ಹನಿಯು
ಬಿಸಿಲಾದ
ಕೂಡಲೇ ಕರಗೊ ಕಹಿ ಸತ್ಯವೇ ಕೊನೆಯು
ಮತ್ತೆ
ಬರಬೇಡ ಎದುರಲ್ಲಿ ಎಲ್ಲೂ
ಬಂದರೆ
ತಿರುಗಿ ನೀ ನೋಡದೆ ತೆರಳು
ನೀ
ಕಾಮನಬಿಲ್ಲು
ನಾ
ಬೇಲಿಯ ಕೋಲು
ನಾ
ತಲುಪಲು ನಿನ್ನ ಸಾಧ್ಯವೆ ಹೇಳು