Nadedaado Kaamanabille Lyrics in Kannada – Aruna Raaga

PK-Music

ಚಿತ್ರ: ಅರುಣರಾಗ
ಹಾಡಿದವರು: S.P.B
ಸಾಹಿತ್ಯ: ದೊಡ್ಡ ರಂಗೇಗೌಡ
ಸಂಗೀತ:
ಎಂ ರಂಗರಾವ್

ನಡೆದಾಡೊ ಕಾಮನಬಿಲ್ಲೆ
ಹರಿದಾಡೊ ಮುಗಿಲಿನ ಮಿಂಚೆ
ತುಳುಕಾಡೊ ಬಾನಿನ ಚೆಲುವೆ
ಭುವಿಗಿಳಿದ ಹುಣ್ಣಿಮೆ ಹೊನಲೆ
ನೀನೆಂದಿಗೂ ನನ್ನ ಬಾಳಿಗೆ
ಆನಂದದಾ ಅರುಣ ರಾಗ
ಅರುಣ ರಾಗ
ಅರುಣ ರಾಗ
♬♬♬♬♬♬♬♬♬♬♬♬

ಮೀನಿನ ನಯನ ಹವಳದ ತುಟಿಯ
ಪಡೆದಿಹ ರೂಪಸಿ
ಸಂಪಿಗೆ ಮೂಗು ಕಬ್ಬಿನ ಹುಬ್ಬು
ಹೊಂದಿದ ಷೋಡಷಿ

ಆಆಆ ಮೀನಿನ ನಯನ

ಹವಳದ ತುಟಿಯ
ಪಡೆದಿಹ ರೂಪಸಿ
ಸಂಪಿಗೆ ಮೂಗು ಕಬ್ಬಿನ ಹುಬ್ಬು
ಹೊಂದಿದ ಷೋಡಷಿ
ನಿನ್ನ ನೋಡಿ
ಪ್ರೀತಿ ಮೂಡಿ
ಆಸೆ ಚಿಮ್ಮಿ ಹೊಮ್ಮಿದೆ
ನೀನೆಂದಿಗೂ ನನ್ನ ಬಾಳಿಗೆ
ಆನಂದದಾ ಅರುಣ ರಾಗ
ಅರುಣ ರಾಗ
ಅರುಣ ರಾಗ
ನಡೆದಾಡೊ ಕಾಮನಬಿಲ್ಲೆ
ಹರಿದಾಡೊ ಮುಗಿಲಿನ ಮಿಂಚೆ
ತುಳುಕಾಡೊ ಬಾನಿನ ಚೆಲುವೆ
ಭುವಿಗಿಳಿದ ಹುಣ್ಣಿಮೆ ಹೊನಲೆ
ನೀನೆಂದಿಗೂ ನನ್ನ ಬಾಳಿಗೆ
ಆನಂದದಾ ಅರುಣ ರಾಗ
ಅರುಣ ರಾಗ
ಅರುಣ ರಾಗ
♬♬♬♬♬♬♬♬♬♬♬♬

ದಂತದ ಮೈಯ ಮಲ್ಲಿಗೆ ನಗೆಯ
ಅಂದದ ಊರ್ವಶಿ
ಮೇಘದ ಕುರುಳ ಕೋಗಿಲೆ ಕಂಠ
ಗಳಿಸಿದ ಪ್ರೆಯಸಿ
ಆಆಆ ದಂತದ ಮೈಯ

ಮಲ್ಲಿಗೆ ನಗೆಯ
ಅಂದದ ಊರ್ವಶಿ
ಮೇಘದ ಕುರುಳ ಕೋಗಿಲೆ ಕಂಠ
ಗಳಿಸಿದ ಪ್ರೆಯಸಿ
ನಿನ್ನ ರೂಪು
ಕಣ್ಣ ತುಂಬಿ
ಸ್ನೇಹಸಂಗ ಬೇಡಿದೆ
ನೀನೆಂದಿಗೂ ನನ್ನ ಬಾಳಿಗೆ
ಆನಂದದಾ ಅರುಣ ರಾಗ
ಅರುಣ ರಾಗ
ಅರುಣ ರಾಗ
ನಡೆದಾಡೊ ಕಾಮನಬಿಲ್ಲೆ
ಹರಿದಾಡೊ ಮುಗಿಲಿನ ಮಿಂಚೆ
ತುಳುಕಾಡೊ ಬಾನಿನ ಚೆಲುವೆ
ಭುವಿಗಿಳಿದ ಹುಣ್ಣಿಮೆ ಹೊನಲೆ
ನೀನೆಂದಿಗೂ ನನ್ನ ಬಾಳಿಗೆ
ಆನಂದದಾ ಅರುಣ ರಾಗ ಆಹಹ
ಅರುಣ ರಾಗ
ಅರುಣ ರಾಗ

Leave a Reply

Your email address will not be published. Required fields are marked *