ಕಲಿಸು ಗುರುವೆ ಕಲಿಸು – Kalisu Guruve Kalisu Song Lyrics in kannada – Raju Ananthaswamy

PK-Music

ಭಾವಗೀತೆ : ಕಲಿಸು
ಗುರುವೇ
ಆಲ್ಬಮ್: ಕಲಿಸು
ಗುರುವೇ
ಸಾಹಿತ್ಯ: ಎಸ್.
ರಾಮನಾಥ
ಸಂಗೀತ: ರಾಜು
ಅನಂತಸ್ವಾಮಿ
ಗಾಯಕರು: ಮಂಗಳಾ
ರವಿ,
ನಿತಿನ್ ರಾಜಾರಾಮ್
ಶಾಸ್ತ್ರಿ

321

ಕಲಿಸು ಗುರುವೆ ಕಲಿಸು

ಕಲಿಸು ಸದ್ಗುರುವೆ ನೀ ಕಲಿಸು

ಕಲಿಸು ಗುರುವೆ ಕಲಿಸು

ಕಲಿಸು ಸದ್ಗುರುವೆ ನೀ ಕಲಿಸು

ಸುಳ್ಳಿನ ನಡುವೆ

ನಾ ಸತ್ಯವನಾಡಲು ಕಲಿಸು     

ಸುಳ್ಳಿನ ನಡುವೆ

ನಾ ಸತ್ಯವನಾಡಲು ಕಲಿಸು  

ಸ್ವಾರ್ಥದ ನಡುವೆ

ನಿಸ್ವಾರ್ಥಿಯಾಗಲು ಕಲಿಸು  

ಸ್ವಾರ್ಥದ ನಡುವೆ

ನಿಸ್ವಾರ್ಥಿಯಾಗಲು ಕಲಿಸು  

ಅಂಜಿ ನಡೆವರ ನಡುವೆ

ಧೀರನಾಗಲು ಕಲಿಸು  

ಅಂಜಿ ನಡೆವರ ನಡುವೆ

ಧೀರನಾಗಲು ಕಲಿಸು

ಧರೆಯ ದುಷ್ಟರ ನಡುವೆ 

ಜಾಣನಾಗಲು ಕಲಿಸು

ಕಲಿಸು ಗುರುವೆ ಕಲಿಸು

ಕಲಿಸು ಸದ್ಗುರುವೆ ನೀ ಕಲಿಸು

♬♬♬♬♬♬♬♬♬♬♬♬

321

ಬೆವರಿಳಿಸಿ ಗಳಿಸಿದ ಒಂದು ಕಾಸು

ಸಿಕ್ಕ ಹತ್ತಕ್ಕಿಂತ

ಮಿಗಿಲೆಂಬುದ ಕಲಿಸು

ಬೆವರಿಳಿಸಿ ಗಳಿಸಿದ ಒಂದು ಕಾಸು

ಸಿಕ್ಕ ಹತ್ತಕ್ಕಿಂತ

ಮಿಗಿಲೆಂಬುದ ಕಲಿಸು

ಸೋಲು ಗೆಲುವಿನಲಿ 

ಸಮ ಚಿತ್ತದಿಂದಿರಲು

ಸೋಲು ಗೆಲುವಿನಲಿ 

ಸಮ ಚಿತ್ತದಿಂದಿರಲು

ಶತ್ರುಗಳಿಗೂ ಸನ್ಮಿತ್ರ 

ನಾಗಿರಲು ಕಲಿಸು

ಶತ್ರುಗಳಿಗೂ ಸನ್ಮಿತ್ರ 

ನಾಗಿರಲು ಕಲಿಸು

ಹಸಿರು ಮಲೆ ಹೂವಲಿ 

ನಾ ಧ್ಯಾನಿಸುವುದ ಕಲಿಸು

ಜಾಣನಾಗಲು ಕಲಿಸು

ಕಲಿಸು ಗುರುವೆ ಕಲಿಸು

ಕಲಿಸು ಸದ್ಗುರುವೆ ನೀ ಕಲಿಸು

♬♬♬♬♬♬♬♬♬♬♬♬

321

ಜಗವೆಲ್ಲ ಒಂದಾಗಿ ಜರಿದರು ಸರಿಯೆ

ನನ್ನನ್ನೆ ನಾ ನಂಬುವ

ಬಗೆ ನೀ ಕಲಿಸು

ಜಗವೆಲ್ಲ ಒಂದಾಗಿ ಜರಿದರು ಸರಿಯೆ

ನನ್ನನ್ನೆ ನಾ ನಂಬುವ

ಬಗೆ ನೀ ಕಲಿಸು

ಅಳುವಿನಲಿ ಅವಮಾನ 

ಇಲ್ಲವೆಂಬುದು ಕಲಿಸು

ನನ್ನನ್ನೆ ನಾ ನೋಡಿ 

ನಗುವುದನು ಕಲಿಸು

ಮಾನವಿಯತೆಯಲಿ ನಾ 

ಮರುಗುವುದನು ಕಲಿಸು  

ಮಾನವಿಯತೆಯಲಿ ನಾ 

ಮರುಗುವುದನು ಕಲಿಸು  

ಮಾನವೀಯತೆಯಲಿ 

ನಾ ಕರಗುವುದು ಕಲಿಸು

ಜಾಣನಾಗಲು ಕಲಿಸು

ಕಲಿಸು ಗುರುವೆ ಕಲಿಸು

ಕಲಿಸು ಸದ್ಗುರುವೆ ನೀ ಕಲಿಸು

ಕಲಿಸು ಗುರುವೆ ಕಲಿಸು

ಕಲಿಸು ಸದ್ಗುರುವೆ ನೀ ಕಲಿಸು

ಸುಳ್ಳಿನ ನಡುವೆ

ನಾ ಸತ್ಯವನಾಡಲು ಕಲಿಸು     

ಸುಳ್ಳಿನ ನಡುವೆ

ನಾ ಸತ್ಯವನಾಡಲು ಕಲಿಸು  

ಸ್ವಾರ್ಥದ ನಡುವೆ

ನಿಸ್ವಾರ್ಥಿಯಾಗಲು ಕಲಿಸು  

ಸ್ವಾರ್ಥದ ನಡುವೆ

ನಿಸ್ವಾರ್ಥಿಯಾಗಲು ಕಲಿಸು  

ಅಂಜಿ ನಡೆವರ ನಡುವೆ

ಧೀರನಾಗಲು ಕಲಿಸು  

ಅಂಜಿ ನಡೆವರ ನಡುವೆ

ಧೀರನಾಗಲು ಕಲಿಸು

ಧರೆಯ ದುಷ್ಟರ ನಡುವೆ 

ಜಾಣನಾಗಲು ಕಲಿಸು

ಕಲಿಸು ಗುರುವೆ ಕಲಿಸು

ಕಲಿಸು ಸದ್ಗುರುವೆ ನೀ ಕಲಿಸು

ಕಲಿಸು ಗುರುವೆ ಕಲಿಸು

ಕಲಿಸು ಸದ್ಗುರುವೆ ನೀ ಕಲಿಸು

 

 

Leave a Reply

Your email address will not be published. Required fields are marked *