Idu Nanna Ninna Premageetha Chinna Lyrics – Premaloka

ಚಿತ್ರ: ಪ್ರೇಮ ಲೋಕ
ಸಂಗೀತ: ಹಂಸಲೇಖ
ಸಾಹಿತ್ಯ: ಹಂಸಲೇಖ
ಗಾಯನ: SPB & S ಜಾನಕಿ

ಇದು ನನ್ನ ನಿನ್ನ ಪ್ರೇಮಗೀತೆ ಚಿನ್ನಾ
ಇದು ಎಷ್ಟು ಸಾರಿ ಹಾಡಿದರು ಚೆನ್ನಾ
ಹೆಣ್ಣು: ಇದು ನಿಲ್ಲಲಾರದೆಂದು
ಕೊನೆಯಾಗಲಾರದೆಂದು
ಪ್ರೇಮಲೋಕದಾಗೀತೆಯು
ಇದು ನನ್ನ ನಿನ್ನ ಪ್ರೇಮಗೀತೆ ಚಿನ್ನಾ
ಇದು ಎಷ್ಟು ಸಾರಿ ಹಾಡಿದರು ಚೆನ್ನಾ
ಇದು ನಿಲ್ಲಲಾರದೆಂದು

ಕೊನೆಯಾಗಲಾರದೆಂದು
ಪ್ರೇಮಲೋಕದಾಗೀತೆಯು
♬♬♬♬♬♬♬♬♬♬♬♬

321
ಕೇಳೊ ಸರದಾರಾ

ಚುಕ್ಕಿಗಳಂತೆ ನಾನು ನೀನು

ಬಾನಿನಲ್ಲಿ ಬಾ
ಕೇಳೊ ಹಮ್ಮೀರಾ

ಹಕ್ಕಿಗಳಂತೆ ನಾನು ನೀನು

ಬಾಳಿನಲ್ಲಿ ಬಾ
ಏಳು ಬಣ್ಣಗಳ ಕಾಮನಬಿಲ್ಲು
ನಮ್ಮದೇನೆ ಪ್ರೇಮ

ತೋಟ ಮಾಡುವಾ
ಅಲ್ಲೊಂದು ಪ್ರೇಮದಾ

ಗೂಡನ್ನ ಕಟ್ಟುವಾ
ನಮ್ಮ ಪ್ರೇಮರಾಗ ಹಾಡುವಾ
ಇದು ನನ್ನ ನಿನ್ನ ಪ್ರೇಮಗೀತೆ ಚಿನ್ನಾ
ಇದು ಎಷ್ಟು ಸಾರಿ ಹಾಡಿದರು ಚೆನ್ನಾ
ಇದು ನಿಲ್ಲಲಾರದೆಂದು
ಕೊನೆಯಾಗಲಾರದೆಂದು
ಪ್ರೇಮಲೋಕದಾ ಗೀತೆಯು
♬♬♬♬♬♬♬♬♬♬♬♬

321
ಕೇಳೇ ಸಿಂಗಾರಿ

ಹೂವಲ್ಲಿ ದುಂಬಿ ಸೇರಿಕೊಳ್ಳೊ

ಹೊತ್ತು ಇದು ಬಾ
ಕೇಳೇ ಬಂಗಾರಿ

ಪ್ರೇಮಿಗಳಲ್ಲಿ ನೀಡಿಕೊಳ್ಳೋ
ಮುತ್ತು ಇದು ಬಾ ಬಾ
ನನ್ನ ನಿನ್ನ ಸ್ನೇಹ ಬಂಧನವಿದು
ಮರೆಯಲಾಗದು

ಅಳಿಸಲಾಗದೆಂದಿಗೂ
ಕೇಳೆನ್ನ ಗೆಳತಿ ಇನ್ನೊಂದು ಸರತಿ
ಜನ್ಮವನೆತ್ತಿದರೂ ನಾವೊಂದೇ

ಇದು ನನ್ನ ನಿನ್ನ ಪ್ರೇಮಗೀತೆ ಚಿನ್ನಾ
ಇದು ಎಷ್ಟು ಸಾರಿ ಹಾಡಿದರು ಚೆನ್ನಾ
ಇದು ನಿಲ್ಲಲಾರದೆಂದು

ಕೊನೆಯಾಗಲಾರದೆಂದು
ಪ್ರೇಮಲೋಕದಾ ಗೀತೆಯು

Leave a Reply

Your email address will not be published. Required fields are marked *