ಚಿತ್ರ: ರವಿಚಂದ್ರ
ರಚನೆ: ಚಿ ಉದಯಶಂಕರ್
ಸಂಗೀತ: ಉಪೇಂದ್ರಕುಮಾರ್
ಗಾಯಕರು: ಡಾ ರಾಜ್ ಕುಮಾರ್
ಆಆಆಆ ಕಂಡೊಡನೆ ಕರ ಪಿಡಿದು
ಕಲ್ಪಿಸದಾ ಸುಖ ಕೊಡುವ
ಭಾಮೆಯಲಿ..
ಇಂದೇನು ಕೋಪವೋ ಕಾಣೇ
ಆಆಆಆಆಆಆ
ಭಾಮಾಮಣಿ ಚಿಂತಾಮಣಿ
ಕಾಮನರಗಿಣಿ ಮುತ್ತಿನ ಮಣಿ
ಕರಿಮಣಿ ರಿಮಣಿ ಮಣೀ
ಣೀ ರಾಣೀ ರಾಣೀ ಸತ್ಯಭಾಮೇ
ಸತ್ಯಭಾಮೆ ಸತ್ಯಭಾಮೆ
ಕೋಪವೇನೇ ನನ್ನಲಿ
ಸತ್ಯಭಾಮೆ ಸತ್ಯಭಾಮೆ
ಕೋಪವೇನೇ ನನ್ನಲಿ
ಸರಸಕೆ ಕರೆದರೆ ವಿರಸವ
ತೋರುವೆ ಏಕೆ ನನ್ನಲಿ
ಸರಸಕೆ ಕರೆದರೆ ವಿರಸವ
ತೋರುವೆ ಏಕೆ ನನ್ನಲಿ
ಏಕೆ ನನ್ನಲಿ ಏಕೆ ನನ್ನಲಿ
ಸತ್ಯಭಾಮೆ ಸತ್ಯಭಾಮೆ
ಕೋಪವೇನೇ ನನ್ನಲಿ
ನನ್ನಲಿ ಕೋಪವೇ ಕೋಪವೇ
ನನ್ನಲಿ ಏಕೇ ನನ್ನಲಿ
ಸತ್ಯಭಾಮೆ ಸತ್ಯಭಾಮೆ
ಕೋಪವೇನೇ ನನ್ನಲಿ
♫♫♫♫♫♫♫♫♫♫♫♫
321
ಊಂ ದುರುದುರು ನೋಡದೆ
ಕಿಡಿಗಳ ಕಾರದೆ
ಕೆಣಕದೆ ಕಾಡದೆ
ದೂರಕೆ ಓಡದೆ
ದುರುದುರು ನೋಡದೆ
ಕಿಡಿಗಳ ಕಾರದೆ
ಕೆಣಕದೆ ಕಾಡದೆ
ದೂರಕೆ ಓಡದೆ
ತನುವಿನ ತಾಪವ
ಕಳೆಯಲು ಸನಿಹಕೆ
ತನುವಿನ ತಾಪವ
ಕಳೆಯಲು ಸನಿಹಕೆ
ಬಾರೇ ಮೋಹಿನಿ
ಏಯ್ ಬಾರೇ ಮೋಹಿನಿ
ಮೋಹಿನಿ.. ಕಾಮಿನಿ.. ಭಾಮಿನಿ..
ಬಾರೇ ಮೋಹಿನಿ
ಸತ್ಯಭಾಮೆ ಸತ್ಯಭಾಮೆ
ಸತ್ಯಭಾಮೆ ಸತ್ಯಭಾಮೆ
ಕೋಪವೇನೇ ನನ್ನಲಿ
♫♫♫♫♫♫♫♫♫♫♫♫
ಗಲ್ಲವ ಹಿಡಿಯಲೆ
ಕೆನ್ನೆಯ ಸವರಲೆ
ತೋಳಲಿ ಭಾಮೆಯ
ನಡುವನೇ ಬಳಸಲೆ
ಗಲ್ಲವ ಹಿಡಿಯಲೆ
ಕೆನ್ನೆಯ ಸವರಲೆ
ತೋಳಲಿ ಭಾಮೆಯ
ನಡುವನೇ ಬಳಸಲೆ
ಕೊಳಲಲಿ ಮೋಹನ
ರಾಗವ ನುಡಿಸಲೇ
ಕೊಳಲಲಿ ಮೋಹನ
ರಾಗವ ನುಡಿಸಲೇ
ಹೇಳೇ ಕೋಮಲೆ
ಏಯ್ ಹೇಳೇ ಕೋಮಲೆ
ಕೋಮಲೇ ಶ್ಯಾಮಲೇ
ಚಂಚಲೇ ಹೇಳೇ ಕೋಮಲೆ
ಸತ್ಯಭಾಮೆ ಸತ್ಯಭಾಮೆ
ಸತ್ಯಭಾಮೆ ಸತ್ಯಭಾಮೆ
ಕೋಪವೇನೇ ನನ್ನಲಿ
♫♫♫♫♫♫♫♫♫♫♫♫
ರಾಧೆಯ ಒಲ್ಲೆನು
ರುಕ್ಮಿಣಿ ಒಲ್ಲೆನು
ಭಾಮೆಯನಲ್ಲದೆ
ಯಾರನು ನೋಡೆನು
ರಾಧೆಯ ಒಲ್ಲೆನು
ರುಕ್ಮಿಣಿ ಒಲ್ಲೆನು
ಭಾಮೆಯನಲ್ಲದೆ
ಯಾರನು ನೋಡೆನು
ಕೈಗಳ ಮುಗಿದರೂ
ಯಾರೂ ನೋಡರು
ಕೈಗಳ ಮುಗಿದರೂ
ಯಾರೂ ನೋಡರು
ಸೋತೇ ಪ್ರೇಯಸಿ
ಆಹಾ ಸೋತೇ ಪ್ರೇಯಸಿ
ಪ್ರೇಯಸಿ.. ರೂಪಸಿ.. ಊರ್ವಶಿ..
ಸೋತೇ ಪ್ರೇಯಸಿ
ಸತ್ಯಭಾಮೆ ಸತ್ಯಭಾಮೆ
ಸತ್ಯಭಾಮೆ ಸತ್ಯಭಾಮೆ
ಕೋಪವೇನೇ ನನ್ನಲಿ
ಸರಸಕೆ ಕರೆದರೆ
ವಿರಸವ ತೋರುವೆ
ಸರಸಕೆ ಕರೆದರೆ
ವಿರಸವ ತೋರುವೆ
ಸರಸಕೆ ಕರೆದರೆ
ವಿರಸವ ತೋರುವೆ
ಏಕೇ ನನ್ನಲೀ