ನಂದಗೋಕುಲವಾಯಿತು – Nanda Gokulavaayithu Song Lyrics – S Janaki

PK-Music

ನಂದಗೋಕುಲವಾಯ್ತು

ಗಾಯಕಿ: ಎಸ್. ಜಾನಕಿ

ಸಂಗೀತ : ಎಂ. ರಂಗರಾವ್

ಗೀತರಚನೆ: ವಿಜಯ ನರಸಿಂಹ

 

ಆಆಆಆಆಆಆಆ

ಆಆಆಆಆಆಆಆ

ಆಆಆಆಆ

ಆಆಆಆಆಆಆಆಆಆಆ

ಆಆಆಆ ಆಆಆಆ


ನಂದಗೋಕುಲವಾಯಿತು
ಆನಂದ ಗೋಕುಲವಾಯಿತು
ನಂದಗೋಕುಲವಾಯಿತು
ಆನಂದ ಗೋಕುಲವಾಯಿತು
ಉಡುಪಿ ಇದು ಶ್ರೀ ಹರಿಯ
ಮನೆಯೇ ಆಯಿತು
ಕನ್ನಡದ ನೆಲವೆಲ್ಲಾ
ಧನ್ಯವಾಯಿತು
ನಂದಗೋಕುಲವಾಯಿತು
ಆನಂದ ಗೋಕುಲವಾಯಿತು
♫♫♫♫♫♫♫♫♫♫♫♫

ಕೀಳುಮೇಲು ಭೇದ ನೀಗಿ
ಕೃಷ್ಣನೇ ಬಂದಾ
ಭಕ್ತಿ ಪರವಶನಾಗಿ
ಕನಕನ ದಿಕ್ಕಿಗೆ ನಿಂದಾ
ಕೀಳುಮೇಲು ಭೇದ ನೀಗಿ
ಕೃಷ್ಣನೇ ಬಂದಾ
ಭಕ್ತಿ ಪರವಶನಾಗಿ
ಕನಕನ ದಿಕ್ಕಿಗೆ ನಿಂದಾ
ತವರು ತೊರೆದು
ಉಡುಪಿಯೇ ಚೆಂದವೆಂದ
ಕರುಣಾಳು ಕೃಷ್ಣನಿಂದ
ಪರಮಾನಂದ
ನಂದಗೋಕುಲವಾಯಿತು
ಆನಂದ ಗೋಕುಲವಾಯಿತು
♫♫♫♫♫♫♫♫♫♫♫♫

ರಾಗ ಸುಧೆಯಾ ಧಾರೆ ಧಾರೆ
ಇಲ್ಲಿ ಚಿಮ್ಮಿದಾ
ರಾಸ ಲೀಲೆಯ ಅಂದವಾ
ಇಲ್ಲಿ ತೋರಿದಾ
ರಾಗ ಸುಧೆಯಾ ಧಾರೆ ಧಾರೆ
ಇಲ್ಲಿ ಚಿಮ್ಮಿದಾ
ರಾಸ ಲೀಲೆಯ ಅಂದವಾ
ಇಲ್ಲಿ ತೋರಿದಾ
ನಾದಬ್ರಹ್ಮ ವೇದದಾ
ಎಲ್ಲೆ ಮೀರಿದಾ
ಗೀತೆಯಿಂದ ಲೋಕಕೇ
ಬೆಳಕ ಬೀರಿದಾ
ನಂದಗೋಕುಲವಾಯಿತು

ಆನಂದ ಗೋಕುಲವಾಯಿತು
ಉಡುಪಿ ಇದು ಶ್ರೀ ಹರಿಯ
ಮನೆಯೇ ಆಯಿತು
ಕನ್ನಡದ ನೆಲವೆಲ್ಲಾ
ಧನ್ಯವಾಯಿತು
ನಂದಗೋಕುಲವಾಯಿತು
ಆನಂದ ಗೋಕುಲವಾಯಿತು

Leave a Reply

Your email address will not be published. Required fields are marked *