ಚಿತ್ರ: ಜೇನುಗೂಡು
ಬಾಳೊಂದು ನಂದನ
ಅನುರಾಗ ಬಂಧನ
ಅನುರಾಗ ಬಂಧನ
ಬಾಳೊಂದು ನಂದನ
ಅನುರಾಗ ಬಂಧನ
ಸಹ ಜೀವನ ಸವಿ ಜೇನಿನ ಸದನ
ಬಾಳೊಂದು ನಂದನ
♬♬♬♬♬♬♬♬♬♬♬♬
ಒಂದೊಂದು ಸೌಖ್ಯ ಬಿಂದು
ಜೊತೆಗೂಡಿ ತುಂಬಿದಂದು
ಒಂದೊಂದು ಸೌಖ್ಯ ಬಿಂದು
ಜೊತೆಗೂಡಿ ತುಂಬಿದಂದು
ಬಿರುಗಾಳಿಯೊ ಪರಗಾಳಿಯೊ
ಭರದಿಂದ ಕಾಡಿತು
ಬದುಕಿಂದು ಬಾಡಿತು
ಬಾಳೊಂದು ನಂದನ
ಅನುರಾಗ ಬಂಧನ ಸಹ ಜೀವನ
ಸವಿ ಜೇನಿನ ಸದನ
♬♬♬♬♬♬♬♬♬♬♬♬
ಹಲವಾರು ಮಂದಿಗಾಗಿ
ಕೃಷಿಗೈವ ಕರ್ಮ ಯೋಗಿ
ಹಲವಾರು ಮಂದಿಗಾಗಿ
ಕೃಷಿಗೈವ ಕರ್ಮ ಯೋಗಿ
ಗೃಹ ನಾಯಕ ಹಿತ ಸಾಧಕ
ಹೊರೆ ಘಾಸಿ ಗೊಂಡನೆ
ಪರದೇಸಿಯಾದನೆ
ಬಾಳೊಂದು ನಂದನ
ಅನುರಾಗ ಬಂಧನ
ಸಹ ಜೀವನ ಸವಿ ಜೇನಿನ ಸದನ
ಬಾಳೊಂದು ನಂದನ