ಗೌರಿ ಮನೋಹರಿಯ ಕಂಡೆ
ನಾ ಪುರುಷನ ನಿಜ ರೂಪದೇ
ಗೌರಿ ಮನೋಹರಿಯ ಕಂಡೆ
ನಾ ಪುರುಷನ ನಿಜ ರೂಪದೇ
ಯೌವನದ ಮರೆಯಲ್ಲು ಶಾಮ
ಅವ ಕವಿರಾಜ ಸಂಗೀತ ಬ್ರಹ್ಮ
ಅವ ಕವಿರಾಜ ಸಂಗೀತ ಬ್ರಹ್ಮ
ಹೆಸರೇನೊ ಇನಿದಾದ ರಾಗ
ಫಲ ಶ್ರೀದೇವಿ ನಿಜಮೈತ್ರಿ ಯೋಗ
ನನ್ ಹೆಸರೇನೊ ಇನಿದಾದ ರಾಗ
ಫಲ ಶ್ರೀದೇವಿ ನಿಜಮೈತ್ರಿ ಯೋಗ
ನೀ ಮಳೆ ತಂದು ನಲಿದಾಡೋ ಮೇಘ
ತನ್ನ ವಯಸ್ಸನ್ನು ಲೆಕ್ಕಿಸದ ವೇಗ
ನೀ ಮಳೆ ತಂದು ನಲಿದಾಡೋ ಮೇಘ
ತನ್ನ ವಯಸ್ಸನ್ನು ಲೆಕ್ಕಿಸದ ವೇಗ
ಗೌರಿ ಮನೋಹರಿಯ ಕಂಡೆ
ನಾ ಹೆಣ್ಣಿನ ನಿಜ ರೂಪದೇ
ಯೌವನದ ಮರೆಯಲ್ಲು ರಾಧೆ
ನೀ ಕವಿ ಕಂಡ ಸಂಗೀತವಾದೆ
ತಾಯ್ತನದೆ ನಾ ಕಂಡೆ ಗಾನ
ನನ್ನ ಮನದಲ್ಲಿ ಇನ್ನೆಕೋ ಮೌನ
ತಾಯ್ತನದೆ ನಾ ಕಂಡೆ ಗಾನ
ನನ್ನ ಮನದಲ್ಲಿ ಇನ್ನೆಕೋ ಮೌನ
ನಿನ್ನಂದ ಕಂಡಾಗ ಕಣ್ಣು
ನಾ ಕಲ್ಲಲ್ಲ ಹಣ್ಣಾದ ಹೆಣ್ಣು
ತಪ್ಪೆಂದು ತೆಗಳೋರು ನೂರು
ಹೆಣ್ಣ ಮನಸ್ಸನ್ನು ಅರಿತೋರು ಯಾರು
ಇಂದು ನನ್ ಪಾಡು ನಾ ತಾನೇ ತಿಳಿವೆ
ನನ್ನ ಒಲವಲ್ಲಿ ಮನಸಾರೆ ಬೆರೆವೆ
ಗೌರಿ ಮನೋಹರಿಯ ಕಂಡೆ
ನಾ ಪುರುಷನ ನಿಜ ರೂಪದೇ
ಗಿರಿ ಮೇಲೆ ತಾಕಿದರು ಗಾಳಿ
ನದಿ ಮೇಲೆ ಆಡಿದರು ಗಾಳಿ
ಗಿರಿ ಮೇಲೆ ತಾಕಿದರು ಗಾಳಿ
ಅದು ನದಿ ಮೇಲೆ ಆಡಿದರು ಗಾಳಿ
ವಯಸಲ್ಲಿ ಬಂದಾಗ್ಯೂ ಪ್ರೀತಿ
ಅದು ತಡವಾಗಿ ಬಂದಾಗ್ಯೂ ಪ್ರೀತಿ
ಕಾವ್ಯಕ್ಕೆ ಕೆಲ ನೂರು ಬರಹ
ನಿಜ ಬಂಧಕ್ಕೆ ಮುಖ ಕೋಟಿ ತರಹ
ನಿನ್ನ ಮನಸಾಕ್ಷಿ ನುಡಿದಂತೆ ಕೇಳು
ನೀ ಜನನುಡಿಗೆ ಅಂಜದೆಯೇ ಬಾಳು
ಗೌರಿ ಮನೋಹರಿಯ ಕಂಡೆ
ನಾ ಪುರುಷನ ನಿಜ ರೂಪದೆ
ಗೌರಿ ಮನೋಹರಿಯ ಕಂಡೆ
ನಾ ಹೆಣ್ಣಿನ ನಿಜ ರೂಪದೆ