ಸ್ನೇಹಿತರೇ ನಿಮಗೆ ಸ್ವಾಗತ – Snehithare Nimage Swagatha Song Lyrics – Preethi Vatsalya

ಚಿತ್ರ: ಪ್ರೀತಿವಾತ್ಸಲ್ಯ
ಗಾಯಕರು: ಎಸ್.ಪಿ.ಬಾಲು
ಸಂಗೀತ: ರಾಜನ್ನಾಗೇಂದ್ರ


ಸ್ನೇಹಿತರೇ ನಿಮಗೆ ಸ್ವಾಗತ
ನನ್ನೆದೆಯಾ ಪ್ರೀತಿ ಸ್ವಾಗತ
ಎಂದೆಂದು ನೆನಪಿರಲಿ ಸುದಿನ
ಸಂತೋಷದ ಶುಭ ಮಿಲನ
ಎಂದೆಂದು ನೆನಪಿರಲಿ ಸುದಿನ
ಸಂತೋಷದ ಶುಭ ಮಿಲನ
ಸ್ನೇಹಿತರೇ ನಿಮಗೆ ಸ್ವಾಗತ
ನನ್ನೆದೆಯಾ ಪ್ರೀತಿ ಸ್ವಾಗತ
♫♫♫♫♫♫♫♫♫♫♫♫

ದದ್ದಗ ದದ್ದದದ್ದ ತಾರಾರಾರಾರಾರಾ
ದದ್ದಗ ದದ್ದದದ್ದ ತಾರಾರಾರಾರಾರಾ
ದಗದಾ ದಗದಾ ದಗದಾ ದಗದಾ
ರೂರು ರೂರು ರೂರು
ರಸಪೂರ್ಣ ರಂಗಾದ ಸಂಜೆಯಲ್ಲಿ
ಸವಿ ಸ್ನೇಹ ತಂದಥ ವೇಳೆಯಲ್ಲಿ
ನಾ ಹಾಡುವಾ ಹಾಡಿನ
ತಾಳ ಮೇಳ ಸೇರಿ ನಿಮ್ಮ ತೂಗಲೀಗ
ಕ್ಷಣವೊಂದು ಕಣ್ಣೋಟ ಸೇರಿದಾಗ
ಸವಿಮಾತು ತಮ್ಮಲ್ಲೇ ಆಡಿದಾಗ
ಮೌನದಾ ಪಿಸು ಮಾತಿಗೇ
ಸಾಟಿಯಾದ ಯಾವ

ಪ್ರೇಮ ಕಾವ್ಯವಿಲ್ಲ
ಹೃದಯಾ ಹಗುರಾಗಿ ಇರಲಿ
ಪ್ರೀತಿ ವಾತ್ಸಲ್ಯ ನಗಲಿ
ಸ್ನೇಹಿತರೇ ನಿಮಗೆ ಸ್ವಾಗತ
ನನ್ನೆದೆಯಾ ಪ್ರೀತಿ ಸ್ವಾಗತ
ಎಂದೆಂದು ನೆನಪಿರಲಿ ಸುದಿನ
ಸಂತೋಷದ ಶುಭ ಮಿಲನ
ಹೇ ಹಾ ಹೋ

ಎಂದೆಂದು ನೆನಪಿರಲಿ ಸುದಿನ
ಸಂತೋಷದ ಶುಭ ಮಿಲನ
ಸ್ನೇಹಿತರೇ ನಿಮಗೆ ಸ್ವಾಗತ
ನನ್ನೆದೆಯಾ ಪ್ರೀತಿ ಸ್ವಾಗತ
♫♫♫♫♫♫♫♫♫♫♫♫

ತನ್ನಾಸೆ ಮಗನಲ್ಲಿ ತಾಯಿಯ ಪ್ರೀತಿ
ಒಲಿದಂಥ ಪತಿಯಲ್ಲಿ ಪತ್ನಿಯ ಪ್ರೀತಿ
ಒಡ ಹುಟ್ಟದಾ ಸಂಬಂಧವೂ
ತರುವಂಥ ಸವಿಯಾದ

ಸುಮಧುರ ಪ್ರೀತಿ
ಪ್ರಿಯನಲ್ಲಿ ಪ್ರೇಯಸಿಯು

ತೋರುವ ಪ್ರೀತಿ
ನಿಜಸ್ನೇಹ ತಂದಂಥ ನಿರ್ಮಲ ಪ್ರೀತಿ
ಪ್ರೀತಿಯೂ ವಿಶ್ವಾಸವೂ
ಬಾಳಲ್ಲಿ ಇರಲೆಂದು ಶಾಶ್ವತ ರೀತಿ
ಮನಸು ಹಾಯಾಗಿ ಇರಲಿ
ಪ್ರೀತಿ ವಾತ್ಸಲ್ಯ ನಗಲಿ
ಸ್ನೇಹಿತರೇ ನಿಮಗೆ ಸ್ವಾಗತ
ನನ್ನೆದೆಯಾ ಪ್ರೀತಿ ಸ್ವಾಗತ
ಎಂದೆಂದು ನೆನಪಿರಲಿ ಸುದಿನ
ಸಂತೋಷದ ಶುಭ ಮಿಲನ
ಹೇ ಎಂದೆಂದು ನೆನಪಿರಲಿ ಸುದಿನ
ಸಂತೋಷದ ಶುಭ ಮಿಲನ
ಸ್ನೇಹಿತರೇ ನಿಮಗೆ ಸ್ವಾಗತ
ನನ್ನೆದೆಯಾ ಪ್ರೀತಿ ಸ್ವಾಗತ

Leave a Reply

Your email address will not be published. Required fields are marked *