ಮಕ್ಕಳು ಬೇಕು – Makkalu Beku Anthaare Song Lyrics in Kannada

ಚಿತ್ರ : ಹೆತ್ತವರು

ಹಾಡಿದವರು : ಡಾ. ರಾಜ್ ಕುಮಾರ್
ಸಂಗೀತ : ಹಂಸಲೇಖ
ಸಾಹಿತ್ಯ : ಹಂಸಲೇಖ



ಮಕ್ಕಳು ಬೇಕು ಅಂತಾರೆ

ಮಕ್ಕಳು ಇರದವರು

ಮಕ್ಕಳೆ ಇರದವರು

ಮಕ್ಕಳೆ ಬೇಡ ಅಂತಾರೆ

ಮಕ್ಕಳ ಹೆತ್ತವರು

ಮಕ್ಕಳ ಹೆತ್ತವರು

ಭೂಮೀಲಿ ಆನಂದ ಇವರಿಂದ

ಬಾಳಲ್ಲಿ ಕಣ್ಣೀರು ಇವರಿಂದ

ಮಕ್ಕಳು ಬೇಕು ಅಂತಾರೆ

ಮಕ್ಕಳು ಇರದವರು

ಮಕ್ಕಳೆ ಇರದವರು

ಮಕ್ಕಳೆ ಬೇಡ ಅಂತಾರೆ

ಮಕ್ಕಳ ಹೆತ್ತವರು

ಮಕ್ಕಳ ಹೆತ್ತವರು

♫♫♫♫♫♫♫♫♫♫♫♫


ಹೆತ್ತವರನ್ನು ಪ್ರೀತಿಸಿದ

ಮಕ್ಕಳು ಕಾಡೊಳಗೆ

ಹೆತ್ತವರನ್ನು ನೋಯಿಸಿದ

ಮಕ್ಕಳು ಗೂಡೊಳಗೆ

ಹೆತ್ತವರನ್ನು ಪೂಜಿಸಿದ

ಮಕ್ಕಳು ಕಥೆಯೊಳಗೆ

ಹೆತ್ತವರನ್ನು ಓಡಿಸಿದ

ಮಕ್ಕಳು ಜೊತೆಯೊಳಗೆ..

ಭೂಮಿಲಿ ಧರ್ಮಾನು ಇವರಿಂದ

ಬಾಳಲಿ ಕರ್ಮಾನೂ ಇವರಿಂದ

ಮಕ್ಕಳು ಬೇಕು ಅಂತಾರೆ

ಮಕ್ಕಳು ಇರದವರು

ಮಕ್ಕಳೆ ಇರದವರು

ಮಕ್ಕಳೆ ಬೇಡ ಅಂತಾರೆ

ಮಕ್ಕಳ ಹೆತ್ತವರು

ಮಕ್ಕಳ ಹೆತ್ತವರು

♫♫♫♫♫♫♫♫♫♫♫♫

ಮಕ್ಕಳೇ ದೇವರು ಅಂತಾರೆ

ಮಕ್ಕಳು ಇರದವರು

ದೇವರ ಶಾಪಕೆ ಸಿಕ್ತಾರೆ

ಮಕ್ಕಳ ಹೆತ್ತವರು

ದಾನ ಧರ್ಮ ಮಾಡ್ತಾರೆ

ಮಕ್ಕಳು ಇರದವರು

ಭಿಕ್ಷೆ ಬೇಡಿ ತಿಂತಾರೆ

ಮಕ್ಕಳ ಹೆತ್ತವರು

ಭೂಮಿಲಿ ಪುಣ್ಯಾನೂ ಇವರಿಂದ

ಬಾಳಲ್ಲಿ ಪಾಪಾನೂ ಇವರಿಂದ

ಮಕ್ಕಳು ಬೇಕು ಅಂತಾರೆ

ಮಕ್ಕಳು ಇರದವರು

ಮಕ್ಕಳೆ ಇರದವರು

ಮಕ್ಕಳೆ ಬೇಡ ಅಂತಾರೆ

ಮಕ್ಕಳ ಹೆತ್ತವರು

ಮಕ್ಕಳ ಹೆತ್ತವರು

♫♫♫♫♫♫♫♫♫♫♫♫


ಭಾರ ಹೊತ್ತು ಉಸಿರಿತ್ತು

ಬೆಳಸಿದ ಮಕ್ಕಳಿಗೆ

ಭಾರ ಆದರು ಹೆತ್ತವರು

ಮುಪ್ಪಿನ ದಿನದೊಳಗೆ

ಬುಧ್ಧಿ ಇಲ್ಲದ ಮಕ್ಕಳಿಗೆ

ಭೋದಿಸು ಅಂತಾರೆ

ಬುಧ್ಧಿ ಕಲಿಸೊ ಮಕ್ಕಳಿಗೆ

ವಂದಿಸು ಅಂತಾರೆ
ಭೂಮೀಲಿ ಅಭಿಮಾನ ಇವರಿಂದ

ಬಾಳಲ್ಲಿ ಅವಮಾನ ಇವರಿಂದ

ಮಕ್ಕಳು ಬೇಕು ಅಂತಾರೆ

ಮಕ್ಕಳು ಇರದವರು

ಮಕ್ಕಳೆ ಇರದವರು

ಮಕ್ಕಳೆ ಬೇಡ ಅಂತಾರೆ

ಮಕ್ಕಳ ಹೆತ್ತವರು

ಹೆತ್ತು ನಿತ್ಯ ಅತ್ತವರು


Makkalu Beku Antaare Song Lyrics in Kannada
Makkalu Beku Antaare Song Lyrics 
Makkalu Beku Antare Song Lyrics

Leave a Reply

Your email address will not be published. Required fields are marked *