ಸಹಪಾಠಿ – Sahapaati Song Lyrics in Kannada & English |777 Charlie | Rakshit Shetty

PK-Music

Music : Nobin Paul
Singers: Aarna Shetty
Backing Vocals: Pooja Rao , Meghana Kulkarni Joshi



ಇರು ನೀ ಜೊತೆ ಬದುಕಿನ ತರಗತಿಯೊಳಗೆ
ಸಹಪಾಠಿ ನಾನಾಗಿ ಹಾಜರಿಯ ನೀಡುವೆ
ಹಿಂಬಾಲಿಸಿ ನಾನಿನ್ನ ಓದುವೆನು
ಇನ್ನಾರಿಗಂತೂ ಹೇಳದಿರೋ ಕಥೆಯೊಂದ ಹೇಳುವೆ
ನೀನೇ ನನ್ನ ಪಾಠವು, ನೀನೆ ಪೂರ್ತಿ ಅಂಕವು
ನನ್ನ ಬೆರಳನು ಹಿಡಿ ನೀನೇ ಜೋಪಾನ ಮಾಡಿಕೊ
ಸಹಪಾಠಿಯೇ..
ಸಹಪಾಠಿಯೇ..
 
ಮುದ್ದಾದ ಗುಬ್ಬಿ ಮಾತನು ದಿನ ಆಲಿಸೋ ಗೂಡಂತೆ ನೀನಿರು
ನನ್ನ ಜೀವದ ಪುಸ್ತಕದಲಿರೋ ನವಿಲಿನ ಗರಿಯೇ ನೀನು
ಬಳಿ ಬಂದರೆ ದೋಣಿ ಆಟವ ನಿನಗಾಗಿ ನಾ ಕಲಿಸುವೆ
ಹಿಂಬಾಲಿಸಿ ನಾ ನಿನ್ನ ಬರೆಯುವೆನು
ಇನ್ನಾರಿಗಂತೂ ಕಾಣದಿರೋ ಪುಟವೊಂದ ತೆರೆಯುವೆ
ನೀನೇ ನನ್ನ ಪಾಠವು, ನೀನೆ ಪೂರ್ತಿ ಅಂಕವು
ನನ್ನ ಬೆರಳನು ಹಿಡಿ ನೀನೇ ಜೋಪಾನ ಮಾಡಿಕೊ
ಸಹಪಾಠಿಯೇ..
 
ಆ ಚಂದಮಾಮ ದೋಸ್ತಿಯೇ ನಿನ ಸಂಘ ಸೇರಲು
ರಜೆಗಿಂತಲೂ ಖುಷಿ ನೀಡುವ ವಿಷಯವೇ ನಿನ್ನ ನಗುವು
ನಗುವಲೇ ದಿನವ ಕಳೆಯುವ ನನಗಂತು ಬಿಗುಮಾನವೇ
ಹಿಂಬಾಲಿಸಿ ನಾನಿನ್ನ ಸೇರುವೆನು
ಇನ್ನಾರಿಗಂತೂ ಹಾಡದಿರೋ ಹಾಡೊಂದ ಹಾಡುವೆ
ನೀನೇ ನನ್ನ ಪಾಠವು, ನೀನೆ ಪೂರ್ತಿ ಅಂಕವು
ನನ್ನ ಬೆರಳನು ಹಿಡಿ ನೀನೇ ಜೋಪಾನ ಮಾಡಿಕೊ
ಸಹಪಾಠಿಯೇ…
 
Iru nee jothe badukina taragatiyolage
Sahapaati naanaagi haajariya needuve
Himbalisi naa ninna oduvenu
Innarigantu heladiro kateyonda heluve
Neene nanna paatavu, Neene poorti ankavu
Nanna beralanu hidi neene Jopana maadiko
Sahapaatiye.. Sahapaatiye..
 
Muddaada gubbi maatanu
Dina aliso Goodante neeniru
Nanna jeevada pustakadalliro Navilina
gariye neenu
Bali bandare doni aatava ninagaagi Na
kalisuve
Himbaalisi naa ninna bareyuvenu
Innarigantu kanadiro Putavonda tereyuve
Neene nanna paatavu, Neene poorti ankavu
Nanna beralanu hidi neene Jopana madiko
Sahapaatiye..
 
Aa chandamama dostiye Ninna sangha
seralu
Rajegintalu khushi needuva Vishayave
ninna naguvu
Aa naguvale dinava kaleyuva Nanagantu
bigumaanave
Himbaalisi naa ninna seruvenu
Innaarigantu haadadiro Hadonda haduve
neene nanna paatavu Neene poorti ankavu
Nanna beralanu hidi Neene jopana maadiko
Sahapaatiye..

Leave a Reply

Your email address will not be published. Required fields are marked *