Raamana Avathara Song Lyrics in Kannada – Bhookailasa

ದ್ವಾರಪಾಲರ ಮರಳಿ ಬಳಿಗೊಯ್ವ ಕೃಪೆಯೋ
ಜಾರತನ ಸದೆಬಡೆವ ಸಂಭ್ರಮದ ನೆಪವೋ
ರಾಮನ ಅವತಾರಾ
ರಘುಕುಲ ಸೋಮನ ಅವತಾರ

ರಾಮನ ಅವತಾರ
ರಘುಕುಲ ಸೋಮನ ಅವತಾರ
ರಾಮನ ಅವತಾರ
ರಘುಕುಲ ಸೋಮನ ಅವತಾರ
ನಿರುಪಮ ಸಂಯಮ ಜೀವನ ಸಾರ
ಹರಿವುದು ಭೂಮಿಯ ಭಾರ

ರಾಮನ ಅವತಾರ
ದಾಶರಥಿಯ ದಿವ್ಯಾತ್ಮವ ತಳೆವಾ
ಕೌಸಲ್ಯೆಯ ಬಸಿರೆನಿತು ಪುನೀತಾ
ಲೇಸಿಗರೈ ಸಹಜಾತರು ಮೂವರು
ಲೇಸಿಗರೈ ಸಹಜಾತರು ಮೂವರು
ಲಕ್ಷ್ಮಣ ಶತ್ರುಘ್ನ ಭರತಾ

ರಾಮನ ಅವತಾರ
ರಘುಕುಲ ಸೋಮನ ಅವತಾರ

ತ್ರಿಭುವನ ಪಾಲಗೆ ನೆಪಮಾತ್ರ
ವರಗುರು ವಿಶ್ವಾಮಿತ್ರಾ
ತ್ರಿಭುವನ ಪಾಲಗೆ ನೆಪಮಾತ್ರ
ವರಗುರು ವಿಶ್ವಾಮಿತ್ರಾ
ಅಭಯ ಅಹಲ್ಯೆಗೆ ನೀಡುವ ಪಾತ್ರ
ಅಭಯ ಅಹಲ್ಯೆಗೆ ನೀಡುವ ಪಾತ್ರ
ಧರಿಸುವ ಹರಿ ಶುಭ ಗಾತ್ರಾ..

ರಾಮನ ಅವತಾರ
ರಘುಕುಲ ಸೋಮನ ಅವತಾರ
ಧನುವೋ ಜನಕನ ಮಮತೆಯ ಕುಡಿಯೋ
ಸೀತೆಯ ಕನ್ಯಾ ಸಂಖಲೆಯೋ
ಧನುಜರ ಕನಸಿನ ಸುಖ ಗೋಪುರವೋ
ಧನುಜರ ಕನಸಿನ ಸುಖ ಗೋಪುರವೋ
ಮುರಿವುದು ಮಿಥಿಲಾ ನಗರದಲೀ

ರಾಮನ ಅವತಾರ
ರಘುಕುಲ ಸೋಮನ ಅವತಾರ

ಕಪಟ ನಾಟಕನ ಪಟ್ಟಾಭಿಷೇಕ
ಉಪಟಳ ತಾತ್ಕಾಲಿಕ.. ಶೋಕ
ಭೀಕರ ಕಾನನ ವಾಸದ ಕುಹಕ
ಲೋಕೋದ್ಧಾರದ ಮೊದಲಂಕಾ
ಭರತಗೆ ಪಾದುಕೆ ನೀಡುವ ವೇಷ
ಭರತಗೆ ಪಾದುಕೆ ನೀಡುವ ವೇಷ
ಪುರಜನ ಭಕ್ತಿಯ ಆವೇಶಾ
ನರಲೋಕಕೆ ನವ ಸಿರಿ ಸಂತೋಷ
ನರಲೋಕಕೆ ನವ ಸಿರಿ ಸಂತೋಷ
ಭರವಸೆ ನೀಡುವ ಸಂದೇಶಾ ..

ರಾಮನ ಅವತಾರ
ರಘುಕುಲ ಸೋಮನ ಅವತಾರ
ಆಹಾ ನೋಡದೊ ಹೊನ್ನಿನ ಜಿಂಕೆ

ಹಾಳಾಗುವುದೋ ಲಂಕೆ ..
ಹೆಣ್ಣಿದು ಶಿವಗಣ್ಣರಿಯೋ ಮಂಕೇ..
ಮಣ್ಣಾಗುವೆ ನೀ ನಿಶ್ಯಂಕೆ
ಶರಣು ಶರಣು ಹೇ ಭಾಗವತೋತ್ತಮ
ಕನ್ನಡ ಕುಲಪುಂಗವ ಹನುಮ
ಮುದ್ರಿಕೆಯಲ್ಲಿದು ಸೋಹಂ ಬ್ರಹ್ಮಾ.
ಮುದ್ರಿಕೆಯಲ್ಲಿದು ಸೋಹಂ ಬ್ರಹ್ಮ
ಎಂಬುವ ತತ್ವವ ತಿಳಿಸಮ್ಮಾ
ಎಂಬುವ ತತ್ವವ ತಿಳಿಸಮ್ಮ
ರಾಮ ರಾಮ ಜಯ
ರಾಮ ರಾಮ ಜಯ
ರಾಮ ರಾಮ ರಘುಕುಲ ಸೋಮ
ಸೀತೆಯ ಚಿಂತೆಗೆ ಪೂರ್ಣ ವಿರಾಮ
ಲಂಕೆಯ ವೈಭವ ನಿರ್ನಾಮಾ
ಸೀತೆಯ ಚಿಂತೆಗೆ ಪೂರ್ಣ ವಿರಾಮ
ಲಂಕೆಯ ವೈಭವ ನಿರ್ನಾಮಾ
ಅಯ್ಯೋ ದಾನವ ಭಕ್ತಾಗ್ರೇಸರ
ಆಗಲಿ ನಿನ್ನೀ ಕಥೆ ಅಮರಾ
ಮೆರೆಯಲಿ ಶುಭ ತತ್ವ ವಿಚಾರ
ಪರಸತಿ ಬಯಕೆಯ ಸಂಹಾರಾ

ರಾಮನ ಅವತಾರ
ರಘುಕುಲ ಸೋಮನ ಅವತಾರ
ರಾಮನ ಅವತಾರ
ರಘುಕುಲ ಸೋಮನ ಅವತಾರ


Ramana Avataara Song Karaoke with Lyrics


Leave a Reply

Your email address will not be published. Required fields are marked *